ಅಕ್ಷತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ರಾತ್ರಿ ಫೈನಲ್ ಪಂದ್ಯದ ಆ ಝಲಕ್‌ಗಳನ್ನು ಅನೇಕ ಫೋಟೋಗಳ ಮುಖಾಂತರ ಹಂಚಿಕೊಂಡಿದ್ದಾರೆ.
ಆರಂಭಿಕ ಫ್ರೇಮ್‌ನಲ್ಲಿ ಅವರು ತಮ್ಮ ಪತಿಯೊಂದಿಗೆ ಮೈದಾನದಲ್ಲಿ ಪೋಸ್ ನೀಡಿರುವುದನ್ನು ನಾವು ನೋಡಬಹುದು. ಉದ್ಯಮಿ ಮಹಿಳೆ ಕೆಂಪು ಬಣ್ಣದ ಉಡುಪಿನಲ್ಲಿ ನೋಡುಗರನ್ನು ಬೆರಗುಗೊಳಿಸಿದರು, ಇದಕ್ಕೆ ಸರಿ ಹೊಂದುವಂತೆ ಪತಿ ರಿಷಿ ಸುನಕ್ ಅವರು ಸಹ ನೇವಿ ಬ್ಲೂ ಸೂಟ್‌ನಲ್ಲಿ ಸೂಪರ್ ಆಗಿ ಕಂಡರು.
ರಿಷಿ ಮತ್ತು ಅಕ್ಷತಾ ಇಬ್ಬರು ಆರ್‌ಸಿಬಿ ತಂಡಕ್ಕೆ ಸಪೋರ್ಟ್ ಮಾಡಿದ್ರು
ಇದರ ನಂತರ, ಭಾರತದಲ್ಲಿ ಅಕ್ಷತಾ ಅವರ ತವರು ನಗರಿ ಆರ್‌ಸಿಬಿಗಾಗಿ ದಂಪತಿಗಳು ಹುರಿದುಂಬಿಸುತ್ತಿರುವ ವೀಡಿಯೋಗಳು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅವರು ಹಂಚಿಕೊಂಡಿದ್ದಾರೆ.
ಆರ್‌ಸಿಬಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಅಕ್ಷತಾ ಮತ್ತು ರಿಷಿ ಸುನಕ್ ಪೋಸ್ ನೀಡುತ್ತಿರುವ ಒಂದು ಫೋಟೋ ಸಹ ಸಿಕ್ಕಾಪಟ್ಟೆ ಮೆಚ್ಚುಗೆ ಗಳಿಸಿದೆ.
ಈ ಫೋಟೋಗಳ ಶೀರ್ಷಿಕೆಯಲ್ಲಿ, ಅಕ್ಷತಾ ‘ಎಂತಹ ರಾತ್ರಿ ಅದು, ಎಂತಹ ಪಂದ್ಯ ಅದು, ಬೆಂಗಳೂರಿನ ಜನರಿಗೆ ಎಂತಹ ಕ್ಷಣ. ಅಹಮದಾಬಾದ್‌ನಲ್ಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇತಿಹಾಸ ನಿರ್ಮಿಸುವುದನ್ನು ನೋಡುವುದು ನಿಜವಾಗಿಯೂ ವಿಶೇಷವಾಗಿತ್ತು,’ ಅಂತ ಬರೆದಿದ್ದಾರೆ.
‘ಮೈದಾನದಲ್ಲಿ ಪಂದ್ಯ ಮುಗಿದ ನಂತರ ಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ ಕ್ಷಣದಿಂದ ಹಿಡಿದು ಬೆಂಗಳೂರಿನಾದ್ಯಂತ ಸಂಭ್ರಮ, ಅನೇಕ ವರ್ಷಗಳವರೆಗೆ ಕಪ್ ಗೆಲ್ಲುವ ಆಸೆಯಿಂದ ಆಡಿದ ತಂಡದ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿತ್ತು ಮತ್ತು ತಂಡಕ್ಕೆ ಬೆಂಬಲಿಸಿದ ನಮಗೆಲ್ಲಾ ಇದು ತುಂಬಾನೇ ಅರ್ಥಪೂರ್ಣವಾದ ಕ್ಷಣವಾಗಿತ್ತು. ಈ ಅದ್ಭುತ ತಂಡ ಮತ್ತು ನಾನು ಬೆಳೆದ ನಗರದ ಬಗ್ಗೆ ತುಂಬಾನೇ ಹೆಮ್ಮೆಯಿದೆ. ಈ ಸಲ ಕಪ್ ನಮ್ದು,’ ಅಂತ ಸಹ ಬರೆದಿದ್ದಾರೆ.
ಫೈನಲ್ ಪಂದ್ಯದ ರಾತ್ರಿ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡ ರಿಷಿ ಸುನಕ್
ರಿಷಿ ಸುನಕ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಿಗ್ ನೈಟ್ ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಯುಕೆ ಮಾಜಿ ಪ್ರಧಾನಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ, ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿಯನ್ನು ಹಿನ್ನೆಲೆಯಲ್ಲಿ ಹೊತ್ತೊಯ್ಯುತ್ತಿರುವುದು ಕಂಡು ಬಂತು.
ರಿಷಿ ವಿರಾಟ್ ಕೊಹ್ಲಿ ಅವರನ್ನು ತಬ್ಬಿಕೊಳ್ಳುವುದು, ಎಬಿ ಡಿವಿಲಿಯರ್ಸ್ ಮತ್ತು ರವಿಶಾಸ್ತ್ರಿ ಅವರ ಜೊತೆಗೆ ಸಂವಹನ ನಡೆಸುತ್ತಿರುವುದು ಮತ್ತು ಕ್ರಿಸ್ ಗೇಲ್, ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಆಂಡಿ ಫ್ಲವರ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿರುವುದನ್ನು ನಾವು ನೋಡಬಹುದು. ‘ಎಂತಹ ರಾತ್ರಿ!! ಈ ಸಲ ಕಪ್ ನಮ್ದು’ ಎಂಬ ಶೀರ್ಷಿಕೆಯನ್ನು ಇವರು ನೀಡಿದ್ದಾರೆ.
2008 ರಲ್ಲಿ ಲೀಗ್ ಆರಂಭವಾದಾಗಿನಿಂದ ಆರ್‌ಸಿಬಿ ಈ ಕಪ್ ಅನ್ನು ಗೆಲ್ಲಲು ಪರಿಶ್ರಮ ಪಟ್ಟಿದೆ, ಆದರೆ ಈ ಬಾರಿ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಒಟ್ಟು 190/9 ಸ್ಕೋರ್ ಗಳಿಸಿತು. ನಂತರ ಅವರು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು, ಪಂಜಾಬ್ ಕಿಂಗ್ಸ್ ಅನ್ನು 184/7 ಕ್ಕೆ ನಿರ್ಬಂಧಿಸಿದರು ಮತ್ತು ಆರು ರನ್‌ಗಳ ರೋಮಾಂಚಕ ಗೆಲುವು ಸಾಧಿಸಿದರು.
June 05, 2025 4:33 PM IST