‘ಗ್ಯಾರಂಟಿ’ ಸರ್ಕಾರಕ್ಕೆ ಕೇಳ್ತಿಲ್ವಾ ಜನ್ರ ಕೂಗು? ಗೋಡೆ ಬಿರುಕು, ₹110 ಕೋಟಿ ವ್ಯರ್ಥನಾ? | Puttur Veterinary College building cracks expose weakness Locals are outraged threatened to protest against government | ದಕ್ಷಿಣ ಕನ್ನಡ

‘ಗ್ಯಾರಂಟಿ’ ಸರ್ಕಾರಕ್ಕೆ ಕೇಳ್ತಿಲ್ವಾ ಜನ್ರ ಕೂಗು? ಗೋಡೆ ಬಿರುಕು, ₹110 ಕೋಟಿ ವ್ಯರ್ಥನಾ? | Puttur Veterinary College building cracks expose weakness Locals are outraged threatened to protest against government | ದಕ್ಷಿಣ ಕನ್ನಡ

Last Updated:

ಕೊಯಿಲದ ಪಶು ವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆಯ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ನೂರಾರು ಕೋಟಿ ಖರ್ಚು ಮಾಡಿ ಕಟ್ಟಿದ್ರೂ ಭೂತ ಬಂಗಲೆಯಾಗಿದೆ.

ಕೊಯಿಲದ ಪಶು ವೈದ್ಯಕೀಯ ಮಹಾವಿದ್ಯಾಲಯ (ಸಾಂದರ್ಭಿಕ ಚಿತ್ರ) ಕೊಯಿಲದ ಪಶು ವೈದ್ಯಕೀಯ ಮಹಾವಿದ್ಯಾಲಯ (ಸಾಂದರ್ಭಿಕ ಚಿತ್ರ)
ಕೊಯಿಲದ ಪಶು ವೈದ್ಯಕೀಯ ಮಹಾವಿದ್ಯಾಲಯ (ಸಾಂದರ್ಭಿಕ ಚಿತ್ರ)

ಪುತ್ತೂರು: ಕೊಯಿಲ ಪಶು ಸಂಗೋಪನಾ ಕ್ಷೇತ್ರದಲ್ಲಿದ್ದ (University of Animal Husbandry) 247 ಎಕ್ರೆ ಜಾಗದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ (Hospital), ಪಶು ವೈದ್ಯಕೀಯ ಕಾಲೇಜು, ಅತಿಥಿ ಗೃಹ, ವಿದ್ಯಾರ್ಥಿಗಳ ವಸತಿ ಗೃಹ, ವಿದ್ಯಾರ್ಥಿನಿಯರ ವಸತಿ ಗೃಹ (Girls’ hostel) ಹೀಗೆ 5 ಬೃಹತ್ ಕಟ್ಟಡಗಳು ನಿರ್ಮಾಣವಾಗಿದೆ.

ಬೆಂಗಳೂರು ಸ್ಟಾರ್ ಬಿಲ್ಡರ್ಸ್ ಅಂಡ್ ಡೆವಲಪರ್ ಸಂಸ್ಥೆ ಕಾಮಗಾರಿ ನಿರ್ವಹಣೆ ಮಾಡಿದೆ. ಆದರೆ ಕಟ್ಟಡ ನಿರ್ಮಾಣವಾಗಿ 3 ವರ್ಷಗಳಾದ್ರು ಕಟ್ಟಡದ ಅಡಿಯಿಂದ ಮುಡಿಯವರೆಗೂ ಗೋಡೆಗಳಲ್ಲಿ ಬಿರುಕು ಬಿಟ್ಟಿರುವುದು ಗೋಚರಿಸುತ್ತಿದೆ. ಕಟ್ಟಡದ ಒಳಗಡೆ ಮಳೆ ನೀರು ಸೋರಿಕೆಯಾಗ್ತಿದ್ದು, ಒಳಗಡೆ ಅಲ್ಲಲ್ಲಿ ಪಾಚಿಯಾಗಿದೆ. ನೀರು ಸೋರಿಕೆ ಆಗದಂತೆ ಕಟ್ಟಡದ ಮೇಲೆ ಫೈಬರ್ ಶೀಟು ಅಳವಡಿಸಲಾಗಿದೆ. ಆದರೂ ಕಟ್ಟಡ ಸೋರುತ್ತಿದೆ.

ಶಿಲಾನ್ಯಾಸ ನೆರವೇರಿಸಿದ್ದ ಸಿಎಂ ಸಿದ್ದರಾಮಯ್ಯ

ಕಟ್ಟಡ ಉದ್ಘಾಟನೆ ಮಾಡಿದ್ದ ಬೊಮ್ಮಾಯಿ

2002ರಲ್ಲಿ ಅಂದಿನ ಸಿಎಂ ಡಿವಿ ಸದಾನಂದ ಗೌಡ ಪುತ್ತೂರು ಪಶು ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದರು. 2016 ಅಕ್ಟೋಬರ್ 9ಕ್ಕೆ ಅಂದಿನ ಸಿಎಂ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದರು. ಇಲ್ಲಿಯ ಬೇಡಿಕೆಗೆ ಅನುಗುಣವಾಗಿ ಮೊದಲ ಹಂತದಲ್ಲಿ 142 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, 110 ಕೋಟಿಯಲ್ಲಿ 5 ಹಂತದ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. 2023 ಮಾರ್ಚ್ 25 ರಂದು ಬಿಜೆಪಿ ಸರ್ಕಾರದ ಅವಧಿ ಮುಗಿಯುವ ಸನಿಹದಲ್ಲಿದ್ದ ಸಮಯದಲ್ಲಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು. ಆ ಬಳಿಕವೂ ಇಲ್ಲಿ ಕೋರ್ಸ್ ಆರಂಭಿಸುವ ಯಾವ ಪ್ರಕ್ರಿಯೆಯೂ ಆರಂಭಗೊಂಡಿಲ್ಲ. ಕಾಲೇಜು ಕಟ್ಟಡಗಳು ಇಂದು ಭೂತ ಬಂಗಲೆಯಾಗಿದೆ. ಕಟ್ಟಡದ ಈ ದುಸ್ತಿತಿಗೆ ಸ್ಥಳೀಯರು ರೋಸಿ ಹೋಗಿದ್ದು, ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರ ಬೇಸರ

ಕೊಯಿಲದ ನಿರ್ಮಾಣವಾಗುತ್ತಿರುವ ಪಶುವೈದ್ಯಕೀಯ ಕಾಲೇಜು ನೆನೆಗುದಿಗೆ ಬಿದ್ದಿದೆ. ವಾಸ್ತವದಲ್ಲಿ ನೋಡಿದರೆ ಅದು ದೊಡ್ಡ ಭೂತ ಬಂಗಲೆಯಾಗಿದೆ. ಕಟ್ಟಡ ಉದ್ಘಾಟನೆ ಆಗಿ ಎರಡು ವರ್ಷ ಆಗಿದೆ, ಆ ಬಳಿಕ ಒಂದು ಹೆಜ್ಜೆ ಮುಂದಕ್ಕೆ ಹೋಗಿಲ್ಲ. ಪೌಂಡೇಷನ್ ನಿಂದ ಹಿಡಿದು, ಇಡೀ ಬಂಗಲೆಯ ಗೋಡೆಗಳು ಬಿರುಕು ಬಿಡುತ್ತಿದ್ದು, ಕಟ್ಟಡದ ಗುಣಮಟ್ಟವನ್ನು ನಾವು ಹೇಗಿದೆ ಅಂತ ನೋಡಲು ಇರುವ ಜೀವಂತ ಸಾಕ್ಷಿಯಾಗಿದೆ ಎಂದು ಸ್ಥಳೀಯ ನಿವಾಸಿ ಸಿದ್ಧೀಕ್ ನೀರಾಜೆ ಬೇಸರ ವ್ಯಕ್ತಪಡಿಸಿದ್ದಾರೆ.

ಕೊಯಿಲದಲ್ಲಿ ನಿರ್ಮಾಣವಾಗಿರುವ ಬಂಗಲೆ ಉದ್ಘಾಟನೆಯಾದರೂ ಬಳಕೆಯೇ ಆರಂಭವಾಗಿಲ್ಲ. ಅದನ್ನು ನೋಡಿವಾಗಲೇ ನಮ್ಮ ಗ್ರಾಮಸ್ಥರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಡಿನಲ್ಲಿ ಐದು ದೊಡ್ಡ ಬಂಗಲೆಗಳನ್ನು ನಿರ್ಮಾಣ ಮಾಡಿರೋದು ಅಷ್ಟೇ ಇವರ ಸಾಧನೆಯಾಗಿದೆ. ಈ ಬಗ್ಗೆ ಹೋರಾಟ ಮಾಡಲು ಸಜ್ಜಾಗಿದ್ದೇವೆ, ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕಿದೆ ಎಂದು ಸ್ಥಳೀಯ ನಿವಾಸಿ ನಝೀರ್ ಕೊಯಿಲಾ ಎಚ್ಚರಿಕೆ ನೀಡಿದ್ದಾರೆ.