ರೈಲಿನಲ್ಲಿ ಮೊಬೈಲ್ ಕಳೆದುಹೋದರೆ ಚಿಂತಿಸಬೇಡಿ! ಹೀಗೆ ಮಾಡಿ ಸಾಕು, ಮೊಬೈಲ್​ ಮತ್ತೆ ಸಿಗುತ್ತೆ / Lost Your Mobile Phone on the Train? Don’t Worry—Just Do This to Get It Back!

ರೈಲಿನಲ್ಲಿ ಮೊಬೈಲ್ ಕಳೆದುಹೋದರೆ ಚಿಂತಿಸಬೇಡಿ! ಹೀಗೆ ಮಾಡಿ ಸಾಕು, ಮೊಬೈಲ್​ ಮತ್ತೆ ಸಿಗುತ್ತೆ / Lost Your Mobile Phone on the Train? Don’t Worry—Just Do This to Get It Back!

Last Updated:

ಬಸ್​​ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿಯೇ ಇದೆ. ಬೆಲೆ ಬಾಳುವ ವಸ್ತುಗಳು, ಚಿನ್ನ, ಬ್ಯಾಗ್​, ಮೊಬೈಲ್​ ಫೋನ್​ಗಳನ್ನು ಕಳ್ಳರು ಬಂದು ಕಿತ್ತುಕೊಂಡು ಹೋಗ್ತಾರೆ. ಅಥವಾ ಕಳೆದುಹೋಗಬಹುದು. ಆದರೆ ಇನ್ಮುಂದೆ ರೈಲು ನಿಲ್ದಾಣದಲ್ಲಿ ಅಥವಾ ರೈಲಿನಲ್ಲಿ ಮೊಬೈಲ್​ ಕಳುವಾದರೆ ಚಿಂತೆ ಮಾಡಬೇಕಿಲ್ಲ. ಹೀಗೆ ಮಾಡಿದ್ರೆ ಸಾಕು, ಮೊಬೈಲ್​ ಮತ್ತೆ ಸಿಗುತ್ತೆ.

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಈ ಡಿಜಿಟಲ್ ಯುಗದಲ್ಲಿ (Digital World), ನೀವು ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳನ್ನು (Smart Phone) ನೋಡುತ್ತೀರಿ. ಸ್ಮಾರ್ಟ್‌ಫೋನ್ ಸಹಾಯದಿಂದ ನೀವು ಅನೇಕ ಕೆಲಸಗಳನ್ನು ಸುಲಭವಾಗಿ (Easy Working) ಮಾಡಬಹುದು. ಆನ್‌ಲೈನ್ ಪಾವತಿಗಳಿಂದ (Online Payment) ಹಿಡಿದು ಮನರಂಜನೆಯವರೆಗೆ (Entertainment) ನೀವು ಸ್ಮಾರ್ಟ್‌ಫೋನ್‌ನೊಂದಿಗೆ ಹಲವು ಕೆಲಸಗಳನ್ನು ಮಾಡಬಹುದು. ಆದರೆ ನಿಮ್ಮ ಸ್ಮಾರ್ಟ್‌ಫೋನ್ ಕಳುವಾದರೆ (Smartphone Missing) ಅಥವಾ ಕಳೆದುಹೋದರೆ (Stolen), ನೀವು ತೊಂದರೆಗೆ ಸಿಲುಕಬಹುದು. ಆದರೆ ನೀವು ರೈಲು ನಿಲ್ದಾಣದಲ್ಲಿಯೋ ಅಥವಾ ರೈಲಿನಲ್ಲಿಯೋ ಫೋನ್​ ಕಳೆದುಕೊಂಡರೆ ಚಿಂತೆ ಮಾಡಬೇಕಿಲ್ಲ.

ಮೊಬೈಲ್​ ಫೋನ್​ ಈಗ ಜೀವನದ ಒಂದು ಬಹುಮುಖ್ಯವಾದ ಅಂಗವಾಗಿದೆ. ಮೊಬೈಲ್​ ಫೋನ್​ ಕಳದುಕೊಂಡರೆ ದಿಕ್ಕೇ ತೋಚದ ಹಾಗೇ ಆಗುತ್ತೆ. ಯಾಕಂದರೆ ಪ್ರತಿಯೊಬ್ಬರ ಮೊಬೈಲ್ ಫೋನ್‌ಗಳು ವೈಯಕ್ತಿಕ ಡೇಟಾವನ್ನು ಒಳಗೊಂಡಿರುತ್ತವೆ. ಫೋನ್​ ವಾಸ್ತವವಾಗಿ, ದೂರಸಂಪರ್ಕ ಇಲಾಖೆ (DoT) ಈ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆ ಇಟ್ಟಿದೆ. ಅಂತಹ ಸಂದರ್ಭಗಳಲ್ಲಿ ಸಹಾಯ ಮಾಡಬಹುದಾದ ಪೋಸ್ಟ್ ಅನ್ನು ದೂರಸಂಪರ್ಕ ಇಲಾಖೆ ತನ್ನ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದೆ.

ರೈಲಿನಲ್ಲಿ ಅಥವಾ ರೈಲು ನಿಲ್ದಾಣದಲ್ಲಿ ಫೋನ್​ ಕಳೆದುಕೊಂಡರೆ ಪತ್ತೆಹಚ್ಚಬಹುದು!

ದೂರಸಂಪರ್ಕ ಇಲಾಖೆಯು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಒಂದು ಮಾಹಿತಿಯನ್ನು ಪೋಸ್ಟ್ ಮಾಡಿದೆ. ದೂರಸಂಪರ್ಕ ಇಲಾಖೆ ತನ್ನ ಅಧಿಕೃತ X ಖಾತೆಯಲ್ಲಿ, “ಪ್ರಯಾಣಿಕರ ಗಮನಕ್ಕೆ! ಈಗ ನೀವು ನಿಮ್ಮ ಕಳೆದುಹೋದರೆ ಅಥವಾ ಕಳುವಾದರೆ, ಮೊಬೈಲ್ ಫೋನ್ ಅನ್ನು ರೈಲ್ವೆ ನಿಲ್ದಾಣದಲ್ಲಿ ಅಥವಾ ರೈಲಿನಲ್ಲಿ RPF ಮತ್ತು ಸಂಚಾರ್ ಸಾಥಿ ಸಹಾಯದಿಂದ ನಿರ್ಬಂಧಿಸಬಹುದು ಮತ್ತು ಪತ್ತೆಹಚ್ಚಬಹುದು” ಎಂದು ಪೋಸ್ಟ್ ಮಾಡಿದೆ.

ದೂರಸಂಪರ್ಕ ಇಲಾಖೆಯ ಈ ಪೋಸ್ಟ್​​ ಮತ್ತ ಕಾರ್ಯವೈಖರಿ ರೈಲು ಪ್ರಯಾಣಿಕರಿಗೆ ಖುಷಿ ಜೊತೆಗೆ ಸಮಾಧಾನ ತಂದಿದೆ. ಯಾಕಂದರೆ ರೈಲು ನಿಲ್ದಾಣದಲ್ಲಿ ಮತ್ತು ರೈಲಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿತ್ತು. ಅದರಲ್ಲೂ ಬೆಲೆ ಬಾಳುವ ಚಿನ್ನ, ಮೊಬೈಲ್​, ಬ್ಯಾಗ್​ಗಳಲ್ಲಿ ಕಳ್ಳರು ಸಲೀಸಾಗಿ ಎಸ್ಕೇಪ್​ ಮಾಡುತ್ತಿದ್ದರು. ಈಗ ಅಂತಹ ಕಳ್ಳರಿಗೆ ಬಿಸಿ ಮುಟ್ಟಿಸಲು ಈ ಯೋಜನೆ ಸೂಕ್ತವಾಗಿದೆ.

ಇದನ್ನೂ ಓದಿ: ಜಗತ್ತಿನಲ್ಲಿ ಅತಿ ಹೆಚ್ಚು ಇಲಿಗಳನ್ನು ಹೊಂದಿರುವ ದೇಶ ಯಾವುದು ಗೊತ್ತಾ? ಭಾರತ ಎಷ್ಟನೇ ಸ್ಥಾನದಲ್ಲಿದೆ?

ನೀವು CEIR ಸಹಾಯದಿಂದ ಫೋನ್ ಅನ್ನು ನಿರ್ಬಂಧಿಸಬಹುದು.

ನಿಮ್ಮ ಫೋನ್​ ಕಳೆದುಹೋದರೆ ಅಥವಾ ಕಳುವಾದರೆ, ಇಂತಹ ಪರಿಸ್ಥಿತಿಯಲ್ಲಿ ದೂರಸಂಪರ್ಕ ಇಲಾಖೆ ಕೋಟ್ಯಂತರ ಪ್ರಯಾಣಿಕರಿಗೆ ಪರಿಹಾರ ನೀಡಿದೆ. ನಿಮ್ಮ ಮೊಬೈಲ್ ಫೋನ್ ರೈಲ್ವೇ ನಿಲ್ದಾಣದಲ್ಲಿ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ ಕಳೆದುಹೋದರೆ ಅಥವಾ ಕಳುವಾದರೆ, ಫೋನ್ ಅನ್ನು ತ್ವರಿತವಾಗಿ ಕಂಡುಹಿಡಿಯಬಹುದು.

ಕೇಂದ್ರ ಸಲಕರಣೆ ಗುರುತಿನ ನೋಂದಣಿ (CEIR) ಪೋರ್ಟಲ್ ಸಹಾಯದಿಂದ ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ನಿರ್ಬಂಧಿಸಬಹುದು. ಇದಲ್ಲದೆ, CEIR ಸಹಾಯದಿಂದ ಕಳೆದುಹೋದ ಫೋನ್ ಅನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಸಹ ಸಾಧ್ಯವಾಗುತ್ತದೆ. ದೂರಸಂಪರ್ಕ ಇಲಾಖೆ ಇತ್ತೀಚೆಗೆ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ಆಪ್ ಮೂಲಕ ಕಳೆದುಹೋದ ಫೋನ್ ಅನ್ನು ಬ್ಲಾಕ್ ಮಾಡಬಹುದು. ನಿಮ್ಮ ಹೆಸರಿನಲ್ಲಿ ಎಷ್ಟು ಸಂಖ್ಯೆಗಳು ಸಕ್ರಿಯವಾಗಿವೆ ಎಂಬುದನ್ನು ಕಂಡುಹಿಡಿಯಲು ಈ ಅಪ್ಲಿಕೇಷನ್ ನಿಮಗೆ ಸಹಾಯ ಮಾಡುತ್ತದೆ.

ರೈಲಿನಲ್ಲಿ ಅಥವಾ ರೈಲು ನಿಲ್ದಾಣದಲ್ಲಿ ಇನ್ಮುಂದೆ ಮೊಬೈಲ್​ ಕಳುವಾದರೆ ಅಥವಾ ಮಿಸ್​ ಆದರೆ ಚಿಂತೆ ಮಾಡಬೇಕಿಲ್ಲ. ನೀವು ಮೊಬೈಲ್​ ಕಳ್ಳತನವಾದರೂ ಮೊಬೈಲ್​ ಪತ್ತೆ ಹಚ್ಚಬಹುದು. ಮತ್ತು ವಾಪಸ್​​ ಪಡೆಯಬಹುದು.