ಪೋಷಕರೇ ಚಿಂತೆ ಬಿಡಿ, ಮಕ್ಕಳು ಇನ್ಸ್‌ಟಾಗ್ರಾಂನಲ್ಲಿ ಏನ್ ನೋಡ್ತಾರೆ ಅನ್ನೋದನ್ನು ಇನ್ಮುಂದೆ ನೀವೇ ತಿಳ್ಕೋಬಹುದು! | Instagram announces New feature for teen accounts with the parental control option

ಪೋಷಕರೇ ಚಿಂತೆ ಬಿಡಿ, ಮಕ್ಕಳು ಇನ್ಸ್‌ಟಾಗ್ರಾಂನಲ್ಲಿ ಏನ್ ನೋಡ್ತಾರೆ ಅನ್ನೋದನ್ನು ಇನ್ಮುಂದೆ ನೀವೇ ತಿಳ್ಕೋಬಹುದು! | Instagram announces New feature for teen accounts with the parental control option


Last Updated:

New Instagram Teen Accounts: ಇನ್ಸ್‌ಟಾಗ್ರಾಂ ಬಳಕೆದಾರರಿಗೆ ಮೆಟಾ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಈ ಫೀಚರ್‌ನಿಂದ ಪೋಷಕರಿಗೆ ತುಂಬಾನೆ ಖುಷಿಯಾಗಿದ್ದು, ಯಾಕೆಂದರೆ ಇನ್ಸ್‌ಟಾಗ್ರಾಂ ತಂದಿರುವ ಹೊಸ ಫೀಚರ್‌ನಿಂದ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ. ಏನದು ಹೊಸ ಫೀಚರ್‌ ಅನ್ನೋದನ್ನು ತಿಳಿಯಲು ಈ ಸುದ್ದಿ ಓದಿ.

ಇನ್ಸ್ಟಾಗ್ರಾಮ್ಇನ್ಸ್ಟಾಗ್ರಾಮ್
ಇನ್ಸ್ಟಾಗ್ರಾಮ್

ಈಗಂತೂ ಸೋಶಿಯಲ್ ಮೀಡಿಯಾ (Social Media) ಜಮಾನ. ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ದರ ತನಕ ಅನೇಕ ಮಂದಿ ಮೊಬೈಲ್‌ನಲ್ಲಿ ಟೈಮ್‌ಪಾಸ್‌ಗಾಗಿ ಸೋಶಿಯಲ್ ಮೀಡಿಯಾ ಯೂಸ್ ಮಾಡ್ತಾರೆ. ವಾಟ್ಸಾಪ್ (Whatsapp), ಇನ್ಸ್‌ಟಾಗ್ರಾಂ (Instagram), ಫೇಸ್‌ಬುಕ್ (Facebook), ಯೂಟ್ಯೂಬ್ (Youtube) ಸೇರಿದಂತೆ ವಿವಿಧ ಫ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋಗಳನ್ನು ನೋಡಿ ಟೈಮ್ ಪಾಸ್‌ ಮಾಡ್ತಾರೆ. ಇತ್ತೀಚೆಗಂತೂ ಇನ್ಸ್‌ಟಾಗ್ರಾಂನಲ್ಲಿ ರೀಲ್ಸ್‌ಗಳನ್ನು ನೋಡೋದು ಹೆಚ್ಚಿನವರ ಹವ್ಯಾಸ ಆಗಿ ಹೋಗಿದೆ. ಆದ್ರೆ ಕೆಲವೊಮ್ಮೆ ಅವುಗಳಲ್ಲಿ ಬರುವ ಅಡಲ್ಟ್‌ ಕಂಟೆಂಟ್‌ಗಳನ್ನು ನೋಡಿ ಬೈಯ್ಯುವ ಮಂದಿಯೂ ಇದ್ದಾರೆ.

ಇದೀಗ ಹೊಸ ಫೀಚರ್‌ ಒಂದನ್ನು ಇನ್ಸ್‌ಟಾಗ್ರಾಂ ಪರಿಚಯಿಸಿದೆ. ಮೆಟಾ-ಮಾಲೀಕತ್ವದ ಇನ್‌ಸ್ಟಾಗ್ರಾಮ್ (Instagram) ಭಾರತದ ಬಳಕೆದಾರರಿಗಾಗಿ ಟೀನ್ ಅಕೌಂಟ್ಸ್ ಎಂಬ ಹೊಸ ವೈಶಿಷ್ಟ್ಯ (New Feature)ವನ್ನು ಪರಿಚಯಿಸಿದ್ದು, 16 ವರ್ಷದೊಳಗಿನವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಫೀಚರ್‌ ಗುರಿ ಸುರಕ್ಷಿತ ಮತ್ತು ವಯಸ್ಸಿಗೆ ಸೂಕ್ತವಾದ ಆನ್‌ಲೈನ್ ಕಂಟೆಂಟ್‌ಗಳನ್ನು ಒದಗಿಸುವುದಾಗಿದೆ.

ಇದನ್ನೂ ಓದಿ: Health Tips: 60ರ ಮುಪ್ಪಲ್ಲೂ 20ರ ಯುವಕರ ‘ಯೌವನ’ ಇರಬೇಕಾ? ಇದೊಂದು ಸೊಪ್ಪು ತಿಂದರೆ ಕುದುರೆಬಲ ಬರುತ್ತೆ!

ಟೀನ್ ಖಾತೆಗಳನ್ನು ಹದಿಹರೆಯದ ಬಳಕೆದಾರರಿಗೆ ರಕ್ಷಣೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದ್ದು, ಈ ಖಾತೆಗಳನ್ನು ಮುಂಚಿತವಾಗಿಯೇ ಪ್ರೈವೇಟ್‌ ಮೋಡ್‌ನಲ್ಲಿ ಇರುವಂತೆ ತಯಾರಿಸಲಾಗಿದೆ, ಅಂದರೆ ಹದಿಹರೆಯದವರು ತಮಗೆ ಬೇಕಾದವರು ಮಾತ್ರ ಸ್ನೇಹಿತರಾಗಬಹುದು ಅಥವಾ ಮೆಸೇಜ್‌ ಮಾಡಬಹುದು ಎಂದು ನಿರ್ಧರಿಸುವ ಆಯ್ಕೆಯನ್ನು ಕೊಡಲಾಗಿದೆ. ಇದು ಅವರು ತಿಳಿದಿರುವ ಅಥವಾ ನಂಬುವ ಜನರು ಮಾತ್ರ ಅವರೊಂದಿಗೆ ಸಂವಹನ ನಡೆಸಬಹುದು ಎಂಬುದನ್ನು ಖಚಿತಪಡಿಸುತ್ತದೆ. ಇನ್‌ಸ್ಟಾಗ್ರಾಮ್‌ ಖಾತೆಯನ್ನ ಫಾಲೋ ಮಾಡದವರಿಗೆ ಅವರ ಪೋಸ್ಟ್‌ಗಳನ್ನು ವೀಕ್ಷಿಸಲು ಅಥವಾ ಅವರಿಗೆ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ, ಹೀಗಾಗಿ ಇದು ಹೆಚ್ಚುವರಿ ಭದ್ರತೆಯನ್ನು ಒದಗಿಸುತ್ತದೆ.

ಹದಿಹರೆಯದವರ ಅಕೌಂಟ್‌ ಅನ್ನು ಮತ್ತಷ್ಟು ರಕ್ಷಿಸಲು, ಇನ್‌ಸ್ಟಾಗ್ರಾಮ್ ಹಿಂಸಾತ್ಮಕ ವಿಷಯ ಅಥವಾ ಸೌಂದರ್ಯವರ್ಧಕ ಉತ್ಪನ್ನಗಳ ಪ್ರಚಾರದ ಪೋಸ್ಟ್‌ಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿದೆ. ಹೆಚ್ಚುವರಿಯಾಗಿ, ಈ ಟೀನ್‌ ಅಕೌಂಟ್ಸ್‌ನಲ್ಲಿ ಅವರನ್ನ ಫಾಲೋ ಮಾಡುವ ಜನರು ಮಾತ್ರ ಟ್ಯಾಗ್ ಮಾಡಬಹುದು ಅಥವಾ ಮೆನ್ಶನ್‌ ಮಾಡಬಹುದು. ಮತ್ತು ಕಾಮೆಂಟ್‌ಗಳನ್ನ ಮಾಡಬಹುದು, ಜೊತೆಗೆ ಆಕ್ಷೇಪಾರ್ಹ ಕಾಮೆಂಟ್‌ ಅನ್ನು ಫಿಲ್ಟರ್ ಮಾಡಲಾಗುತ್ತದೆ.

ಮಕ್ಕಳ ಖಾತೆ ಮೇಲೆ ಪೋಷಕರ ನಿಯಂತ್ರಣ

ಇನ್ನೂ ಟೀನ್‌ ಅಕೌಂಟ್ಸ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಪೋಷಕರ ನಿಯಂತ್ರಣ ಆಯ್ಕೆ. ಹೌದು.. ಈಗ ಪೋಷಕರು ತಮ್ಮ ಮಕ್ಕಳು ಯಾರೊಂದಿಗೆ ಸಂವಹನ ನಡೆಸುತ್ತಾರೆ, ಯಾವ ವಿಷಯವನ್ನು ವೀಕ್ಷಿಸುತ್ತಾರೆ ಮತ್ತು ಅವರು ಅಪ್ಲಿಕೇಶನ್‌ನಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎಂಬುದನ್ನು ಒಳಗೊಂಡಂತೆ ಇನ್‌ಸ್ಟಾಗ್ರಾಮ್‌ (Instagram) ನಲ್ಲಿ ಅವರ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು. ಈ ಸುರಕ್ಷತಾ ಕ್ರಮಗಳನ್ನು ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗುತ್ತದೆ ಮತ್ತು ಪೋಷಕರ ಒಪ್ಪಿಗೆಯಿಲ್ಲದೆ ಬದಲಾಯಿಸಲಾಗುವುದಿಲ್ಲ.

ಇದನ್ನೂ ಓದಿ: Set Dosa Recipe: ಮೃದುವಾದ ಸೆಟ್ ದೋಸೆ ತಯಾರಿಸುವುದು ಹೇಗೆ? ಅಜ್ಜಿ ಹೇಳಿಕೊಟ್ಟ ರೆಸಿಪಿ ಇಲ್ಲಿದೆ!

ಇದು ಪೋಷಕರಿಗೆ ತಮ್ಮ ಮಕ್ಕಳನ್ನ ಸುರಕ್ಷಿತವಾಗಿಡಲು ತುಂಬ ಉಪಕಾರಿಯಾಗಲಿದೆ. ಹದಿಹರೆಯದ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯ ಮೇಲೆ ಇದು ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ. ಮತ್ತು ಅವರ ಮಕ್ಕಳು ಆನ್‌ಲೈನ್‌ನಲ್ಲಿ ಜವಾಬ್ದಾರಿಯುತವಾಗಿ ಸಮಯ ಕಳೆಯುತ್ತಿದ್ದಾರಾ? ಇಲ್ವಾ? ಎಂಬುದನ್ನ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಹದಿಹರೆಯದವರ ಸುರಕ್ಷತೆಗೆ ಇನ್‌ಸ್ಟಾಗ್ರಾಮ್‌ ಆದ್ಯತೆ

ಇನ್‌ಸ್ಟಾಗ್ರಾಮ್ ಸ್ಕ್ರೀನ್ ಸಮಯ ಮತ್ತು ವ್ಯಸನದ ಬಗ್ಗೆ ಇರುವ ಕಳವಳಗಳಿಗೆ ಸಹ ಪರಿಹಾರ ನೀಡಲಿದೆ. ಹದಿಹರೆಯದವರು ಅಪ್ಲಿಕೇಶನ್‌ನಲ್ಲಿ ನಿರ್ದಿಷ್ಟ ಸಮಯವನ್ನು ಕಳೆದ ನಂತರ ವಿರಾಮಗಳನ್ನು ತೆಗೆದುಕೊಳ್ಳುವಂತೆ ನೆನಪಿಸುವ ನೋಟಿಫಿಕೇಶನ್‌ಗಳನ್ನು ಸ್ವೀಕರಿಸಬಹುದು. ಸ್ಲೀಪ್ ಮೋಡ್ ವೈಶಿಷ್ಟ್ಯವು ರಾತ್ರಿ 10 ರಿಂದ ಬೆಳಿಗ್ಗೆ 7 ರ ನಡುವೆ ಅಧಿಸೂಚನೆಗಳನ್ನು (Notification) ಮ್ಯೂಟ್ ಮಾಡುತ್ತದೆ ಮತ್ತು ಯಾವುದೇ ಮೆಸೇಜ್‌ಗಳಿಗೆ ಸ್ವಯಂಚಾಲಿತ ಪ್ರತಿಕ್ರಿಯೆಯನ್ನು ಕಳುಹಿಸುತ್ತದೆ, ಇದು ಆರೋಗ್ಯಕರ ನಿದ್ರೆಯ ಅಭ್ಯಾಸವನ್ನು ಉತ್ತೇಜಿಸುತ್ತದೆ.

ಕನ್ನಡ ಸುದ್ದಿ/ ನ್ಯೂಸ್/Tech Trend/

Instagram New Feature: ಪೋಷಕರೇ ಚಿಂತೆ ಬಿಡಿ, ಮಕ್ಕಳು ಇನ್ಸ್‌ಟಾಗ್ರಾಂನಲ್ಲಿ ಏನ್ ನೋಡ್ತಾರೆ ಅನ್ನೋದನ್ನು ಇನ್ಮುಂದೆ ನೀವೇ ತಿಳ್ಕೋಬಹುದು!