Last Updated:
WCL ನ ಮುಖ್ಯ ಪ್ರಾಯೋಜಕರಾದ EaseMyTrip, ಪಾಕಿಸ್ತಾನ ತಂಡದ ಒಳಗೊಂಡ ಯಾವುದೇ ಪಂದ್ಯಕ್ಕೆ ತಾವು ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ. “ನಾವು ಭಾರತ ಚಾಂಪಿಯನ್ಸ್‌ಗೆ ಬೆಂಬಲ ನೀಡುತ್ತೇವೆ, ಆದರೆ ಪಾಕಿಸ್ತಾನ ಒಳಗೊಂಡ ಪಂದ್ಯಗಳಿಗೆ ಯಾವುದೇ ಬೆಂಬಲ ಇಲ್ಲ. ಭಾರತ ನಮಗೆ ಮೊದಲು” ಎಂದು ಅವರು ಹೇಳಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) 2025ರಲ್ಲಿ ಜುಲೈ 20ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಬೇಕಿದ್ದ ಭಾರತ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahaglam Attack) ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ನಂತರ ಪಾಕಿಸ್ತಾನ (India vs Pakistan) ವಿರುದ್ಧ ಯಾವುದೇ ಕ್ರಿಕೆಟ್ ಆಡದಿರಲು ಬಿಸಿಸಿಐ ನಿರ್ಧರಿಸಲಾಗಿದೆ. ಆದರೆ ಭಾರತೀಯ ಆಟಗಾರರು ಲೆಜೆಂಡ್ಸ್ ಲೀಗ್ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲೊರಟಿರೋದನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಕೆಲವು ಆಟಗಾರರು ತಾವೂ ಪಾಕಿಸ್ತಾನದ ವಿರುದ್ಧ ಆಡುವುದಿಲ್ಲ ಎಂದು ಹಿಂದೆ ಸರಿದಿದ್ದರು.
ಶಿಖರ್ ಧವನ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಯೂಸುಫ್ ಪಠಾಣ್, ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಭಾರತದ ಮಾಜಿ ಆಟಗಾರರು ಈ ಪಂದ್ಯದಲ್ಲಿ ಭಾಗವಹಿಸಲು ನಿರಾಕರಿಸಿದರು. ಶಿಖರ್ ಧವನ್ ಮೇ 11 ರಂದೇ WCL ಆಯೋಜಕರಿಗೆ ತಾವು ಪಾಕಿಸ್ತಾನದ ವಿರುದ್ಧ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. “ನನ್ನ ದೇಶ ನನಗೆ ಎಲ್ಲಾ, ದೇಶಕ್ಕಿಂತ ದೊಡ್ಡದು ಏನೂ ಇಲ್ಲ,” ಎಂದು ಧವನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
WCL ನ ಮುಖ್ಯ ಪ್ರಾಯೋಜಕರಾದ EaseMyTrip, ಪಾಕಿಸ್ತಾನ ತಂಡದ ಒಳಗೊಂಡ ಯಾವುದೇ ಪಂದ್ಯಕ್ಕೆ ತಾವು ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ. “ನಾವು ಭಾರತ ಚಾಂಪಿಯನ್ಸ್‌ಗೆ ಬೆಂಬಲ ನೀಡುತ್ತೇವೆ, ಆದರೆ ಪಾಕಿಸ್ತಾನ ಒಳಗೊಂಡ ಪಂದ್ಯಗಳಿಗೆ ಯಾವುದೇ ಬೆಂಬಲ ಇಲ್ಲ. ಭಾರತ ನಮಗೆ ಮೊದಲು” ಎಂದು ಅವರು ಹೇಳಿದ್ದಾರೆ.
WCL ಆಯೋಜಕರು ತಮ್ಮ X ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿ, ಪಂದ್ಯವನ್ನು ರದ್ದುಗೊಳಿಸಿದ್ದಾರೆ. “ಹಾಕಿ ಮತ್ತು ವಾಲಿಬಾಲ್‌ನಂತಹ ಕ್ರೀಡೆಗಳಲ್ಲಿ ಭಾರತ-ಪಾಕಿಸ್ತಾನ ತಂಡಗಳು ಆಡಿರುವುದರಿಂದ, ಕ್ರಿಕೆಟ್‌ನಲ್ಲೂ ಸಂತೋಷದ ಕ್ಷಣಗಳನ್ನು ಸೃಷ್ಟಿಸಬಹುದು ಎಂದು ಭಾವಿಸಿದೆವು. ಆದರೆ, ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸುತ್ತೇವೆ,” ಎಂದು ಆಯೋಜಕರು ತಿಳಿಸಿದ್ದಾರೆ.
ಈ ಪಂದ್ಯದಲ್ಲಿ ಯುವರಾಜ್ ಸಿಂಗ್, ಶಿಖರ್ ಧವನ್, ಹರ್ಭಜನ್ ಸಿಂಗ್ ಮುಂತಾದ ಭಾರತದ ದಿಗ್ಗಜ ಆಟಗಾರರು ಶಾಹಿದ್ ಆಫ್ರಿದಿ, ಮೊಹಮ್ಮದ್ ಹಫೀಜ್‌ರಂತಹ ಪಾಕಿಸ್ತಾನದ ಆಟಗಾರರ ವಿರುದ್ಧ ಆಡಬೇಕಿತ್ತು. ಆದರೆ, ರಾಜಕೀಯ ಒತ್ತಡ ಮತ್ತು ಜನರ ಆಕ್ರೋಶದಿಂದ ಪಂದ್ಯ ರದ್ದಾಯಿತು. ಕಳೆದ ವರ್ಷ WCL ನಲ್ಲಿ ಭಾರತ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಟ್ರೋಫಿ ಗೆದ್ದಿತ್ತು.
July 20, 2025 10:13 PM IST