ಭಾಝ್​ಬಾಲ್​ ಆಡಲು ಹೋಗಿ ಧೂಳೀಪಟವಾದ ಆಂಗ್ಲರು! ಇಂಗ್ಲೆಂಡ್​ ತಂಡವನ್ನ 247ಕ್ಕೆ ಬಗ್ಗುಬಡಿದು ಟೀಮ್ ಇಂಡಿಯಾ ತಿರುಗೇಟು | IND vs ENG 5th Test Prasidh and Siraj 4-wicket hauls bowl England out for 247 | ಕ್ರೀಡೆ

ಭಾಝ್​ಬಾಲ್​ ಆಡಲು ಹೋಗಿ ಧೂಳೀಪಟವಾದ ಆಂಗ್ಲರು! ಇಂಗ್ಲೆಂಡ್​ ತಂಡವನ್ನ 247ಕ್ಕೆ ಬಗ್ಗುಬಡಿದು ಟೀಮ್ ಇಂಡಿಯಾ ತಿರುಗೇಟು | IND vs ENG 5th Test Prasidh and Siraj 4-wicket hauls bowl England out for 247 | ಕ್ರೀಡೆ

Last Updated:

ಭಾರತ ತಂಡದ ವೇಗಿಗಳು ತಿರುಗೇಟಿಗೆ ನಲುಗಿದ ಇಂಗ್ಲೆಂಟ್ 5ನೇ ಟೆಸ್ಟ್ ಪಂದ್ಯದಲ್ಲಿ ಕೇವಲ 247ಕ್ಕೆ ಆಲೌಟ್ ಆಗಿದೆ. ಜ್ಯಾಕ್ ಕ್ರಾಲಿ (64), ಹ್ಯಾರಿ ಬ್ರೂಕ್ (53) ಹಾಗೂ ಬೆನ್ ಡಕೆಟ್ 43 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

 ಭಾರತ ತಂಡ ಭಾರತ ತಂಡ
ಭಾರತ ತಂಡ

ಭಾರತ ತಂಡದ ವೇಗಿಗಳು ತಿರುಗೇಟಿಗೆ ನಲುಗಿದ ಇಂಗ್ಲೆಂಟ್ 5ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 247ಕ್ಕೆ ಆಲೌಟ್ ಆಗಿದೆ. ಜ್ಯಾಕ್ ಕ್ರಾಲಿ (64), ಹ್ಯಾರಿ ಬ್ರೂಕ್ (53) ಹಾಗೂ ಬೆನ್ ಡಕೆಟ್ 43 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಮೊದಲ ವಿಕೆಟ್​ಗೆ 92 ರನ್​ಗಳಿಸಿ ಉತ್ತಮ ಆರಂಭ ಪಡೆಯಿತಾದರೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಭಾರತ ತಂಡದ ಬೌಲರ್​ಗಳ ಮುಂದೆ ನಿಲ್ಲಲಾರರಾದರು. ಆದರೂ 23 ರನ್​ಗಳ ಮುನ್ನಡೆ ಪಡೆಯುವಲ್ಲಿ ಇಂಗ್ಲೆಂಡ್ ಸಫಲರಾದರು.

ಭಾರತ ತಂಡ 224ಕ್ಕೆ ಆಲೌಟ್ ಆದ ನಂತರ ಬ್ಯಾಟಿಂಗ್​ ಇಳಿದ ಇಂಗ್ಲೆಂಡ್ ಭರ್ಜರಿಯಾದ ಆರಂಭವನ್ನೇ ಪಡೆದುಕೊಂಡಿತು. ಮೊದಲ ವಿಕೆಟ್​ಗೆ ಜ್ಯಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ 92 ರನ್​ಗಳ ಸ್ಫೋಟಕ ಆರಂಭ ಪಡೆದುಕೊಂಡಿತು.  ಈ ಇಬ್ಬರು ಟಿ20 ಪಂದ್ಯದಲ್ಲಿ ಆಡುವಂತೆ ಬೆಂಡೆತ್ತಿದ್ದರು. ಇವರಿಬ್ಬರು ಕೇವಲ 78 ಎಸೆತಗಳಲ್ಲಿ 92 ರನ್​ ಸೇರಿಸಿದರು. ಅಪಾಯಕಾರಿಯಾಗಿದ್ದ ಈ ಜೋಡಿಯನ್ನ ಆಕಾಶ್ ದೀಪ್ ಬ್ರೇಕ್ ಮಾಡಿದರು.  38 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 43 ರನ್​ಗಳಿಸಿದ್ದ ಡಕೆಟ್​​ ಕೀಪರ್ ಜುರೆಲ್​ ಕ್ಯಾಚ್ ನೀಡಿ ಔಟ್ ಆದರು.

ಇದನ್ನೂ ಓದಿ: Joe Root: ಭಾರತದ ವಿರುದ್ಧ ಅತಿ ಹೆಚ್ಚು ರನ್! ಟೆಸ್ಟ್​ ಕ್ರಿಕೆಟ್​​ನಲ್ಲಿ ಚರಿತ್ರೆ ಸೃಷ್ಟಿಸಿದ ಜೋ ರೂಟ್

2ನೇ ವಿಕೆಟ್​ಗೆ ಕ್ರಾಲೆ ಜೊತೆಗೂಡಿದ ನಾಯಕ ಒಲ್ಲಿ ಪೋಪ್ 37 ರನ್​ ರನ್​ಗಳ ಜೊತೆಯಾಟ ನಡೆಸಿದರು. ಇದೇ 2ನೇ  ಗರಿಷ್ಠ ಜೊತೆಯಾಟವಾಯಿತು. ಜ್ಯಾಕ್ ಕ್ರಾಲಿ 57 ಎಸೆತಗಳಲ್ಲಿ 14 ಬೌಂಡರಿ ಸಹಿತ 64 ರನ್​ಗಳಿಸಿ ಪ್ರಸಿಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು.  ಪೋಪ್ 22 ರನ್​ಗಳಿಸಿ ರನ್​ಗಳಿಸಿ ಸಿರಾಜ್ ಬೌಲಿಂಗ್​​ನಲ್ಲಿ ಎಲ್​ಬಿ ಡಬ್ಲ್ಯೂ ಆದರು.  ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ 45 ಎಸೆತಗಳಲ್ಲಿ 6 ಬೌಂಡರಿ ಸಹಿತ 29 ರನ್​ಗಳಿಸಿ ಸಿರಾಜ್ ಬೌಲಿಂಗ್​​ನಲ್ಲಿ ಎಲ್​ಬಿಬ್ಲ್ಯೂ ಬಲೆಗೆ ಬಿದ್ದರು.

5ನೇ ಕ್ರಮಾಂಕದಲ್ಲಿ ಬಂದ ಹ್ಯಾರಿ ಬ್ರೂಕ್ 64 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 53 ರನ್​ಗಳಿಸಿ 2ನೇ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಇವರಿಗೆ ಯಾವ ಬ್ಯಾಟರ್ ಕೂಡ ಸಾಥ್ ನೀಡದ ಕಾರಣ ತಂಡದ ಮೊತ್ತ ನಿರೀಕ್ಷಿಸಿದಷ್ಟು ಹೋಗಲು ಸಾಧ್ಯವಾಗಲಿಲ್ಲ. ಜೇಮಿ ಸ್ಮಿತ್ 8, ಜಾಕೋಬ್ ಬೆಥೆಲ್ 6 ರನ್​ಗಳಿಸಿ ಔಟ್ ಆದರೆ, ಬಾಲಂಗೋಚಿಗಳಾದ ಗಸ್ ಅಟ್ಕಿನ್ಸನ್ (11) ಹಾಗೂ ಜೇಮಿ ಓವರ್ಟನ್ ಖಾತೆ ತೆರೆಯದೇ ಪೆವಿಲಿಯನ್ ಸೇರಿದರು.

ಭಾರತದ ಪರ ಮಿಂಚಿದ ಮೊಹಮ್ಮದ್ ಸಿರಾಜ್ 86ಕ್ಕೆ 4 ವಿಕೆಟ್ ಪಡೆದರೆ, ಪ್ರಸಿಧ್ ಕೃಷ್ಣ 62ಕ್ಕೆ 4 ವಿಕೆಟ್ ಪಡೆದು ಇಂಗ್ಲೆಂಡ್ ಪತನಕ್ಕೆ ಕಾರಣರಾದರು. ಆಕಾಶ್ ದೀಪ್ 1 ವಿಕೆಟ್ ಪಡೆದರು.

ಕೈಕೊಟ್ಟ ಬಾಝ್​ ಬಾಲ್

ಬ್ಯಾಟ್​ಗೆ ನೆರವು ನೀಡುವ ಪಿಚ್​ನಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಲು ಹೋದ ಇಂಗ್ಲೆಂಡ್ ಭಾರತೀಯ ಬೌಲಿಂಗ್ ದಾಳಿಯನ್ನ ಎದುರಿಸುವಲ್ಲಿ ವಿಫಲರಾಗಿ ದಿಢೀರ್ ಕುಸಿತ ಕಂಡಿತು. ಮೊದಲ 12 ಓವರ್​ಗಳಲ್ಲಿ 92ರನ್​ಗಳಿಸಿದ್ದ ಇಂಗ್ಲೆಂಡ್  ಮೊದಲ ವಿಕೆಟ್ ಪತನದ ನಂತರ ಒಂದೇ ಒಂದು ಅರ್ಧಶತಕದ ಜೊತೆಯಾಟ ಕಾಣಲು ಸಾಧ್ಯವಾಗಲಿಲ್ಲ. ಟೆಸ್ಟ್​​ ಆಟವನ್ನ ಟಿ20 ಮಾದರಿಯಲ್ಲಿ ಆಡಲು ಹೋಗಿ ಇಂಗ್ಲೆಂಡ್ ಕೈ ಸುಟ್ಟುಕೊಂಡಿತು.

ಜೋ ರೂಟ್ ದಾಖಲೆ

ಈ ಇನ್ನಿಂಗ್ಸ್​​ನಲ್ಲಿ 29 ರನ್​ಗಳಿಸಿದ ಜೋ ರೂಟ್ ಎರಡು ಪ್ರಮುಖ ದಾಖಲೆ ಬ್ರೇಕ್ ಮಾಡಿದರು. ಭಾರತ ತಂಡದ ವಿರುದ್ಧ ಒಂದೇ ದೇಶದಲ್ಲಿ ಹೆಚ್ಚು ರನ್​ಗಳಿಸಿದ ಆಟಗಾರರಲ್ಲಿ ರೂಟ್ ಅಗ್ರಸ್ಥಾನದಲ್ಲಿದ್ದರೆ, ರಿಕಿ ಪಾಂಟಿಂಗ್ ಭಾರತದ ವಿರುದ್ಧ ಆಸ್ಟ್ರೇಲಿಯಾದಲ್ಲಿ 1893 ರನ್​ಗಳಿಸಿದ್ದಾರೆ. ವಿಂಡೀಸ್​ ತಂಡದ ಚಂದ್ರಪಾಲ್ ವೆಸ್ ಇಂಡೀಸ್​​ನಲ್ಲಿ 1547 ರನ್​, ಪಾಕಿಸ್ತಾನದ ಜಹೀರ್ ಅಬ್ಬಾಸ್ ಪಾಕಿಸ್ತಾನದಲ್ಲಿ1427 ರನ್, ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದಲ್ಲಿ 1396 ರನ್​ಗಳಿಸಿದ್ದಾರೆ.