300 ರನ್ ಗಳಿಸುವ ಗುರಿಯೊಂದಿಗೆ ಋತುವನ್ನು ಆರಂಭಿಸಿದ್ದ ಸನ್ರೈಸರ್ಸ್, ಕಳೆದ ಮೂರು ಪಂದ್ಯಗಳಲ್ಲಿ 200 ರನ್ ಗಳಿಸುವಲ್ಲೂ ವಿಫಲವಾಗಿದೆ. ಬ್ಯಾಟಿಂಗ್ ಪ್ರದರ್ಶನ ಪಂದ್ಯದಿಂದ ಪಂದ್ಯಕ್ಕೆ ಕುಸಿಯುತ್ತಿದ್ದು, ತಂಡದ ಪ್ರಮುಖ ಆಟಗಾರರಾದ ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಪ್ಯಾಟ್ ಕಮಿನ್ಸ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಮೇಲೆ ಒತ್ತಡ ಹೆಚ್ಚಾಗಿದೆ.