ರೋಹಿತ್ ಶರ್ಮಾ ಐತಿಹಾಸಿಕ ಸಾಧನೆ! 148 ವರ್ಷಗಳ ಕ್ರಿಕೆಟ್ ಚರಿತ್ರೆಯಲ್ಲಿ ಈ ಸಾಧನೆ ಮಾಡಿದ 11ನೇ ಆಟಗಾರ

ರೋಹಿತ್ ಶರ್ಮಾ ಐತಿಹಾಸಿಕ ಸಾಧನೆ! 148 ವರ್ಷಗಳ ಕ್ರಿಕೆಟ್ ಚರಿತ್ರೆಯಲ್ಲಿ ಈ ಸಾಧನೆ ಮಾಡಿದ 11ನೇ ಆಟಗಾರ

ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮಾ ಅವರು ದಾಖಲೆಗಳ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡಿದ್ದಾರೆ. ಅವರು ಭಾರತ ಪರ 500 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಐದನೇ ಕ್ರಿಕೆಟರ್ ಮತ್ತು ವಿಶ್ವದ ಒಟ್ಟು 11ನೇ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.