ನಿಮಗೂ ನಿಮ್ಮ ಆಧಾರ್ ಕಾರ್ಡ್ನಲ್ಲಿರೋ ಫೋಟೋದ ಬಗ್ಗೆ ಅಸಮಾಧಾನ ಇದ್ದರೆ, ಬದಲಾಯಿಸಲು ಅವಕಾಶ ಇದೆ ನೋಡಿ.
ಆಧಾರ್ ಕಾರ್ಡ್ನಲ್ಲಿ ಫೋಟೋ ಅಪ್ಡೇಟ್ ಮಾಡಬೇಕಾ?
ಆಧಾರ್ ಕಾರ್ಡ್ ಎಲ್ಲೆಡೆ ಬಳಸಲಾಗುವ ಸರ್ಕಾರಿ ದಾಖಲೆಯಾಗಿರೋ ಕಾರಣ ಅದನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡುತ್ತಿರಬೇಕು. ಬ್ಯಾಂಕ್ಗಳು ಮತ್ತು ಪಾಸ್ಪೋರ್ಟ್ಗಳಿಂದ ಶಾಲಾ ಪ್ರವೇಶ ಮತ್ತು ಉದ್ಯೋಗ ಪರಿಶೀಲನೆಗಳವರೆಗೆ ಆಧಾರ್ ಕಾರ್ಡ್ ಅವಶ್ಯಕ. ಹೀಗಾಗಿ ಅದರಲ್ಲಿನ ಡಿಟೇಲ್ಸ್, ಫೋಟೋಗಳನ್ನು ನವೀಕರಣಗೊಳಿಸುವ ಅವಕಾಶವನ್ನು ಸರ್ಕಾರ ನಿಮಗೆ ಒದಗಿಸುತ್ತದೆ.
ಆಧಾರ್ನಲ್ಲಿ ಫೋಟೋ ಬದಲಾಯಿಸುವ ಕೆಲಸ ತುಂಬಾ ಕ್ಲಿಷ್ಟ ಅಂತಾ ಹಲವರು ಭಾವಿಸಿದ್ದಾರೆ. ಆದರೆ ಗೊತ್ತಾ ಈ ಕೆಲಸ ಸಖತ್ ಸುಲಭ. ನೀವು ನಿಮ್ಮ ಆಧಾರ್ ಫೋಟೋವನ್ನು ಸಂಪೂರ್ಣವಾಗಿ ಆನ್ಲೈನ್ನಲ್ಲಿ ಬದಲಾಯಿಸಲು ಸಾಧ್ಯವಾಗದಿದ್ದರೂ, ಪ್ರಕ್ರಿಯೆಯು ತುಂಬಾ ಸರಳವಾಗಿದೆ ಮತ್ತು ಹೆಚ್ಚಿನ ಸಮಯವನ್ನು ಪ್ರಕ್ರಿಯೆ ತೆಗೆದುಕೊಳ್ಳುವುದಿಲ್ಲ.
ಆಧಾರ್ ಕಾರ್ಡ್ ಫೋಟೋವನ್ನು ಸುಲಭವಾಗಿ ಬದಲಾಯಿಸೋದು ಹೇಗೆ?
-UIDAI ವೆಬ್ಸೈಟ್ಗೆ ಭೇಟಿ ನೀಡಿ: uidai.gov.in ಗೆ ಹೋಗಿ ಆಧಾರ್ ದಾಖಲಾತಿ/ತಿದ್ದುಪಡಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ.
-ಫಾರ್ಮ್ ಅನ್ನು ಭರ್ತಿ ಮಾಡಿ: ನಿಮ್ಮ ಸರಿಯಾದ ವಿವರಗಳನ್ನು ನಮೂದಿಸಿ ಮತ್ತು ಭರ್ತಿ ಮಾಡಿದ ಫಾರ್ಮ್ನ ಪ್ರಿಂಟ್ ತೆಗೆದುಕೊಳ್ಳಿ.
-ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ: ಹತ್ತಿರದ ಆಧಾರ್ ದಾಖಲಾತಿ ಕೇಂದ್ರದಲ್ಲಿ ಫಾರ್ಮ್ ಅನ್ನು ಸಲ್ಲಿಸಿ.
-ಬಯೋಮೆಟ್ರಿಕ್ ಪರಿಶೀಲನೆ: ಕಾರ್ಯನಿರ್ವಾಹಕರು ಬಯೋಮೆಟ್ರಿಕ್ಸ್ ಬಳಸಿ ನಿಮ್ಮ ಗುರುತನ್ನು ಪರಿಶೀಲಿಸುತ್ತಾರೆ.
-ಹೊಸ ಫೋಟೋ ಕ್ಲಿಕ್ ಮಾಡಿ: ಸ್ಥಳದಲ್ಲೇ ಹೊಸ ಛಾಯಾಚಿತ್ರವನ್ನು ತೆಗೆದುಕೊಳ್ಳಲಾಗುತ್ತದೆ.
-ಶುಲ್ಕವನ್ನು ಪಾವತಿಸಿ: ನವೀಕರಣಕ್ಕಾಗಿ ನೀವು ರೂ 100 (ಜೊತೆಗೆ GST) ಪಾವತಿಸಬೇಕಾಗುತ್ತದೆ.
-ಸ್ಲಿಪ್ ಅನ್ನು ಸಂಗ್ರಹಿಸಿ: ನೀವು URN (ಅಪ್ಡೇಟ್ ವಿನಂತಿ ಸಂಖ್ಯೆ) ನೊಂದಿಗೆ ಸ್ವೀಕೃತಿ ಸ್ಲಿಪ್ ಅನ್ನು ಸ್ವೀಕರಿಸುತ್ತೀರಿ.
ನೀವು URN ಬಳಸಿಕೊಂಡು UIDAI ವೆಬ್ಸೈಟ್ನಲ್ಲಿ ನಿಮ್ಮ ಫೋಟೋ ನವೀಕರಣ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ನವೀಕರಣವು 90 ದಿನಗಳವರೆಗೆ ತೆಗೆದುಕೊಳ್ಳಬಹುದು, ಅದರ ನಂತರ ನೀವು ನಿಮ್ಮ ನವೀಕರಿಸಿದ ಇ-ಆಧಾರ್ ಅನ್ನು ಡೌನ್ಲೋಡ್ ಮಾಡಬಹುದು ಅಥವಾ ಮರುಮುದ್ರಣವನ್ನು ಪಡೆಯಬಹುದು.
ಈ ಸಿಂಪಲ್ ವಿಧಾನಗಳ ನಿಮ್ಮ ಆಧಾರ್ ಫೋಟೋವನ್ನು ನವೀಕರಿಸಬಹುದು. ನಿಮ್ಮ ಆಧಾರ್ನಲ್ಲಿ ಫೋಟೋ ಚೆನ್ನಾಗಿ ಇಲ್ಲದಿದ್ದರೆ ನವೀಕರಣ ಮಾಡುವ ಮೂಲಕ ಯಾವುದೇ ಮುಜುಗರ ಇಲ್ಲದೇ ಈ ಅಗತ್ಯ ದಾಖಲೆಯನ್ನು ಬಳಸಬಹುದು.
ಆಧಾರ್ ಕಾರ್ಡ್ ಅಪ್ಡೇಟ್
10 ವರ್ಷಗಳ ಹಿಂದೆ ಮಾಡಿಸಿದ್ದ ಆಧಾರ್ ಕಾರ್ಡ್ ನಿಮ್ಮದಾಗಿದ್ದರೆ ಇದನ್ನು ಸಹ ಮರುನವೀಕರಣ ಮಾಡಿಸಬೇಕಾಗುತ್ತದೆ. ಗುರುತಿನ ಪುರಾವೆ ಮತ್ತು ವಿಳಾಸ ದಾಖಲೆಗಳ ಪುರಾವೆಗಳನ್ನು ನೀಡಿ ಆಧಾರ್ ನ್ನು ಮರು ನವೀಕರಣ ಮಾಡಿಸಬೇಕಾಗುತ್ತದೆ.
ವಿವಿಧ ಸೇವೆಗಳ ಜೊತೆಗೆ, ವ್ಯಕ್ತಿಯ ಗುರುತಿನ ಪರಿಶೀಲನೆಗೆ ಆಧಾರ್ ಅಗತ್ಯವಿದೆ. ಹೀಗಾಗಿ, ನಿಮ್ಮ ಛಾಯಾಚಿತ್ರ, ಬಯೋಮೆಟ್ರಿಕ್ಸ್ ಮತ್ತು ಇತರವುಗಳನ್ನು ಒಳಗೊಂಡಂತೆ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಯಾವಾಗಲೂ ನವೀಕರಿಸಬೇಕು.
May 22, 2025 11:07 PM IST