Virat Kohli vs KL Rahul: ಕೆಎಲ್ ರಾಹುಲ್ ಎದುರು ಕೊಹ್ಲಿ ಕಾಂತಾರ ಸೆಲೆಬ್ರೇಷನ್; ಬಿದ್ದು ಬಿದ್ದು ನಕ್ಕ ಕರ್ನಾಟಕದ ಆಟಗಾರರು! : KL Rahul and Virat Kohli Viral Video about Kantara Movie RCB IPL 2025 Top Spot with Stunning Win

Virat Kohli vs KL Rahul: ಕೆಎಲ್ ರಾಹುಲ್ ಎದುರು ಕೊಹ್ಲಿ ಕಾಂತಾರ ಸೆಲೆಬ್ರೇಷನ್; ಬಿದ್ದು ಬಿದ್ದು ನಕ್ಕ ಕರ್ನಾಟಕದ ಆಟಗಾರರು! : KL Rahul and Virat Kohli Viral Video about Kantara Movie RCB IPL 2025 Top Spot with Stunning Win

Last Updated:

ಆರ್‌ಸಿಬಿ ಐಪಿಎಲ್ 2025ರ ರೋಚಕ ಪಂದ್ಯದಲ್ಲಿ ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳಿಂದ ಗೆದ್ದು ಅಗ್ರಸ್ಥಾನಕ್ಕೇರಿತು. ಕೃನಾಲ್ ಪಾಂಡ್ಯ 73* ರನ್, ವಿರಾಟ್ ಕೊಹ್ಲಿ 51 ರನ್, ಭುವನೇಶ್ವರ್ ಕುಮಾರ್ 3/33 ಪಡೆದುಕೊಂಡು ಮಿಂಚಿದರು.

ವೈರಲ್ ವಿಡಿಯೋ ಸ್ಕ್ರೀನ್ ಶಾಟ್ (ವಿರಾಟ್ ಕೊಹ್ಲಿ, ಕೆಎಲ್ ರಾಹುಲ್)ವೈರಲ್ ವಿಡಿಯೋ ಸ್ಕ್ರೀನ್ ಶಾಟ್ (ವಿರಾಟ್ ಕೊಹ್ಲಿ, ಕೆಎಲ್ ರಾಹುಲ್)
ವೈರಲ್ ವಿಡಿಯೋ ಸ್ಕ್ರೀನ್ ಶಾಟ್ (ವಿರಾಟ್ ಕೊಹ್ಲಿ, ಕೆಎಲ್ ರಾಹುಲ್)

ಐಪಿಎಲ್ 2025ರ (IPL 2025) ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru ) (ಆರ್‌ಸಿಬಿ) ತಂಡವು ದಿಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ (Arun Jaitley Stadium) ಭಾನುವಾರ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋತಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಐಪಿಎಲ್ 2025ರ (IPL Point Table) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಟಾಸ್ ಗೆದ್ದ ಆರ್‌ಸಿಬಿ ಮೊದಲು ದಿಲ್ಲಿಗೆ ಬ್ಯಾಟಿಂಗ್‌ಗೆ ಅವಕಾಶ ನೀಡಿತು. ದಿಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 162 ರನ್ ಗಳಿಸಿತು. ಕೆ.ಎಲ್. ರಾಹುಲ್ (41) ಮತ್ತು ಟ್ರಿಸ್ಟನ್ ಸ್ಟಬ್ಸ್ (34) ಉತ್ತಮ ಆಟವಾಡಿದರು. ಆರ್‌ಸಿಬಿ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ (3/33), ಜೋಶ್ ಹ್ಯಾಜಲ್‌ವುಡ್ (2/36), ಯಶ್ ದಯಾಳ್ ಮತ್ತು ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

163 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲಿ ಕೊಂಚ ತಡಕಾಡಿತು. ಜಾಕಬ್ ಬೆಥೆಲ್ (12), ದೇವದತ್ ಪಡಿಕ್ಕಲ್ (0) ಮತ್ತು ರಜತ್ ಪಾಟಿದಾರ್ (6) ಶೀಘ್ರವಾಗಿ ಔಟಾದರು. ಆದರೆ, ವಿರಾಟ್ ಕೊಹ್ಲಿ (51) ಮತ್ತು ಕೃನಾಲ್ ಪಾಂಡ್ಯ (73* ನಾಟೌಟ್) ಅರ್ಧಶತಕಗಳೊಂದಿಗೆ 119 ರನ್‌ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆರ್​​ಸಿಬಿ ಪರ ಟಿಮ್ ಡೇವಿಡ್ (19* ರನ್, 5 ಎಸೆತ) ಕೊನೆಯಲ್ಲಿ ಆಕರ್ಷಕ ಫಿನಿಶ್ ನೀಡಿದರು. ಆರ್‌ಸಿಬಿ 18.3 ಓವರ್‌ಗಳಲ್ಲಿ 4 ವಿಕೆಟ್‌ಗೆ 165 ರನ್ ಗಳಿಸಿ ಗೆಲುವು ದಾಖಲಿಸಿತು.

ಕಾಂತಾರ ಆಚರಣೆ

ಇನ್ನು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ಬಾರಿ ದೆಹಲಿ ತಂಡ ಗೆದ್ದಾಗ, ಕೆ.ಎಲ್. ರಾಹುಲ್ ಕಾಂತಾರ ಸಿನಿಮಾದ ದೃಶ್ಯವನ್ನು ಅನುಕರಿಸಿ, “ಇದು ನನ್ನ ಅಡ್ಡಾ” ಎಂದು ಆರ್‌ಸಿಬಿಗೆ ಟಾಂಟ್ ನೀಡಿದ್ದರು. ಈ ಬಾರಿ, ಗೆಲುವಿನ ನಂತರ ವಿರಾಟ್ ಕೊಹ್ಲಿ ರಾಹುಲ್‌ರ ಕಾಂತಾರ ಆಚರಣೆಯನ್ನು ತಮಾಷೆಯಾಗಿ ಟೀಕಿಸಿದರು.

ಕೊಹ್ಲಿ ಅವರು ನಗು ನಗುತ್ತಲೇ ನೀಡಿದ್ದ ಟಾಂಗ್ ಅನ್ನು ನಗುತ್ತಲೇ ಸ್ವೀಕರಿಸಿದ ಕೆಎಲ್ ರಾಹುಲ್, ಕೊಹ್ಲಿ ಅವರನ್ನು ತಬ್ಬಿಕೊಂಡು ಸ್ನೇಹದ ವಾತಾವರಣ ಸೃಷ್ಟಿಸಿದ್ದರು. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ಕರ್ನಾಟಕದ ಆಟಗಾರರಾದ ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಬಿದ್ದು ಬಿದ್ದು ನಕ್ಕು ರಾಹುಲ್ ಕಾಲೆಳೆದರು.

ಇದನ್ನೂ ಓದಿ: RCB vs DC: ಪಂದ್ಯದ ನಡುವೆ ರಾಹುಲ್-ಕೊಹ್ಲಿ ನಡುವೆ ಕಿರಿಕ್! ಮ್ಯಾಚ್ ಮಧ್ಯೆ ವಿರಾಟ್ ಕೋಪಕ್ಕೆ ಕಾರಣ ಏನು?

ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಟಾಪ್

ದೆಹಲಿ ವಿರುದ್ಧದ ಗೆಲುವು ಆರ್‌ಸಿಬಿಗೆ ಏಳನೇ ಗೆಲುವನ್ನು ತಂದುಕೊಟ್ಟಿತು, ಜೊತೆಗೆ ದಿಲ್ಲಿಯಲ್ಲಿ 100% ಗೆಲುವಿನ ದಾಖಲೆಯನ್ನು ಮುಂದುವರಿಸಿತು. ಕೃನಾಲ್ ಪಾಂಡ್ಯ ಅವರ ಆಲ್​​​ರೌಂಡರ್ ಪ್ರದರ್ಶನ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿತು.