Last Updated:
2025ರ ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 135 ರನ್ ಟಾರ್ಗೆಟ್ ನೀಡಿತ್ತು. ಆದ್ರೆ ಬಾಂಗ್ಲಾದೇಶ ತಂಡ 124 ರನ್ ಗಳಿಸಿ 11 ರನ್‌ಗಳ ಅಂತರದಲ್ಲಿ ಒಂದು ವಿಕೆಟ್ ಉಳಿಸಿಕೊಂಡು ಪಾಕ್ ವಿರುದ್ಧ ಸೋಲೊಪ್ಪಿಕೊಂಡಿದೆ. ಈ ಮೂಲಕ 2025ರ ಏಷ್ಯಾ ಕಪ್ ಪೈನಲ್ ಹಣಾಹಣಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದೆ.
ಏಷ್ಯಾಕಪ್ 2025ರ (Asia Cup 2025) ಪಂದ್ಯಾಟ ಇನ್ನೇನು ಒಂದು ಹಂತ ಮಾತ್ರ ಬಾಕಿಯಿದೆ. ಬಾಂಗ್ಲಾದೇಶಕ್ಕೆ ಸೋಲುಣಿಸಿ ಭಾರತ ಈಗಾಗಲೇ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಆದರೆ ಭಾರತಕ್ಕೆ ಏಷ್ಯಾಕಪ್ ಫೈನಲ್‌ನಲ್ಲಿ ಮುಖಾಮುಖಿ ಯಾರಾಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಬಾಂಗ್ಲಾದ ವಿರುದ್ಧ 11 ರನ್‌ಗಳ ಜಯಸಾಧಿಸಿ ಪಾಕಿಸ್ತಾನ (Bangladesh vs Pakistan) ಫೈನಲ್ ಹಣಾಹಣಿಗೆ ಕಾಲಿಟ್ಟಿದೆ. ಈ ಮೂಲಕ 2025ರ ಏಷ್ಯಾ ಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ವರ್ಸಸ್ ಪಾಕಿಸ್ತಾನ (India vs Pakistan Final) ಮುಖಾಮುಖಿಯಾಗಲಿದೆ.
ಪಾಕಿಸ್ತಾನ ನೀಡಿದ್ದ 135 ರನ್‌ಗಳಿಗೆ ಪ್ರತಿಯಾಗಿ ಬಾಂಗ್ಲಾದೇಶ ತಂಡ ಬರೀ 124 ರನ್ ಗಳಿಸುವ ಮೂಲಕ ಒಂದು ವಿಕೆಟ್ ಉಳಿಸಿಕೊಂಡು 11 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಈ ಮೂಲಕ ಪಾಕಿಸ್ತಾನ ಸುಲಭವಾಗಿ ಫೈನಲ್‌ಗೆ ಲಗ್ಗೆಯಿಟ್ಟಿತು.
September 25, 2025 11:58 PM IST