ಎರಡನೇ ಟೆಸ್ಟ್ ಪಂದ್ಯ ಜುಲೈ 10 ರಂದು ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ ಹಲವಾರು ಬದಲಾವಣೆಗಳಾಗುವ ಸಾಧ್ಯತೆಯಿದೆ. ಎರಡನೇ ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದ ಬುಮ್ರಾ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ವಿಚಿತ್ರವೆಂದರೆ, ಬುಮ್ರಾ ಆಡುವ ಹನ್ನೊಂದರೊಳಗೆ ಇರುವಾಗ ಟೀಮ್ ಇಂಡಿಯಾದ ಅಂಕಿಅಂಶಗಳು ಕಳಪೆಯಾಗಿವೆ. ಇದು ಅಚ್ಚರಿಯಾದರೂ ಸತ್ಯ.