ಯಾವುದೇ ವಾಹನ ಚಲಿಸಲು ಇಂಧನ ಬೇಕೇ ಬೇಕು. ಬೈಕ್, ಕಾರು, ಬಸ್, ಲಾರಿಗಳಿಗೆ ಪೆಟ್ರೋಲ್, ಡೀಸೆಲ್ ಬಳಸುತ್ತಾರೆ ಅಂತ ನಮಗೆಲ್ಲ ಗೊತ್ತು. ಈಗ ಸಿಎನ್ಜಿ ಬಳಸಿ ಕೂಡ ವಾಹನವನ್ನು ಚಲಾಯಿಸಬಹುದು. ಆದರೆ ರಾಕೆಟ್ ಅಥವಾ ಬಾಹ್ಯಾಕಾಶ ನೌಕೆ ಉಡಾವಣೆ ಮಾಡಲು ಯಾವ ಇಂಧನ ಬಳಸುತ್ತಾರೆ ಎಂಬುವುದು ಕುತೂಹಲಕಾರಿ ಸಂಗತಿ. ಇದು ಬಹುಶಃ ಬಹಳ ಕಡಿಮೆ ಜನಕ್ಕೆ ಮಾತ್ರ ಈ ಇಂಧನದ ಬಗ್ಗೆ ಮತ್ತು ಅದು ಹೇಗೆ ಕೆಲಸ ಮಾಡುತ್ತೆ ಅಂತ ಗೊತ್ತಿರಬಹುದು.
ರಾಕೆಟ್ ಬಾಹ್ಯಾಕಾಶಕ್ಕೆ ಹೋಗಲು ವಿಶೇಷ ಇಂಧನ ಬಳಕೆ
ರಾಕೆಟ್ ಬಾಹ್ಯಾಕಾಶಕ್ಕೆ ಹೋಗಲು ಭೂಮಿಯ ಗುರುತ್ವಾಕರ್ಷಣೆ (Gravity) ವಿರುದ್ಧ ಹೋಗಲು ತುಂಬಾ ವೇಗ ಮತ್ತು ಶಕ್ತಿ ಬೇಕು. ಈ ಶಕ್ತಿ ಪಡೆಯಲು ವಿಶೇಷ ರೀತಿಯ ಇಂಧನ ಬಳಸುತ್ತಾರೆ.
ರಾಕೆಟ್‌ಗಳಿಗೆ ಪ್ರಮುಖವಾಗಿ ಎರಡು ರೀತಿಯ ಇಂಧನ ಬಳಸುತ್ತಾರೆ. ಒಂದು ಘನ ಇಂಧನ ಮತ್ತು ಇನ್ನೊಂದು ದ್ರವ ಇಂಧನ. ಎರಡನ್ನು ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಸಮಯದಲ್ಲಿ ಬಳಸಾಗುತ್ತದೆ. ಹಾಗಾದ್ರೆ ಯಾವುದನ್ನು ಯಾವಾಗ ಮತ್ತು ಎಲ್ಲಿ ಬಳಸುತ್ತಾರೆ ಅಂತ ನೋಡೋಣ.
1. ಘನ ಇಂಧನ:
* ಈ ಇಂಧನ ಟ್ಯೂಬ್ ಅಥವಾ ಸಿಲಿಂಡರ್ ಆಕಾರದಲ್ಲಿ ಇರುತ್ತದೆ.
* ಒಮ್ಮೆ ಈ ಇಂಧನ ಹೊತ್ತಿಕೊಂಡರೆ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ.
* ಈ ಇಂಧನವನ್ನು ಸಣ್ಣ ಮತ್ತು ದೊಡ್ಡ ರಾಕೆಟ್‌ಗಳಲ್ಲಿ ಬಳಸುತ್ತಾರೆ.
* ಉದಾಹರಣೆಗೆ ಪಿಎಸ್‌ಎಲ್‌ವಿ ಮತ್ತು ಅಗ್ನಿ ಕ್ಷಿಪಣಿಗಳಲ್ಲಿ ಘನ ಇಂಧನ ಬಳಸುತ್ತಾರೆ.
2. ದ್ರವ ಇಂಧನ:
* ಈ ಇಂಧನ ರಾಕೆಟ್ ವೇಗ ನಿಯಂತ್ರಿಸಲು ಸಹಾಯ ಮಾಡುತ್ತದೆ.
* ಇದರಲ್ಲಿ ಎರಡು ವಸ್ತುಗಳನ್ನು ಬಳಸುತ್ತಾರೆ.
* ಒಂದು ಆಕ್ಸಿಡೈಸರ್ (ಆಮ್ಲಜನಕ ಒದಗಿಸುತ್ತದೆ) ಮತ್ತು ಇನ್ನೊಂದು ಇಂಧನ (ಶಕ್ತಿ ಉತ್ಪಾದಿಸುತ್ತದೆ).
* ಉದಾಹರಣೆಗೆ ದ್ರವ ಹೈಡ್ರೋಜನ್ ಮತ್ತು ದ್ರವ ಆಮ್ಲಜನಕವನ್ನು ಕ್ರಯೋಜೆನಿಕ್ ಎಂಜಿನ್‌ಗಳಲ್ಲಿ ಬಳಸುತ್ತಾರೆ.
ಇದನ್ನೂ ಓದಿ: ಭೂಮಿ ನಿಮ್ಮನ್ನ ತುಂಬಾ ಮಿಸ್ ಮಾಡ್ಕೊಂಡಿದೆ; ಬಾಹ್ಯಾಕಾಶ ವಾಸದಿಂದ ಧರೆಗೆ ಬಂದ ಸುನೀತಾಗೆ ನಮೋ ನಮನ!
ರಾಕೆಟ್‌ಗಳಲ್ಲಿ ಬಳಸುವ ಇತರ ಕೆಲವು ಇಂಧನಗಳ ಬಗ್ಗೆ ಮಾಹಿತಿ:
ಕ್ರಯೋಜೆನಿಕ್ ಇಂಧನ: ಇದು ಅತ್ಯಂತ ಮುಂದುವರಿದ ತಂತ್ರಜ್ಞಾನ. ಕ್ರಯೋಜೆನಿಕ್ ಎಂದರೆ ಅತ್ಯಂತ ಕಡಿಮೆ ತಾಪಮಾನದಲ್ಲಿ ಇಡಲಾದ ದ್ರವ ಇಂಧನ. ಇದರಲ್ಲಿ ದ್ರವ ಹೈಡ್ರೋಜನ್ (-253°C) ಮತ್ತು ದ್ರವ ಆಮ್ಲಜನಕ (-183°C) ಬಳಸುತ್ತಾರೆ. ಈ ಇಂಧನ ಗರಿಷ್ಠ ವೇಗ ಮತ್ತು ಶಕ್ತಿ ಉತ್ಪಾದಿಸುತ್ತದೆ. ಇಸ್ರೋದ ಜಿಎಸ್‌ಎಲ್‌ವಿ (ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಈ ಕ್ರಯೋಜೆನಿಕ್ ಇಂಧನ ಬಳಸುತ್ತದೆ.
ಸ್ಪೇಸ್‌ಎಕ್ಸ್ ಬಾಹ್ಯಾಕಾಶ ಯಾತ್ರೆಗಳಲ್ಲಿ ಹೊಸ ತಿರುವು ನೀಡುತ್ತಿದೆ. ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಕಂಪನಿ ‘ಮೀಥೇನ್-ಆಮ್ಲಜನಕ’ ಎಂಜಿನ್ ಅಭಿವೃದ್ಧಿಪಡಿಸಿದೆ. ಇದು ಭವಿಷ್ಯದಲ್ಲಿ ಅಗ್ಗದ ಮತ್ತು ಮರುಬಳಕೆ ಮಾಡಬಹುದಾದ ರಾಕೆಟ್‌ಗಳಿಗೆ ಕಾರಣವಾಗಬಹುದು.
ಸುನೀತಾ ಬಂದಿಳಿದ ಬಾಹ್ಯಾಕಾಶ ನೌಕೆಗೆ ದ್ರವ ಇಂಧನ ಬಳಕೆ
ಸುನೀತಾ ವಿಲಿಯಮ್ಸ್ ಅವರನ್ನು ಹೊತ್ತೊಯ್ಯುವ ರಾಕೆಟ್‌ನಲ್ಲಿ ಯಾವ ಇಂಧನ ಬಳಸಲಾಗಿತ್ತು?
ಸುನೀತಾ ವಿಲಿಯಮ್ಸ್ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿದ್ದಾರೆ. ಈ ಬಾಹ್ಯಾಕಾಶ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಲು ದ್ರವ ಇಂಧನ ಬಳಸಿದೆ.
ರಾಕೆಟ್ ಇಂಧನ ತುಂಬಾ ಮುಖ್ಯ ಮತ್ತು ವೈಜ್ಞಾನಿಕವಾಗಿ ಮುಂದುವರಿದಿದೆ. ಭವಿಷ್ಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇನ್ನೂ ಹೊಸ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲಿದೆ. ಆದ್ದರಿಂದ ಶೀಘ್ರದಲ್ಲೇ ನಾವು ಅಗ್ಗದ ಮತ್ತು ಪರಿಣಾಮಕಾರಿ ಬಾಹ್ಯಾಕಾಶ ಪ್ರಯಾಣ ನೋಡಲು ಸಾಧ್ಯವಾಗುತ್ತದೆ.
March 19, 2025 2:01 PM IST