Last Updated:
ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೋಲಿನ ನಡುವೆಯೂ ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ ಆಯುಷ್ ಮ್ಹಾತ್ರೆ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಕಳೆದ ರಾತ್ರಿ (ಏಪ್ರಿಲ್ 20) ನಡೆದ ಪಂದ್ಯದಲ್ಲಿ ಮುಂಬೈ (MI)ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಮಾತ್ರವಲ್ಲ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ. ಆದ್ರೆ, ಈ ಸೋಲಿನ ನಡುವೆಯೂ ಐಪಿಎಲ್‌ನಲ್ಲಿ (IPL) ಚೊಚ್ಚಲ ಪಂದ್ಯ ಆಡಿದ ಆಯುಷ್ ಮ್ಹಾತ್ರೆ (Ayush Mhatre) ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದ್ದಾರೆ.
4 ಬೌಂಡರಿ 2 ಸಿಕ್ಸರ್ ಸಿಡಿಸಿದ ಮ್ಹಾತ್ರೆ
ಆರಂಭದಲ್ಲಿ ಚೆನ್ನೈ ರನ್ ಗಳಿಸಲು ಪರದಾಡುತ್ತಿದ್ದ ಸಂದರ್ಭದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಮ್ಹಾತ್ರೆ, ಮುಂಬೈ ಬೌಲರ್‌ಗಳ ಬೆವರಿಳಿಸಿದರು. ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಕೇವಲ 15 ಎಸೆತಗಳಲ್ಲಿ 32 ರನ್ ಸಿಡಿಸಿದರು. ಈ ವೇಳೆ ಎಂ ಎಸ್ ಧೋನಿ ಅವರು ಮ್ಹಾತ್ರೆ ಬ್ಯಾಟಿಂಗ್ ಅನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಾ ಇದ್ದ ವಿಡಿಯೋ ವೈರಲ್ ಆಗಿದೆ.
Thala Dhoni smiling while Ayush Mhatre hitting 💛 pic.twitter.com/IDlCGSZHgD
— 🎰 (@StanMSD) April 20, 2025
ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಧೋನಿ ರಿಯಾಕ್ಷನ್ ವೈರಲ್
17 ವರ್ಷದ ಆಯುಷ್ ಮ್ಹಾತ್ರೆ ಭಾನುವಾರ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದರು. ರುತುರಾಜ್ ಗಾಯಕ್ವಾಡ್ ಬದಲು ತಂಡದಲ್ಲಿ ಸ್ಥಾನ ಪಡೆದ ಮ್ಹಾತ್ರೆ, ಕೇವಲ 15 ಎಸೆತಗಳಲ್ಲಿ 32 ರನ್ ಗಳಿಸಿದರು. ಈ ವೇಳೆ ಅವರು 4 ಫೋರ್, ಹಾಗೂ 2 ಸಿಕ್ಸರ್‌ಗಳನ್ನು ಬಾರಿಸಿದರು. ಮ್ಹಾತ್ರೆ ಎಂಐ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಿದ್ದಾಗ ಡ್ರೆಸ್ಸಿಂಗ್ ರೂಮಿನಲ್ಲಿದ್ದ ಧೋನಿ ನಗುಮುಖದೊಂದಿಗೆ ಸಂಭ್ರಮಿಸಿದರು.
ಇದನ್ನೂ ಓದಿ: IPL 2025: ಚೆನ್ನೈ ಪ್ಲೇಆಫ್‌ಗೆ ಹೋಗುತ್ತಾ? ಈ ಬಗ್ಗೆ ಧೋನಿ ಶಿಷ್ಯನಿಂದಲೇ ಶಾಕಿಂಗ್ ರಿಯಾಕ್ಷನ್!
ಸಿಎಸ್‌ಕೆ ಪರ ಆಡಿದ ಅತ್ಯಂತ ಕಿರಿಯ ಆಟಗಾರ
17 ವರ್ಷ 278 ದಿನಗಳ ಮ್ಹಾತ್ರೆ ಸಿಎಸ್‌ಕೆ ತಂಡದ ಪರ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 2008 ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 18 ವರ್ಷ 139 ದಿನ ವಯಸ್ಸಿನ ಅಭಿನವ್ ಮುಕುಂದ್ ಪಾದಾರ್ಪಣೆ ಮಾಡಿದ್ದು ಈ ಹಿಂದಿನ ದಾಖಲೆಯಾಗಿತ್ತು.
ಮುಂಬೈ ಇಂಡಿಯನ್ಸ್ ತವರಿನಲ್ಲಿ ವಾಂಖೆಡೆ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 177 ರನ್ಗಲ ಗುರಿಯನ್ನ ಮುಂಬೈ ಇಂಡಿಯನ್ಸ್ ಕೇವಲ ಒಂದು ವಿಕೆಟ್ ಕಳೆದುಕೊಂಡು ಸುಲಭವಾಗಿ ಜಯ ಸಾಧಿಸಿತು.
ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಸಿಡಿಸಿದ ಅರ್ಧಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ಇನ್ನು 26 ಎಸೆತಗಳಿರುವಂತೆಯೇ ಜಯ ಸಾಧಿಸಿತು. ಇದು ಮುಂಬೈ ಇಂಡಿಯನ್ಸ್ಗೆ 4ನೇ ಗೆಲುವಾದರೆ, ಚೆನ್ನೈ ಸೂಪರ್ ಕಿಂಗ್ಸ್ಗೆ 6ನೇ ಸೋಲಾಗಿದೆ. ಇನ್ನು ಮುಂಬೈ ಆಡಿದ 8 ಪಂದ್ಯಗಳಲ್ಲಿ 4ನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.
April 21, 2025 5:18 PM IST