ಬೆಂಗಳೂರಿಗರೇ ಎಚ್ಚರ! ನಾಳೆ ತಪ್ಪಿಯೂ ಈ ಟೈಮಲ್ಲಿ ಹೊರಬರಬೇಡಿ, ತೊಂದರೆ ಪಕ್ಕಾ | RCB vs Delhi Capitals match alert-bengalurians-do-not-come-out-tomorrow reason here

ಬೆಂಗಳೂರಿಗರೇ ಎಚ್ಚರ! ನಾಳೆ ತಪ್ಪಿಯೂ ಈ ಟೈಮಲ್ಲಿ ಹೊರಬರಬೇಡಿ, ತೊಂದರೆ ಪಕ್ಕಾ | RCB vs Delhi Capitals match alert-bengalurians-do-not-come-out-tomorrow reason here

Last Updated:

ಆರ್‌ಸಿಬಿ ತಂಡ 4 ಪಂದ್ಯಗಳಲ್ಲಿ 3 ಗೆದ್ದಿದ್ದು, ನಾಳೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ. ಟ್ರಾಫಿಕ್ ಸಮಸ್ಯೆ ತಪ್ಪಿಸಲು ಬಿಎಂಟಿಸಿ, ಮೆಟ್ರೋ ಬಳಸಲು ಮನವಿ.

ಸಂಗ್ರಹ ಚಿತ್ರಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಈಗಾಗಲೇ ಇಂಡಿಯನ್‌ ಪ್ರೀಮಿಯರ್ ಲೀಗ್‌ 18ನೇ ಸೀಸನ್ (IPL) ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಹಲವಾರು ಪಂದ್ಯಗಳು ನಡೆದಿದೆ. ಅದರಲ್ಲೂ ಈ ಬಾರಿ ಆರ್‌‌ಸಿಬಿ (RCB) ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈಗಾಗಲೇ ರಜತ್‌ ಪಾಟಿದಾರ್‌ ನಾಯಕತ್ವದಲ್ಲಿ ಆರ್‌ಸಿಬಿ ತಂಡ 4 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 3 ಮ್ಯಾಚ್‌‌ನಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ ತವರಿನಲ್ಲೇ ಆರ್‌ಸಿಬಿ ಗುಜರಾತ್‌‌ ಟೈಟಾನ್ಸ್ ವಿರುದ್ಧ ಸೋಲುಂಡಿತ್ತು. ಇದೀಗ ಮತ್ತೆ ನಾಳೆ ತವರಿನಲ್ಲೇ ಆರ್‌ಸಿಬಿ ಪಂದ್ಯ ಇರಲಿದ್ದು, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ (RCB vs DC Match) ಆಡಲಿದ್ದಾರೆ.

ಹೌದು, ನಾಳೆ (ಏಪ್ರಿಲ್ 10) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿ ಆಗಲಿದೆ. ಕಳೆದ 17 ಸೀಸನ್‌ಗಳಲ್ಲಿ ಒಮ್ಮೆಯೂ ಆರ್‌ಸಿಬಿ ಕಪ್‌ ಗೆದ್ದಿಲ್ಲ. ಆದರೆ ಆರ್‌ಸಿಬಿ ಫ್ಯಾನ್ಸ್‌ ಮಾತ್ರ ಸೀಸನ್‌ ಬಂದಂತೆ ಹೆಚ್ಚಾಗುತ್ತಲೇ ಇರುತ್ತಾರೆ. ಅದೇ ರೀತಿ ಬೆಂಗಳೂರಿನಲ್ಲಿ ಮ್ಯಾಚ್‌ ಇತ್ತೆಂದರೆ ಸಾಕು ಸಾಗರದ ಅಲೆಗಳಂತೆ ಜನರ ಸ್ಟೇಡಿಯಂನತ್ತ ಹರಿದು ಬರುತ್ತಾರೆ. ಈ ವೇಳೆ ಸಂಚಾರಿ ಪೊಲೀಸರು ಸಹ ಅಲರ್ಟ್‌ ಆಗಿರುತ್ತಾರೆ.‘

ಇದನ್ನೂ ಓದಿ: ಈ ದಿನ ಮಾಂಸ ಮಾರಾಟ ನಿಷೇಧ! ಮಟನ್‌, ಚಿಕನ್‌ ಖರೀದಿಸೋ ಮುನ್ನ ಈ ಸುದ್ದಿ ಓದಿ

ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್!

ಏಪ್ರಿಲ್ 10 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾತ್ರಿ 7 30ಗೆ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ರಣರೋಚಕ ಪಂದ್ಯಾಟ ನಡೆಯಲಿದೆ. ಇದನ್ನು ನೋಡಲು ಬೆಂಗಳೂರು ಮಾತ್ರವಲ್ಲದೆ ದೇಶದ, ರಾಜ್ಯದ ಮೂಲೆ ಮೂಲೆಯಿಂದ ಜನ ಬರುತ್ತಾರೆ.

ಸಂಗ್ರಹ ಚಿತ್ರ

ಆದ್ರೆ ಈ ವೇಳೆ ಟ್ರಾಫಿಕ್ ಸಮಸ್ಯೆ ಎದುರಾಗೋದು ಸಹಜ. ಮೊದಲೇ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಬಗ್ಗೆ ಹೇಳಬೇಕಂತಿಲ್ಲ. ಹೀಗಿರುವಾಗ ನಾಳೆ ಆರ್‌ಸಿಬಿ ಮ್ಯಾಚ್‌ ಇದೆ ಅಂದ್ರೆ ಒಂದೇ ಒಂದು ಗಾಡಿಗಳೂ ರೋಡಿಂದ ಅಲುಗಾಡಲ್ಲ ಅನ್ಸುತ್ತೆ. ಏಕೆಂದರೆ ಅಷ್ಟೂ ವಾಹನಗಳು ನಾಳೆ ರೋಡ್‌‌ಗಳಲ್ಲಿರುತ್ತವೆ. ಆದ್ದರಿಂದ ಈ ದಿನ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಮುತ್ತದ ರೋಡ್‌ಗಳಲ್ಲಿ ಹೋಗುವವರು ಎಚ್ಚರದಿಂದ ಇರುವುದು ಸೂಕ್ತ. ತುರ್ತು ಕೆಲಸಗಳಿದ್ದವರು ಬೇರೆ ದಾರಿಯನ್ನು ಆಯ್ಕೆ ಮಾಡಿಕೊಳ್ಳಿ.

ಬೆಂಗಳೂರಿನಲ್ಲಿ ಆರ್‌ಸಿಬಿ ಎರಡನೇ ಮ್ಯಾಚ್‌! 

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿಯ ಎರಡನೇ ಮ್ಯಾಚ್‌ ಆಗಿದೆ. ಕಳೆದ ಏಪ್ರಿಲ್ 2 ರಂದು ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಹಣಾಹಣಿ ನಡೆದಿತ್ತು. ಈ ಪಂದ್ಯದಲ್ಲಿ ಆರ್‌‌ಸಿಬಿ ಗುಜರಾತ್‌ ಟೈಟಾನ್ಸ್ ವಿರುದ್ಧ ಸೋಲು ಕಂಡಿತ್ತು.

ಇದೀಗ ನಾಳೆ ಮತ್ತೆ ಆರ್‌‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹಣಾಹಣಿ ನಡೆಯಲಿದೆ. ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಅನ್ನೋ ಕುತೂಹಲ ಹೆಚ್ಚಿದೆ. ಈ ಬಾರಿಯಂತೂ ಆರ್‌ಸಿಬಿ ತುಂಬಾನೇ ಫಾರ್ಮ್‌ನಲ್ಲಿದ್ದಾರೆ. ಈ ಮಧ್ಯೆ ನಾಳೆಯೂ ಆರ್‌ಸಿಬಿ ಗೆಲ್ಬೇಕು ಅನ್ನೋದು ಅಭಿಮಾನಿಗಳ ಆಶಯ.

ಕಳೆದ ಮ್ಯಾಚ್‌‌ನಲ್ಲಿ ಪೊಲೀಸರ ನಿಯಮ!

ಏಪ್ರಿಲ್ 2 ರಂದು ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಪಾರ್ಕಿಂಗ್‌ಗೆ ಅವಕಾಶ ಇರುವುದಿಲ್ಲ ಎಂದು ಸೂಚನೆ ಹೊರಡಿಸಲಾಗಿತ್ತು. ಮ್ಯಾಚ್ ನೋಡಲು ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿತ್ತು. ಇದೇ ಕಾರಣದಿಂದ ಈ ಬಾರಿಯೂ ಬೆಂಗಳೂರಿಗರೇ ನೀವು ಹೊರಗೆ ಬರುವ ಮುನ್ನ ಎಚ್ಚರವಾಗಿರಿ ಎಂದು ಹೇಳಲಾಗಿದೆ. ಕ್ರೀಡಾಂಗಣ ಸುತ್ತ ಮುತ್ತ ವಾಹನಗಳ ನಿಲುಗಡೆ ಸ್ಥಳ ಕೊರತೆ ಇರುವುದರಿಂದ ಕಳೆದ ಬಾರಿ ಆ ಭಾಗದಲ್ಲಿ ಓಡಾಡುವ ಜನರು ಬಿಎಂಟಿಸಿ, ಮೆಟ್ರೋ ಬಳಸಲು ಮನವಿ ಮಾಡಲಾಗಿತ್ತು. ಅಲ್ಲದೇ ಓಲಾ, ಉಬರ್, ಆಟೋ ಇತ್ಯಾದಿ ಕ್ಯಾಬ್‌ಗಳು ಪಿಕ್ ಆಪ್ ಮತ್ತು ಟ್ರಾಪ್ ಮಾಡಲು ಸ್ಥಳ ನಿಗದಿ ಮಾಡಲಾಗಿತ್ತು. ಇನ್ನು ಇದೇ ನಿಯಮವನ್ನು ನಾಳೆಯೂ ಜಾರಿಗೆ ತರಬಹುದು ಎಂದು ನಿರೀಕ್ಷಿಸಲಾಗಿದೆ.