Last Updated:
ಈ ಮಧ್ಯೆ ಘಿಬ್ಲಿ ಸ್ಟೈಲ್ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಹೊಸ ರೀತಿಯ ಫೋಟೋಗಳಿಗೆ ಜನ ಫಿದಾ ಆಗಿದ್ದು, ಎಲ್ಲರೂ ತಮ್ಮ ಫೋಟೋಗಳನ್ನು ಇದರಲ್ಲಿ ಕ್ರಿಯೆಟ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ (Social Media) ಯಾವಾಗ ಏನು ವೈರಲ್ (Viral) ಆಗುತ್ತೆ ಅನ್ನೋದನ್ನ ಹೇಳುವುದು ಈಗ ತುಂಬಾ ಕಷ್ಟ. ಈ ಮಧ್ಯೆ ಘಿಬ್ಲಿ ಸ್ಟೈಲ್ ಫೋಟೋಗಳು (Ghibli Style Photos) ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಹೊಸ ರೀತಿಯ ಫೋಟೋಗಳಿಗೆ (Photo) ಜನ ಫಿದಾ ಆಗಿದ್ದು, ಎಲ್ಲರೂ ತಮ್ಮ ಫೋಟೋಗಳನ್ನು ಇದರಲ್ಲಿ ಕ್ರಿಯೆಟ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಬ್ರೈಟ್ ಮತ್ತು ಕಾರ್ಟೂನ್ ತರಹದ 3D ಡಿಜಿಟಲ್ ಫೋಟೋಗಳು Instagram ಮತ್ತು X ನಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಇವುಗಳನ್ನು Google ನ ಹೊಸ AI ಪರಿಕರವಾದ ಜೆಮಿನಿ 2.5 ಫ್ಲ್ಯಾಶ್ ಇಮೇಜ್ನೊಂದಿಗೆ ರಚಿಸಲಾಗುತ್ತಿದೆ.
ಇನ್ನೂ ನೆಟ್ಟಿಗರು ಇದಕ್ಕೆ ‘ನ್ಯಾನೋ ಬನಾನಾ’ ಎಂದು ಹಾಸ್ಯಮಯವಾಗಿ ಹೆಸರಿಟ್ಟಿದ್ದಾರೆ. ಇದರಲ್ಲಿ ಸಾಮಾನ್ಯ ಜನರು ತಮ್ಮ ಸಾಕುಪ್ರಾಣಿಗಳೊಂದಿಗಿನ ಫೋಟೋಗಳನ್ನು ಮತ್ತು ನೆಚ್ಚಿನ ಸೆಲೆಬ್ರಿಟಿಗಳು, ರಾಜಕಾರಣಿಗಳ ಚಿತ್ರಗಳನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಹೊಸ ‘ನ್ಯಾನೋ ಬನಾನಾ’ ಟ್ರೆಂಡ್ ತುಂಬಾ ವೇಗವಾಗಿ ವೈರಲ್ ಆಗಿದೆ. ಏಕೆಂದರೆ ಈ ಫೋಟೋಗಳನ್ನು ಕ್ರಿಯೆಟ್ ಮಾಡುವುದು ತುಂಬಾ ಸುಲಭವಾಗಿದ್ದು, ನೋಡಲು ಸುಂದರವಾಗಿ ಕಾಣಿಸುತ್ತದೆ. ಗೂಗಲ್ ಜೆಮಿನಿ 2.5 ಫ್ಲ್ಯಾಶ್ ಇಮೇಜ್ ಅನ್ನು ಸ್ಟುಡಿಯೋಗೆ ಹೋಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಯಾರು ಬೇಕಾದರೂ ತುಂಬಾ ಸುಲಭವಾಗಿ ಕೆಲವು ಸೆಕೆಂಡುಗಳಲ್ಲಿಯೇ, ಯಾವುದೇ ರೀತಿಯ ಹಣವನ್ನು ಖರ್ಚು ಮಾಡದೇ ಈ 3D ಡಿಜಿಟಲ್ ಫೋಟೋಗಳನ್ನು ಮಾಡಬಹುದಾಗಿದೆ. ನಿಮಗೇನಾದರೂ ಈ ಈ ಫೋಟೋಗಳನ್ನು ಮಾಡುವುದು ಹೇಗೆ ಅಂತ ತಿಳಿಯದಿದ್ದರೆ, ಈ ಕೆಳಗೆ ತಿಳಿಸಲಾದ ಹಂತಗಳನ್ನು ಫಾಲೋ ಮಾಡಿ.
ನ್ಯಾನೋ ಬನಾನ 3D ಡಿಜಿಟಲ್ ಫೋಟೋಗಳನ್ನು ಮಾಡುವುದು ಹೇಗೆ?
- ಮೊದಲು Google AI ಸ್ಟುಡಿಯೋ ಅಥವಾ ಜೆಮಿನಿ ಅಪ್ಲಿಕೇಶನ್/ವೆಬ್ಸೈಟ್ಗೆ ಹೋಗಿ.ಈಗ ‘Try Nano Banana’ ಸರ್ಚ್ ಮಾಡಿ. ಇದರಲ್ಲಿ ನೀವು ಕೇವಲ ಫೋಟೋ ಅಪ್ಲೋಡ್ ಮಾಡಿ, ನಿಮಗೆ ಯಾವ ರೀತಿ ಬೇಕೋ ಆ ರೀತಿ ಬರಲು ಟೆಕ್ಟ್ ಮೂಲಕ ತಿಳಿಸಿ.
- ನಂತರ, Google ನ ಅಧಿಕೃತ ಪ್ರಾಂಪ್ಟ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಫೋಟೋ ಸೂಪರ್ ಫಾಸ್ಟ್ ಆಗಿ ರೆಡಿಯಾಗುತ್ತದೆ. ಅಂದರೆ ಇದರಲ್ಲಿ ನಿಮ್ಮಫೋಟೋಅಥವಾಪ್ರಾಂಪ್ಟ್ಅನ್ನುಅಪ್ಲೋಡ್ಮಾಡಲು ‘+’ ಬಟನ್ಅನ್ನುಕ್ಲಿಕ್ಮಾಡಿ.
- ಈಗ ಇಂಗ್ಲಿಷಿನಲ್ಲಿಟೆಕ್ಸ್ಟ್ Add ಮಾಡಿ. ಇದರೊಂದಿಗೆನೀವುಫೇಶಿಯಲ್ ಡಿಟೇಲ್ಸ್, ಲೈಟಿಂಗ್ ಮತ್ತುಸ್ಟೈಲ್ ಅನ್ನುಕಳೆದುಕೊಳ್ಳದೆಫೋಟೋಗೆಬದಲಾವಣೆಗಳನ್ನುಮಾಡಬಹುದು.
- ಹೊಸಫೋಟೋರಚಿಸುವುದು, ನಿಮ್ಮಫೋಟೋದಬ್ಯಾಕ್ಗ್ರೌಂಡ್ ಬದಲಾಯಿಸುವುದುಮತ್ತುವಸ್ತುಗಳನ್ನುಸೇರಿಸುವಂತಹಬದಲಾವಣೆಗಳನ್ನುಸಹನೀವುಸುಲಭವಾಗಿಮಾಡಬಹುದು.
- ಜೊತೆಗೆ ನಿಮ್ಮ ಹೇರ್ ಸ್ಟೈಲ್ ಸಹ ಬದಲಾಯಿಸಬಹುದು. ಒಮದು ವೇಳೆ ನೀವು ಸಾಕು ಪ್ರಾಣಿಗಳನ್ನು ಹಿಡಿದಿದ್ದರೆ, ಅದು ಬಟ್ಟೆ ಧರಿಸಿರುವಂತೆ ಸಹ ಮಾಡಬಹುದು.
- ಕೊನೆಗೆ ಫೋಟೋ ರೆಡಿಯಾದ ನಂತರ ಅದನ್ನುಡೌನ್ಲೋಡ್ಮಾಡಿಮತ್ತುಸಾಮಾಜಿಕಮಾಧ್ಯಮದಲ್ಲಿಸ್ನೇಹಿತರೊಂದಿಗೆಹಂಚಿಕೊಳ್ಳಿ.
(Create a 1/7 scale commercialized figurine of the characters in the picture, in a realistic style, in a real environment. The figurine is placed on a computer desk. The figurine has a round transparent acrylic base, with no text on the base. The content on the computer screen is a 3D modeling process of this figurine. Next to the computer screen is a toy packaging box, designed in a style reminiscent of high-quality collectible figures, printed with original artwork. The packaging features two-dimensional flat illustrations.”) (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ)
ನ್ಯೂಸ್ 18 ಕನ್ನಡ ಟೆಕ್ನಾಲಜಿ ವಿಭಾಗದಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಹಿತಿ, ಮೊಬೈಲ್ ವಿಮರ್ಶೆಗಳು, ಗ್ಯಾಜೆಟ್ಗಳು, ತಂತ್ರಜ್ಞಾನ ಸಲಹೆಗಳು, ಇ-ಕಾಮರ್ಸ್ ಮಾರಾಟ, ಆನ್ಲೈನ್ ಶಾಪಿಂಗ್, ಅಪ್ಲಿಕೇಶನ್ಗಳು, ವಾಟ್ಸಾಪ್ ಅಪ್ಡೇಟ್ಸ್, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
September 11, 2025 1:10 PM IST