ಪಂಜಾಬ್ ಕಿಂಗ್ಸ್ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ರಾಜೀನಾಮೆ; ದಿಢೀರ್ ನಿರ್ಧಾರ ತೆಗೆದುಕೊಂಡಿದ್ದೇಕೆ? / Sunil Joshi resigns as Punjab Kings bowling coach | ಕ್ರೀಡೆ

ಪಂಜಾಬ್ ಕಿಂಗ್ಸ್ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ರಾಜೀನಾಮೆ; ದಿಢೀರ್ ನಿರ್ಧಾರ ತೆಗೆದುಕೊಂಡಿದ್ದೇಕೆ? / Sunil Joshi resigns as Punjab Kings bowling coach | ಕ್ರೀಡೆ

Last Updated:

ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ಪಂಜಾಬ್ ಕಿಂಗ್ಸ್‌ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ಸುನೀಲ್ ಜೋಶಿ ರಾಜೀನಾಮೆ ನೀಡಿದ್ದಾರೆ.

Sunil JoshiSunil Joshi
Sunil Joshi

ಐಪಿಎಲ್ (IPL) 2025 ರ ಆವೃತ್ತಿ ಮುಗಿದು ಹಲವು ತಿಂಗಳುಗಳಾಗಿವೆ. ಮುಂದಿನ ಆವತ್ತಿಗೆ ಐಪಿಎಲ್ ಫ್ರಾಂಚೈಸಿಗಳು ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ವಿರುದ್ಧ ಸೋತ ಪಂಜಾಬ್ ಕಿಂಗ್ಸ್ (Punjab Kings) ತಂಡ ಮಾತ್ರ ಹಿನ್ನಡೆ ಅನುಭವಿಸಿದೆ. ಪಂಜಾಬ್ ತಂಡದ ಬೌಲಿಂಗ್ ಕೋಚ್ (Bowling coach) ಸ್ಥಾನ ಇದ್ದಕ್ಕಿದ್ದಂತೆ ಖಾಲಿಯಾಗಿದೆ. ಪಂಜಾಬ್ ಕಿಂಗ್ಸ್​ ತಂಡದಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕನ್ನಡಿಗ ಸುನಿಲ್ ಜೋಶಿ (Sunil Joshi) ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಅವರು ಈಗ ಬಿಸಿಸಿಐ (BCCI)ನ ಸೆಂಟರ್ ಆಫ್ ಎಕ್ಸಲೆನ್ಸ್‌ (Center of Excellence) ಕ್ರಿಕೆಟ್‌ (Cricket) ಅಕಾಡೆಮಿಯಲ್ಲಿ ಹೊಸ ಪಾತ್ರವನ್ನು ವಹಿಸಿಕೊಳ್ಳಬಹುದು ಎಂದು ವರದಿಯಾಗಿವೆ.

ಸುನೀಲ್ ಜೋಶಿ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಕೆಟ್​ ಅಕಾಡೆಮಿಯಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಬಹುದು. ಅವರು 1996 ಮತ್ತು 2002 ರ ನಡುವೆ 15 ಟೆಸ್ಟ್ ಮತ್ತು 69 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಐಪಿಎಲ್ 2023 ರ ಪ್ರಾರಂಭವಾಗುವ ಮೊದಲು ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಅಡಿಯಲ್ಲಿ (2020-22ರ ನಡುವೆ) ಸುನೀಲ್ ಜೋಶಿ ಪಂಜಾಬ್ ಕಿಂಗ್ಸ್ ಕೋಚಿಂಗ್ ಸಿಬ್ಬಂದಿ ವರ್ಗದ ಭಾಗವಾಗಿದ್ದರು.

ಸ್ಪಿನ್ ಬೌಲಿಂಗ್ ಕೋಚ್

ನೂಶಿನ್ ಅಲ್ ಖದೀರ್, ರಾಕೇಶ್ ಧ್ರುವ್, ಪ್ರೀತಮ್ ಗಂಧೆ ಮತ್ತು ಸೌರಶಿಶ್ ಲಹಿರಿಯಂತವರನ್ನು ಹಿಂದಿಕ್ಕಿ ಸುನೀಲ್ ಜೋಶಿ ಆಯ್ಕೆಯಾಗಿರುವ ಬಗ್ಗೆ ವರದಿಗಳಾಗಿವೆ. ಜೋಶಿ ಟೆಸ್ಟ್ ಆಟಗಾರನಾಗುವುದರ ಜೊತೆಗೆ, ದೇಶೀಯ, ಅಂತಾರಾಷ್ಟ್ರೀಯ ಮತ್ತು ಐಪಿಎಲ್ ತಂಡಗಳ ಕೋಚ್ ಆಗಿಯೂ ವಿಶಿಷ್ಟ ಪರಿಣತಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ: Rishabh Pant: ಶೀಘ್ರದಲ್ಲೇ ರಿಷಭ್ ಪಂತ್ ಕಣಕ್ಕೆ, ಫಿಟ್ನೆಸ್ ಅಪ್ಡೇಟ್ ಇಲ್ಲಿದೆ…

ಜೋಶಿ ಅವರ ಈ ಸಾಧನೆಗಳೇ ಅವರನ್ನು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಕೆಟ್​ ಅಕಾಡೆಮಿಯಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಪಾತ್ರಕ್ಕೆ ಅತ್ಯುತ್ತಮ ಆಯ್ಕೆಯನ್ನಾಗಿ ಮಾಡಿದೆ. ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಕೆಟ್​ ಅಕಾಡೆಮಿಗೆ ಆಯ್ಕೆಯಾಗಿರುವುದು ದೃಢಪಟ್ಟ ನಂತರ, ಜೋಶಿ ಪಂಜಾಬ್ ಕಿಂಗ್ಸ್‌ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಅಪಾರ ಅನುಭವ

ಐಪಿಎಲ್ 2025 ಕ್ಕೂ ಮೊದಲು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದ ಸಾಯಿರಾಜ್ ಬಹುತುಲೆ ಅವರ ಸ್ಥಾನವನ್ನು ಜೋಶಿ ವಹಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಲಕ್ನೋ ಮತ್ತು ಕಾನ್ಪುರದಲ್ಲಿ ಆಸ್ಟ್ರೇಲಿಯಾ ಎ ವಿರುದ್ಧದ ರೆಡ್ ಮತ್ತು ವೈಟ್-ಬಾಲ್ ಸರಣಿಯ ಸಮಯದಲ್ಲಿ ಜೋಶಿ ಭಾರತ ಎ ತಂಡದೊಂದಿಗೆ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ದೇಶೀಯ ಆವೃತ್ತಿಯಲ್ಲಿ ಜೋಶಿ ಉತ್ತರ ಪ್ರದೇಶ ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಅವರು ಬಾಂಗ್ಲಾದೇಶ ಪುರುಷರ ತಂಡಕ್ಕೆ ಸ್ಪಿನ್ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.