ಜುಲೈ 6 ಆರಂಭವಾದ ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ, ಮುಲ್ಡರ್ ಮೊದಲ ದಿನವೇ 250ಕ್ಕೂ ಹೆಚ್ಚು ರನ್ಗಳಿಸಿ ಅಜೇಯರಾಗಿದ್ದರು. 2ನೇ ದಿನ ಆ ದ್ವಿಶತಕವನ್ನ ತ್ರಿಶತಕವಾಗಿ ಪರಿವರ್ತಿಸಿದರು. ಕೇಶವ್ ಮಹಾರಾಜ್ ನಾಯಕತ್ವದಲ್ಲಿ ಮುಲ್ಡರ್ ಟೆಸ್ಟ್‌ನಲ್ಲಿ ಆಟಗಾರನಾಗಿ ಶತಕ ಗಳಿಸಿದ್ದರು. ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 147 ರನ್‌ಗಳಿಗೆ ಔಟಾಗಿದ್ದರು. ಆ ಪಂದ್ಯದಲ್ಲಿ ಮುಲ್ಡರ್ ಬೌಲರ್ ಆಗಿಯೂ ಉತ್ತಮ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 4 ವಿಕೆಟ್‌ಗಳನ್ನು ಪಡೆದಿದ್ದರು.
ನಾಯಕತ್ವ ಪದಾರ್ಪಣೆ ಪಂದ್ಯದಲ್ಲೇ ತ್ರಿಶತಕ ಸಿಡಿಸಿದ ಮುಲ್ಡರ್! 148 ವರ್ಷಗಳ ಟೆಸ್ಟ್‌ನಲ್ಲಿ ಇದೇ ಮೊದಲು
