02
ಆದರೆ, 17 ವರ್ಷದ ಆಯುಷ್ ಮಾತ್ರೆಯ 94 ರನ್‌ಗಳ ಭರ್ಜರಿ ಇನ್ನಿಂಗ್ಸ್ ಎಲ್ಲರ ಗಮನ ಸೆಳೆಯಿತು. ಧೋನಿಯ ಕೆಲವು ಹೇಳಿಕೆಗಳು ಆಯುಷ್‌ನ ಸಾಧನೆಯನ್ನು ಮಸುಕಾಗಿಸಿತು ಎಂಬ ಚರ್ಚೆ ಶುರುವಾಯಿತು. ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ, ವಿರಾಟ್ ಕೊಹ್ಲಿ (62 ರನ್), ಜಾಕೋಬ್ ಬೆಥೆಲ್ (55 ರನ್), ಮತ್ತು ರೊಮಾರಿಯೋ ಶೆಫರ್ಡ್ (53* ರನ್, 14 ಎಸೆತ)ರ ಸ್ಫೋಟಕ ಬ್ಯಾಟಿಂಗ್‌ನಿಂದ 213/5 ರನ್ ಗಳಿಸಿತು.