ಸೆಲೆಬ್ರಿಟಿ ಜೋಡಿ ಅಂತ ಹೇಳಿದರೆ ಸಾಕು ನಮ್ಮಲ್ಲಿ ಅನೇಕರ ಕಣ್ಮುಂದೆ ಬರುವುದು ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರದು ಅಂತ ಹೇಳಬಹುದು.
ಹೌದು.. ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಇಬ್ಬರಿಗೂ ಅವರದ್ದೇ ಆದ ಅಭಿಮಾನಿ ಬಳಗವಿದ್ದು, ಇವರ ಜೋಡಿಗೂ ಸಹ ಪ್ರತ್ಯೇಕವಾದ ಅಭಿಮಾನಿ ಬಳಗವಿದೆ.
ಆರಂಭದಲ್ಲಿ, ಅವರು ತಮ್ಮ ಪ್ರೇಮ ಸಂಬಂಧವನ್ನು ತುಂಬಾನೇ ಖಾಸಗಿಯಾಗಿ ಇಟ್ಟುಕೊಂಡಿದ್ದರು. ಆದರೆ, ನಂತರ, ಅವರು ತಾವು ಒಬ್ಬರನ್ನೊಬ್ಬರು ತುಂಬಾನೇ ಇಷ್ಟಪಡುತ್ತಿದ್ದೇವೆ ಅಂತ ದೃಢಪಡಿಸಿದರು.
2017ರಲ್ಲಿ ಇಟಲಿಯಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ, ವಿರಾಟ್ ಮತ್ತು ಅನುಷ್ಕಾ ಇಬ್ಬರು ವಿವಾಹವಾದರು, ವಿರಾಟ್ ಮದುವೆಯಾಗುವ ಮೊದಲು ಅನುಷ್ಕಾ ಅವರನ್ನು ಭೇಟಿ ಮಾಡಿದಾಗಲೆಲ್ಲಾ ಅವರ ಮನೆಯ ಸಮೀಪವಿರುವ ಬೀದಿಯಲ್ಲಿರುವ ಮಕ್ಕಳು ತಮಾಷೆ ಮಾಡುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ? ವಿರಾಟ್ ಮತ್ತು ಅನುಷ್ಕಾ ಅವರ ವಿವಾಹದ 7 ವರ್ಷಗಳ ನಂತರ, ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಈಗ ಅವರ ಪ್ರೀತಿ, ಪ್ರೇಮ ಮತ್ತು ಪ್ರಣಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ ನೋಡಿ.
ಇತ್ತೀಚೆಗೆ ದಿ ರೌನಾಕ್ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ, ವಿವೇಕ್ ಅಗ್ನಿಹೋತ್ರಿ ಅವರು ಅನುಷ್ಕಾ ಶರ್ಮಾ ಅವರ ನೆರೆಯವರು ಎಂದು ಬಹಿರಂಗಪಡಿಸಿದರು.
ಚಲನಚಿತ್ರ ನಿರ್ಮಾಪಕ ‘ಅನುಷ್ಕಾ ಶರ್ಮಾ ಆಗ ನನ್ನ ನೆರೆಯವರಾಗಿದ್ದರು. ನಾವು ಅದೇ ಬಿಲ್ಡಿಂಗ್‌ನಲ್ಲಿಯೇ ವಾಸಿಸುತ್ತಿದ್ದೆವು, ನಂತರ ನಾವು ಅಲ್ಲಿಂದ ಬೇರೆಡೆಗೆ ಹೋದೆವು ಮತ್ತು ಅವರು ಕೂಡ ಬೇರೆ ಕಡೆಗೆ ಹೋದರು. ಆದರೆ ಅವರ ತಂದೆ ಇನ್ನೂ ನನಗೆ ಉತ್ತಮ ಸ್ನೇಹಿತರು,’ ಅಂತ ಅವರು ಹೇಳಿದರು.
ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರು ವಿರಾಟ್ ಮತ್ತು ಅನುಷ್ಕಾ ಅವರ ಬಗ್ಗೆ ಮಾತಾಡುತ್ತಾ ‘ಅವರ ಮದುವೆಗೂ ಬಹಳ ಹಿಂದಿನ ವಿಚಾರ ಇದು, ವಿರಾಟ್ ಆಗಾಗ್ಗೆ ಅನುಷ್ಕಾ ಅವರ ಮನೆಗೆ ಅವರನ್ನು ಭೇಟಿಯಾಗಲು ಬರುತ್ತಿದ್ದರು.
ಆಗ ನಮ್ಮ ಮನೆಯ ಬೀದಿಯಲ್ಲಿ ಮಕ್ಕಳು ವಿರಾಟ್ ಅವರನ್ನು ನೋಡಿ ತುಂಬಾನೇ ಖುಷಿ ಪಡುತ್ತಿದ್ದರು. ಅವರು ಪ್ರೀತಿಯಿಂದ ಅವರ ಕಾರಿನ ಹಿಂದೆ ತುಂಬಾ ದೂರದವರೆಗೂ ಓಡುತ್ತಿದ್ದರು.
ಅವರ ಬಗ್ಗೆ ನನಗೆ ಇರುವ ಏಕೈಕ ನೆನಪು ಇದು. ನಾನು ಅವರನ್ನು ವೈಯಕ್ತಿಕವಾಗಿ ಎಂದಿಗೂ ಭೇಟಿ ಮಾಡಿಲ್ಲ. ಅಲ್ಲದೆ, ನನಗೆ ಕ್ರಿಕೆಟ್‌ನಲ್ಲಿ ಹೆಚ್ಚು ಆಸಕ್ತಿ ಸಹ ಇಲ್ಲ, ನನ್ನ ಕೆಲಸದ ನಡುವೆ ನನಗೆ ಅಷ್ಟೊಂದು ಸಮಯ ಸಹ ಸಿಗುವುದಿಲ್ಲ,’ ಅಂತ ವಿವೇಕ್ ಅವರು ಹೇಳಿದ್ದಾರೆ.
ಇದೀಗ ವಿರಾಟ್ ಮತ್ತು ಅನುಷ್ಕಾ ಮದುವೆಯಾಗಿ ಏಳು ವರ್ಷಗಳು ಕಳೆದಿದ್ದು, ವಿರಾಟ್ ಮತ್ತು ಅನುಷ್ಕಾ ಇದೀಗ ಲಂಡನ್‌ನಲ್ಲಿ ತಮ್ಮ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ.
ಈ ಸೆಲೆಬ್ರಿಟಿ ದಂಪತಿಗಳು ಜನವರಿ 2021 ರಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಮೊದಲಿಗೆ ಅವರಿಗೆ ಒಬ್ಬ ಮಗಳು ಜನಿಸಿದ್ದು, ಆಕೆಗೆ ಅವರು ವಾಮಿಕಾ ಎಂದು ಹೆಸರಿಟ್ಟರು. ಫೆಬ್ರವರಿ 2024 ರಲ್ಲಿ, ಅನುಷ್ಕಾ ಮತ್ತು ವಿರಾಟ್ ತಮ್ಮ ಎರಡನೇ ಮಗು, ಮಗ ಅಕಾಯ್‌ನ ಜನನವನ್ನು ಘೋಷಿಸಿದರು.
Mumbai,Maharashtra
August 22, 2025 11:30 AM IST