ಕಾಲ್ತುಳಿತ ಸಂಭವಿಸಿ ಬರೋಬ್ಬರಿ 3 ತಿಂಗಳ ನಂತರ ಫಸ್ಟ್‌ ಟೈಂ ಆರ್‌ಸಿಬಿ ಪೋಸ್ಟ್! ಫ್ಯಾನ್ಸ್‌ಗೆ ಗುಡ್‌ನ್ಯೂಸ್! | RCB First Post After Bengaluru Stampede says Its Been close to three months since we last posted here | ಕ್ರೀಡೆ

Last Updated:

ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆರ್‌ಸಿಬಿ ತಂಡ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದೆ. ತನ್ನ ಪತ್ರದಲ್ಲಿ ಆರ್‌ಸಿಬಿ, ‘ಆತ್ಮೀಯ 12 ನೇ ಮ್ಯಾನ್ ಆರ್ಮಿ, ಇದು ನಿಮಗೆ ನಮ್ಮ ಹೃದಯಪೂರ್ವಕ ಪತ್ರ!’ ಎಂದು ಶುರು ಮಾಡಿ ಅನೇಕ ವಿಚಾರಗಳನ್ನು ಹಂಚಿಕೊಂಡಿದೆ.

RCBRCB
RCB

ಬೆಂಗಳೂರು: ಬರೋಬ್ಬರಿ 18 ವರ್ಷಗಳ ನಂತರ ಕಳೆದ ಬಾರಿಯ ಐಪಿಎಲ್‌ ಸೀಸನ್‌ನಲ್ಲಿ (IPL Season 2025) ಜಗತ್ತಿನಲ್ಲೇ ಅತೀ ಹೆಚ್ಚು ಫ್ಯಾನ್ಸ್ ಹೊಂದಿರುವ ಬೆಂಗಳೂರಿನ ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ (IPL Trophy) ಗೆದ್ದಿತ್ತು. ಆರ್‌ಸಿಬಿ (RCB) ಗೆಲುವು ಕಂಡು ಇಡೀ ಜಗತ್ತೇ ಸಂಭ್ರಮಿಸಿತ್ತು. ಆದರೆ ಆ ಗೆಲುವಿನ ಖುಷಿ ಹೆಚ್ಚು ಸಮಯ ಇರಲಿಲ್ಲ. ಜಸ್ಟ್ 24 ಗಂಟೆಗಳಲ್ಲಿ ಶೋಕದ ವಾತಾವರಣ ಉಂಟಾಗಿತ್ತು.

ಕಾರಣ, ಆಗತಾನೆ ಟ್ರೋಫಿ ಗೆದ್ದು ಬೆಂಗಳೂರಿಗೆ ಬಂದಿಳಿದಿದ್ದ ಆರ್‌ಸಿಬಿ ತಂಡವನ್ನು ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಸಾವಿರಾರು ಮಂದಿ ಅಭಿಮಾನಿಗಳು ಬಂದಿದ್ದಾಗ ಕಾಲ್ತುಳಿತ ಉಂಟಾಗಿ ಅನೇಕ ಮಂದಿ ಸಾವನ್ನಪ್ಪಿದ್ದರು. ಆ ನಂತರ ಸಾಕಷ್ಟು ಬೆಳವಣಿಗೆಗಳು ಸಂಭವಿಸಿದವು. ನಂತರ ಈ ದುರ್ಘಟನೆಗೆ ಸಂತಾಪ ಸೂಚಿಸಿದ್ದ ಆರ್‌ಸಿಬಿ ತಂಡ ಬಳಿಕ ಸೈಲೆಂಟ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈತನಕ ಯಾವುದೇ ಒಂದು ಪೋಸ್ಟ್ ಹಾಕಿರಲಿಲ್ಲ. ಇದೀಗ ಬರೋಬ್ಬರಿ ಮೂರು ತಿಂಗಳ ನಂತರ ಆರ್‌ಸಿಬಿ ತಂಡ ತನ್ನ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ನೀಡಿದೆ.

ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆರ್‌ಸಿಬಿ ತಂಡ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದೆ. ತನ್ನ ಪತ್ರದಲ್ಲಿ ಆರ್‌ಸಿಬಿ, ‘ಆತ್ಮೀಯ 12 ನೇ ಮ್ಯಾನ್ ಆರ್ಮಿ, ಇದು ನಿಮಗೆ ನಮ್ಮ ಹೃದಯಪೂರ್ವಕ ಪತ್ರ!’ ಎಂದು ಶುರು ಮಾಡಿ ಅನೇಕ ವಿಚಾರಗಳನ್ನು ಹಂಚಿಕೊಂಡಿದೆ.

ಮುಂದುವರಿದು ತನ್ನ ಪೋಸ್ಟ್‌ನಲ್ಲಿ ಆರ್‌ಸಿಬಿ, ‘ಇಲ್ಲಿ ನಾವು ಕೊನೆಯದಾಗಿ ಪೋಸ್ಟ್ ಮಾಡಿದದ್ದು ಸುಮಾರು ಮೂರು ತಿಂಗಳುಗಳ ಹಿಂದೆ. ಈ ಮೌನ ನಮ್ಮ ಗೈರು ಹಾಜರಿಯಲ್ಲ, ಬದಲಿಗೆ ನಮ್ಮಲ್ಲಿ ದುಃಖ ತುಂಬಿತ್ತು. ಈ ಸ್ಥಳವು ಎಂದೆಂದಿಗೂ ಉತ್ಸಾಹ, ನೆನಪುಗಳು ಮತ್ತು ನಿಮಗೆ ಪ್ರಿಯವಾಗಿದ್ದ ಕ್ಷಣಗಳಿಂದ ತುಂಬಿರುತ್ತಿತ್ತು. ಆದರೆ ಜೂನ್ 4 ಎಲ್ಲವನ್ನೂ ಬದಲಾಯಿಸಿತು. ಆ ದಿನ ನಮ್ಮ ಹೃದಯವನ್ನು ಒಡೆಯಿತು. ದಿನದ ನಂತರದ ಮೌನವು, ನಾವು ನೋವನ್ನು ಹಂಚಿಕೊಂಡ ರೀತಿಯಾಗಿದೆ.’ ಎಂದು ಆರ್‌ಸಿಬಿ ಹೇಳಿದೆ.

Image

ಆ ಮೌನದಲ್ಲಿ, ನಾವು ಶೋಕಿಸುತ್ತಿದ್ದೆವು. ಕೇಳುತ್ತಿದ್ದೆವು. ಕಲಿಯುತ್ತಿದ್ದೆವು. ಮತ್ತು ನಿಧಾನವಾಗಿ, ನಾವು ಕೇವಲ ಪ್ರತಿಕ್ರಿಯೆಗಿಂತ ಹೆಚ್ಚಾದ ಏನೋ ಒಂದನ್ನು ಕಟ್ಟಬೇಕು, ಅದರಲ್ಲಿ ನಮಗೆ ಸಂಪೂರ್ಣ ನಂಬಿಕೆ ಇರಬೇಕು ಅಂತಹದ್ದೊಂದನ್ನು ನಿರ್ಮಿಸಬೇಕು ಎಂಬ ಕನಸನ್ನು ಕಂಡೆವು. ಈ ಕನಸಿನ ನನಸಾಗಿ ಹುಟ್ಟಿಕೊಂಡಿದ್ದೇ ‘RCB CARES’. ಹೌದು.. ಇದು ನಾವು ಗೌರವ ನೀಡುವ, ಗುಣಪಡಿಸುವ ಹಾಗೂ ನಮ್ಮ ಅಭಿಮಾನಿಗಳ ಪಕ್ಕದಲ್ಲಿ ನಿಲ್ಲುವ ಅತ್ಯಗತ್ಯದ ಅವಶ್ಯಕತೆಗಳಲ್ಲಿ ಒಂದು. ಇದು ನಮ್ಮ ಸಮುದಾಯ ಮತ್ತು ಅಭಿಮಾನಿಗಳಿಂದ ರೂಪುಗೊಂಡ ಅರ್ಥಪೂರ್ಣ ವೇದಿಕೆಯಾಗಿದೆ ಎಂದು ಆರ್‌ಸಿಬಿ ಹೇಳಿಕೊಂಡಿದೆ.

ಮುಂದುವರಿದು, ‘ಇಂದು ನಾವು ಈ ಸ್ಥಳಕ್ಕೆ (ಸಾಮಾಜಿಕ ಜಾಲತಾಣ) ಸಂಭ್ರಮದಿಂದ ಅಲ್ಲ, ಆದರೆ ಕಾಳಜಿಯೊಂದಿಗೆ ಹಿಂದಿರುಗಿದ್ದೇವೆ. ಇದನ್ನು ಹಂಚಿಕೊಳ್ಳಲು, ನಿಮ್ಮ ಜೊತೆಯಾಗಿ ನಿಲ್ಲಲು. ಒಟ್ಟಾಗಿ ಮುಂದೆ ನಡೆಯಲು, ಕರ್ನಾಟಕದ ಹೆಮ್ಮೆ ಆಗಿಯೇ ಮುಂದುವರೆಯಲು. ಆರ್‌ಸಿಬಿಗೆ ಕಾಳಜಿ ಇದೆ, ಎಂದೆಂದಿಗೂ ಇರಲಿದೆ’ ಎಂದು ಪೋಸ್ಟ್ ಮಾಡಲಾಗಿದೆ.