IND vs ENG: ರಿಷಭ್ ಪಂತ್ ಕಾಲ್ಬೆರಳಿನ ಮೂಳೆ ಮುರಿದಿದ್ದು, ಕನಿಷ್ಠ ಆರು ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯುವಂತಾಗಿದೆ. ಭಾರತದ ಇನ್ನಿಂಗ್ಸ್‌ನ 68ನೇ ಓವರ್‌ನಲ್ಲಿ ಈ ದುರ್ಘಟನೆ ನಡೆಯಿತು. 37 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪಂತ್, ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಎಸೆತಕ್ಕೆ ಯಾರೂ ನಿರೀಕ್ಷಿಸದ ರಿವರ್ಸ್ ಸ್ವೀಪ್ ಆಡಲು ಹೋದರು.