Last Updated:
Vignesh Puthur: ಅಚ್ಚರಿಯ ಸಂಗತಿ ಎಂದರೆ, ವಿಘ್ನೇಶ್ ಪುತೂರ್ ಇದುವರೆಗೆ ಸೀನಿಯರ್ ಮಟ್ಟದಲ್ಲಿ ಯಾವುದೇ ದೇಶೀಯ ಪಂದ್ಯಗಳನ್ನು ಆಡಿದಲ್ಲ. ನೇರವಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿ ಚೊಚ್ಚಲ ಪಂದ್ಯದಲ್ಲೇ ಮೂರು ವಿಕೆಟ್ ಕಬಳಿಸಿದ ಹಿರಿಮೆಗೆ ವಿಘ್ನೇಶ್ ಪಾತ್ರರಾಗಿದ್ದಾರೆ.
ನವದೆಹಲಿ. ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಅಚ್ಚರಿಯ ನಿರ್ಧಾರ ತೆಗೆದುಕೊಂಡಿತು. ಸಿಎಸ್‌ಕೆ ವಿರುದ್ಧದ ಬಹಳ ಮುಖ್ಯವಾದ ಪಂದ್ಯದಲ್ಲಿ, ಮುಂಬೈ ಕೇರಳದ ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರ್ ಅವರನ್ನು ಐಪಿಎಲ್‌ನಲ್ಲಿ (IPL 2025) ಪದಾರ್ಪಣೆ ಮಾಡಿತು.
ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಬದಲಿಗೆ ಮಣಿಕಟ್ಟಿನ ಸ್ಪಿನ್ ಬೌಲರ್ ವಿಘ್ನೇಶ್ ಪುತೂರ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಲಾಯಿತು. ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ ಗಮನಾರ್ಹ ಆಟ ಆಡದೇ ಇದ್ದುದರಿಂದ ಬೌಲಿಂಗ್‌ನಲ್ಲಿ ಅವರ ಬದಲಿಗೆ ವಿಘ್ನೇಶ್ ಪುತೂರ್ ಅವರನ್ನು ಫೀಲ್ಡ್‌ಗೆ ಇಳಿಸಲಾಯಿತು. ಕೇರಳದ ಮಲಪ್ಪುರಂ ನಿವಾಸಿ 24 ವರ್ಷದ ವಿಘ್ನೇಶ್ ಪುತೂರ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಅದ್ಭುತವಾದ ಆಟ ಆಡಿದರು. ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ ವಿಘ್ನೇಶ್, ಪಂದ್ಯದ ಕೊನೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಂದಲೂ ಶ್ಲಾಘನೆಗೆ ಒಳಗಾದರು.
ಇದನ್ನೂ ಓದಿ: Weight Loss Tips: ಬರೋಬ್ಬರಿ 22KG ತೂಕ ಇಳಿಸಿಕೊಂಡ 2 ಮಕ್ಕಳ ತಾಯಿ! ಇವರ ಟಿಪ್ಸ್ ಫಾಲೋ ಮಾಡಿದ್ರೆ ವೇಟ್ ಲಾಸ್ ತುಂಬಾ ಸುಲಭ!
ಅಚ್ಚರಿಯ ಸಂಗತಿ ಎಂದರೆ, ವಿಘ್ನೇಶ್ ಪುತೂರ್ ಇದುವರೆಗೆ ಸೀನಿಯರ್ ಮಟ್ಟದಲ್ಲಿ ಯಾವುದೇ ದೇಶೀಯ ಪಂದ್ಯಗಳನ್ನು ಆಡಿದಲ್ಲ. ನೇರವಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿ ಚೊಚ್ಚಲ ಪಂದ್ಯದಲ್ಲೇ ಮೂರು ವಿಕೆಟ್ ಕಬಳಿಸಿದ ಹಿರಿಮೆಗೆ ವಿಘ್ನೇಶ್ ಪಾತ್ರರಾಗಿದ್ದಾರೆ.
ಎಂಟನೇ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಅವರು ವಿಘ್ನೇಶ್ ಪುತೂರ್ ಅವರನ್ನು ಬೌಲಿಂಗ್ ಮಾಡಲು ಕರೆದರು. ಆಗ ಮುಂಬೈ ತನ್ನ 155 ರನ್‌ಗಳನ್ನು ರಕ್ಷಿಸಿಕೊಳ್ಳುತ್ತಿತ್ತು. ಎಡಗೈ ಮಣಿಕಟ್ಟಿನ ಸ್ಪಿನ್ನರ್ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ತಮ್ಮ ಮೊದಲ ಓವರ್‌ನಲ್ಲಿ 53 ರನ್‌ಗಳಿಗೆ ಔಟ್ ಮಾಡಿದರು. ಗಾಯಕ್ವಾಡ್ ಪುತೂರ್ ಅವರ ಚೆಂಡನ್ನು ಫೀಲ್ಡರ್ ಆಗಲೇ ಇದ್ದ ಜಾಗಕ್ಕೆ ಲಾಂಗ್ ಆಫ್ ಮಾಡಲು ಆಡಿದರು. ತಮ್ಮ ಎರಡನೇ ಓವರ್‌ನಲ್ಲಿ, ಶಿವಂ ದುಬೆ ಅವರನ್ನು ಗೂಗ್ಲಿ ಮೂಲಕ ವಂಚಿಸಿ ತಿಲಕ್ ವರ್ಮಾ ಅವರಿಗೆ ಕ್ಯಾಚ್ ನೀಡಿದರು. ಇದಾದ ನಂತರ ಅವರು ದೀಪಕ್ ಹೂಡಾ ಅವರ ವಿಕೆಟ್ ಪಡೆದರು, ಹೂಡಾ ದೊಡ್ಡ ಶಾಟ್ ಆಡಲು ಪ್ರಯತ್ನಿಸಿದರು ಆದರೆ ಲಾಂಗ್-ಆನ್ ನಲ್ಲಿ ಕ್ಯಾಚ್ ಔಟ್ ಆದರು. ಆ ಮೂಲಕ ವಿಘ್ನೇಶ್ ಪುತೂರ್ ತಮ್ಮ ಮೂರನೇ ವಿಕೆಟ್ ಪಡೆದರು.
ವಿಘ್ನೇಶ್ ಪುತೂರ್ ತಂದೆ ಆಟೋ ಡ್ರೈವರ್!
ಹೌದು.. ಈ ಯುವ ಸ್ಪಿನ್ನರ್ ವಿಘ್ನೇಶ್ ಪುತೂರ್ ತಂದೆ ಆಟೋ ಚಾಲಕರಾಗಿದ್ದಾರೆ. ಕೇರಳ ಪರ 14 ವರ್ಷದೊಳಗಿನವರು ಮತ್ತು 19 ವರ್ಷದೊಳಗಿನವರ ಮಟ್ಟದಲ್ಲಿ ಆಡಿದ್ದಾರೆ. ಸ್ಕೌಟ್ಸ್ ಸಮಯದಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು ಮೊದಲು ಗಮನಿಸಿತು. ಕಳೆದ ವರ್ಷ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅಲೆಪ್ಪಿ ರಿಪ್ಪಲ್ಸ್ ಪರ ಆಡುವಾಗ ಮೂರು ಪಂದ್ಯಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆದಿದ್ದರು. ಪುತೂರ್ ತಂಡವು ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲೂ ಭಾಗವಹಿಸಿತ್ತು. ಪೆರಿಂಥಲ್ಮನ್ನಾದಲ್ಲಿ ತಮ್ಮ ಜಾಲಿ ರೋವರ್ಸ್ ಕ್ರಿಕೆಟ್ ಕ್ಲಬ್ ಪರ ಅದ್ಭುತ ಪ್ರದರ್ಶನ ನೀಡಿದ ನಂತರ ಅವರು ಕೆಸಿಎಲ್ ಟಿ20 ಪಂದ್ಯಾವಳಿಗೆ ಪ್ರವೇಶಿಸಿದರು. ನಂತರ ನವೆಂಬರ್ 2024 ರಲ್ಲಿ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು ಖರೀದಿಸಿತು. ವಿಘ್ನೇಶ್ ಪುತೂರ್ ತಮ್ಮ 4 ಓವರ್‌ಗಳಲ್ಲಿ 32 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದು ಚೊಚ್ಚಲ ಪಂದ್ಯದಲ್ಲೇ ಇಡೀ ದೇಶದ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: RCB vs KKR: ಆರ್‌ಸಿಬಿ ‘ಸಾಲ್ಟ್’ ರುಚಿ ತೋರಿಸಿದ್ದು ಮಾತ್ರವಲ್ಲ, ಕೋಲ್ಕತ್ತಾ ಸೋಲಲು 3 ಮುಖ್ಯ ಕಾರಣಗಳಿವು!
ಮುಂಬೈ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಚೆನ್ನೈ!
ಮುಂಬೈ ಇಂಡಿಯನ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನೊಂದಿಗೆ ಶುಭಾರಂಭ ಮಾಡಿತು. ಆ ಮೂಲಕ ಕಳೆದ 13 ವರ್ಷಗಳಿಂದ ತನಗೆ ಅಂಟಿದ್ದ ಕಳಂಕವನ್ನು ಮುಂಬೈ ಮತ್ತೆ ಮುಂದುವರಿಸಿತು. ಅಂದರೆ, ಕಳೆದ ಹದಿಮೂರು ವರ್ಷಗಳಲ್ಲಿ ಮುಂಬೈ ತನ್ನ ಮೊದಲ ಪಂದ್ಯವನ್ನು ಗೆಲ್ಲುವಲ್ಲಿ ವಿಫಲವಾಗಿದೆ.
ಮುಂಬೈ ನೀಡಿದ್ದ 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ 6 ವಿಕೆಟ್‌ಗಳಿಗೆ 158 ರನ್ ಗಳಿಸಿತು. ರಚಿನ್ ರವೀಂದ್ರ 45 ಎಸೆತಗಳಲ್ಲಿ ಅಜೇಯ 65 ರನ್ ಗಳಿಸಿದರೆ, ನಾಯಕ ಗಾಯಕ್ವಾಡ್ 53 ರನ್ ಗಳಿಸಿದರು.
Mumbai,Maharashtra
March 24, 2025 12:32 PM IST
MI vs CSK: ತಂದೆ ಆಟೋ ಡ್ರೈವರ್! ರಾಜ್ಯ ತಂಡಕ್ಕೂ ಆಡದೆ ನೇರವಾಗಿ IPLಗೆ ಎಂಟ್ರಿ! ಮೊದಲ ಪಂದ್ಯದಲ್ಲೇ ಧೂಳೆಬ್ಬಿಸಿದ ವಿಘ್ನೇಶ್ ಪುತ್ತೂರ್!