ದುಬೈನಲ್ಲಿ ಪಿಸಿಬಿ- ಪಾಕ್​ ಕ್ರಿಕೆಟಿಗರ ಹೈಡ್ರಾಮಾ! PAK vs UAE ನಡುವಿನ ಪಂದ್ಯದಲ್ಲಿ ವಿಳಂಬ ’|Asia Cup 2025: Pakistan’s Boycott Threat Looms Over UAE Match | ಕ್ರೀಡೆ

ದುಬೈನಲ್ಲಿ ಪಿಸಿಬಿ- ಪಾಕ್​ ಕ್ರಿಕೆಟಿಗರ ಹೈಡ್ರಾಮಾ! PAK vs UAE ನಡುವಿನ ಪಂದ್ಯದಲ್ಲಿ ವಿಳಂಬ ’|Asia Cup 2025: Pakistan’s Boycott Threat Looms Over UAE Match | ಕ್ರೀಡೆ

Last Updated:

ಪಾಕಿಸ್ತಾನ ತಂಡದಲ್ಲಿ ಉಂಟಾಗಿರುವ ಗೊಂದಲದಿಂದಾಗಿ ಪಂದ್ಯದ ಆರಂಭ ಸಮಯವನ್ನು ಒಂದು ಗಂಟೆ ಮುಂದೂಡಲಾಗಿದೆ. ಪಾಕಿಸ್ತಾನ ತಂಡ ಇನ್ನೂ ಹೋಟೆಲ್​​ನಲ್ಲೇ ಉಳಿದುಕೊಂಡಿದ್ದು, ಪಂದ್ಯದ ಆರಂಭದ ಸಮಯ ಇನ್ನೂ ಖಚಿತವಾಗಿಲ್ಲ. ಈಗಾಗಲೇ ಯುಎಇ ತಂಡ ಹಾಗೂ ಮ್ಯಾಚ್​ ಅಫೀಸಿಯಲ್ಸ್ ಸ್ಟೇಡಿಯಂ ತಲುಪಿದ್ದಾರೆ.

ಪಾಕಿಸ್ತಾನ್-ಯುಎಇಪಾಕಿಸ್ತಾನ್-ಯುಎಇ
ಪಾಕಿಸ್ತಾನ್-ಯುಎಇ

2025ರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಡುವಿನ ಪಂದ್ಯಕ್ಕೆ ಒಂದು ಗಂಟೆಯ ವಿಳಂಬ ಉಂಟಾಗಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಪಾಕಿಸ್ತಾನ ತಂಡದಲ್ಲಿ ಉಂಟಾಗಿರುವ ಗೊಂದಲದಿಂದಾಗಿ ಪಂದ್ಯದ ಆರಂಭ ಸಮಯವನ್ನು ಒಂದು ಗಂಟೆ ಮುಂದೂಡಲಾಗಿದೆ. ಪಾಕಿಸ್ತಾನ ತಂಡ ಇನ್ನೂ ಹೋಟೆಲ್​​ನಲ್ಲೇ ಉಳಿದುಕೊಂಡಿದ್ದು, ಪಂದ್ಯದ ಆರಂಭದ ಸಮಯ ಇನ್ನೂ ಖಚಿತವಾಗಿಲ್ಲ. ಈಗಾಗಲೇ ಯುಎಇ ತಂಡ ಹಾಗೂ ಮ್ಯಾಚ್​ ಅಫೀಸಿಯಲ್ಸ್ ಸ್ಟೇಡಿಯಂ ತಲುಪಿದ್ದಾರೆ.

ಭಾರತೀಯ ಆಟಗಾರರು ಹ್ಯಾಂಡ್​ ಶೇಖ್ ಮಾಡದ ವಿವಾದಿಂದಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಏಷ್ಯಾಕಪ್​​ನಲ್ಲಿ ತಮ್ಮ ಕೊನೆಯ ಪಂದ್ಯವಾದ ಯುಎಇ ವಿರುದ್ಧ ಆಡುವುದಿಲ್ಲ ಎಂದು ನಿರ್ಧರಿಸಿತ್ತು. ಆದರೆ ಪಿಸಿಬಿ ಅಧಿಕಾರಿಗಳು ಪಾಕಿಸ್ತಾನ ತಂಡ ಕೊನೆಯ ಪಂದ್ಯವನ್ನಾಡಲಿದೆ ಎಂದು ಖಚಿತಪಡಿಸಿದ್ದಾರೆ. ಪಿಸಿಬಿ ಹೆಡ್​ ಆಫೀಸ್​​ನಲ್ಲಿ ಸಭೆ ನಡೆಯುತ್ತಿದ್ದು, ಶೀಘ್ರದಲ್ಲೇ ಅಪ್​ಡೇಟ್ ನೀಡುವುದಾಗಿ ತಿಳಿಸಿದ್ದಾರೆ.