ಬಟಾ ಬಯಲಾಯ್ತು ಹರಾಜು ವೇಳೆ SRH ಮಾಡಿದ ಮಹಾ ಪ್ರಮಾದ! ಆ ದೇವರೇ ಬಂದ್ರು ಆ ಸಮಸ್ಯೆ ಸರಿಪಡಿಸಲು ಅಸಾಧ್ಯ

ಬಟಾ ಬಯಲಾಯ್ತು ಹರಾಜು ವೇಳೆ SRH ಮಾಡಿದ ಮಹಾ ಪ್ರಮಾದ! ಆ ದೇವರೇ ಬಂದ್ರು ಆ ಸಮಸ್ಯೆ ಸರಿಪಡಿಸಲು ಅಸಾಧ್ಯ

ಕಳೆದ ಋತುವಿನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಂತ್ರದಿಂದ ಯಶಸ್ಸು ಕಂಡಿದ್ದ ಸನ್‌ರೈಸರ್ಸ್, ಈ ಬಾರಿ ಅದೇ ತಂತ್ರದಲ್ಲಿ ವಿಫಲವಾಗುತ್ತಿದೆ. ಮೊದಲ ಪಂದ್ಯದಲ್ಲಿ 286 ರನ್‌ಗಳ ದೊಡ್ಡ ಮೊತ್ತ ಗಳಿಸಿದ ತಂಡ, ಎರಡನೇ ಪಂದ್ಯದಲ್ಲಿ 191, ಮೂರನೇ ಪಂದ್ಯದಲ್ಲಿ 163 ಮತ್ತು ಕೆಕೆಆರ್ ವಿರುದ್ಧ ಕೇವಲ 120 ರನ್‌ಗಳಿಗೆ ಮುಗ್ಗರಿಸಿತು. ಮೂರು ಪಂದ್ಯಗಳಲ್ಲಿ 200ರ ಗಡಿಯನ್ನೂ ಮುಟ್ಟಲಾಗದಿರುವುದು ತಂಡದ ಬ್ಯಾಟಿಂಗ್ ದೌರ್ಬಲ್ಯವನ್ನು ತೋರಿಸುತ್ತಿದೆ.