ವರ್ಷಕ್ಕೆ ಎಷ್ಟು ಬಾರಿ ಎಸಿ ಸರ್ವೀಸ್‌ ಮಾಡಬೇಕು ಗೊತ್ತಾ? ಈ ಟ್ರಿಕ್ಸ್ ಯೂಸ್‌ ಮಾಡಿ ಆಮೇಲೆ ನೋಡಿ ಮ್ಯಾಜಿಕ್ | Do you know how many times a year you should service your AC Use these tricks and see the magic

ವರ್ಷಕ್ಕೆ ಎಷ್ಟು ಬಾರಿ ಎಸಿ ಸರ್ವೀಸ್‌ ಮಾಡಬೇಕು ಗೊತ್ತಾ? ಈ ಟ್ರಿಕ್ಸ್ ಯೂಸ್‌ ಮಾಡಿ ಆಮೇಲೆ ನೋಡಿ ಮ್ಯಾಜಿಕ್ | Do you know how many times a year you should service your AC Use these tricks and see the magic

ಗಾಳಿಯ ಶುದ್ಧತೆಗೆ ಸರ್ವೀಸಿಂಗ್ ಮುಖ್ಯ

AC ಫಿಲ್ಟರ್‌ಗಳು ಧೂಳು, ಬ್ಯಾಕ್ಟೀರಿಯಾ ಮತ್ತು ಇನ್ನಿತರ ಹಾನಿಕಾರಕ ಅಂಶಗಳನ್ನು ವೇಗವಾಗಿ ಸಂಗ್ರಹಿಸುತ್ತವೆ. ಇವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ ಗಾಳಿಯ ಗುಣಮಟ್ಟ ಕೆಡುತ್ತದೆ. “ನಿಯಮಿತವಾಗಿ ಫಿಲ್ಟರ್‌ಗಳನ್ನು ಶುಚಿಗೊಳಿಸುವುದರಿಂದ ಗಾಳಿ ಶುದ್ಧವಾಗಿ ಮತ್ತು ಆರೋಗ್ಯಕರವಾಗಿ ಬರುತ್ತದೆ,” ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಮ್‌ ಬಳಕೆದಾರರೇ ಎಚ್ಚರ! ನಾಳೆಯಿಂದ ಬದಲಾಗಲಿದೆ ಹಳೇ ರೂಲ್ಸ್

AC ಯನ್ನು ಎಷ್ಟು ಬಾರಿ ಸರ್ವೀಸ್ ಮಾಡಬೇಕು?

ನಿಮ್ಮ ಸ್ಥಳ ಮತ್ತು AC ಬಳಕೆಯನ್ನು ಅವಲಂಬಿಸಿ, ವರ್ಷಕ್ಕೆ ಕನಿಷ್ಠ 3-4 ಬಾರಿ ಸರ್ವೀಸಿಂಗ್ ಅಗತ್ಯವಿದೆ. ಆದರೆ, ನೀವು ದೊಡ್ಡ ನಗರದಲ್ಲಿ ಅಥವಾ ಕೈಗಾರಿಕಾ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಪ್ರತಿ 2-3 ತಿಂಗಳಿಗೊಮ್ಮೆ ಸರ್ವೀಸ್ ಮಾಡುವುದು ಉತ್ತಮ. ಸ್ಪ್ಲಿಟ್ AC ಯ ಹೊರಗಿನ ಯೂನಿಟ್ ಹೆಚ್ಚು ಧೂಳು ಸಂಗ್ರಹಿಸುತ್ತದೆ, ಆದ್ದರಿಂದ ಅದನ್ನು ಆಗಾಗ ಶುಚಿಗೊಳಿಸುವುದು ಅವಶ್ಯಕ. “ವೇಸವಿ ಆರಂಭದಲ್ಲಿ ಸರ್ವೀಸಿಂಗ್ ಮಾಡಿದರೆ, ಋತುವಿನ ಉದ್ದಕ್ಕೂ AC ತೊಂದರೆಯಿಲ್ಲದೆ ಕಾರ್ಯನಿರ್ವಹಿಸುತ್ತದೆ,” ಎಂದು ತಜ್ಞರು ಸಲಹೆ ನೀಡಿದ್ದಾರೆ.

ಸರ್ವೀಸಿಂಗ್ ವೇಳೆ ಯಾವ ವಿಷಯಗಳಿಗೆ ಗಮನ ಕೊಡಬೇಕು?

ಫಿಲ್ಟರ್ ಸ್ವಚ್ಛತೆ: ಪ್ರತಿ ತಿಂಗಳು ಫಿಲ್ಟರ್‌ಗಳನ್ನು ಶುಚಿಗೊಳಿಸುವುದು ಮುಖ್ಯ. ಇದು AC ಯ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ.

ಸಾಂಕೇತಿಕ ಚಿತ್ರ

ಕೂಲಿಂಗ್ ಗ್ಯಾಸ್ ತಪಾಸಣೆ: ಕೂಲಿಂಗ್ ಗ್ಯಾಸ್ ಮಟ್ಟ ಸರಿಯಾಗಿದೆಯೇ ಎಂದು ಪರೀಕ್ಷಿಸಿ. ಇದು ಕಡಿಮೆಯಾದರೆ AC ಯ ತಂಪಾಗಿಸುವ ಸಾಮರ್ಥ್ಯ ಕುಗ್ಗುತ್ತದೆ.

ಕಾಯಿಲ್ ಸ್ವಚ್ಛತೆ: ಕಾಯಿಲ್‌ಗಳ ಮೇಲೆ ಧೂಳು ಹಿಡಿದುಕೊಂಡರೆ, ತಂಪಾಗಿಸುವ ಶಕ್ತಿ ಕಡಿಮೆಯಾಗುತ್ತದೆ. ಇವುಗಳನ್ನು ಸ್ವಚ್ಛಗೊಳಿಸುವುದು ಅಗತ್ಯ.

ಡ್ರೈನೇಜ್ ಪೈಪ್ ತಪಾಸಣೆ: ಇನ್ನು ಈ ಡ್ರೈನೇಜ್‌‌ ಪೈಪ್ ಮುಚ್ಚಿಕೊಂಡರೆ, AC ಯಿಂದ ನೀರು ಸೋರಿಕೆಯಾಗಬಹುದು. ಆದ್ದರಿಂದ ಪೈಪ್ ಅನ್ನು ಆಗಾಗ ಕ್ಲೀನ್‌ ಮಾಡುತ್ತಿರಿ.

ನಿಯಮಿತ ಸರ್ವೀಸಿಂಗ್ ಮೂಲಕ AC ಯ ಆಯುಷ್ಯ ಹೆಚ್ಚಾಗುವಂತೆ ಮಾಡಬಹುದು, ಅಲ್ಲದೇ ವಿದ್ಯುತ್ ಕೂಡಾ ಉಳಿತಾಯವಾಗುತ್ತದೆ ಮತ್ತು ಆರೋಗ್ಯಕರ ಗಾಳಿಯನ್ನು ಒದಗಿಸುತ್ತದೆ ಎಂದು ತಜ್ಞರು ಒತ್ತಿ ಹೇಳಿದ್ದಾರೆ.

ಎಸಿ ಖರೀದಿಸುವ ಮುನ್ನ ಗಮನದಲ್ಲಿಡಬೇಕಾದ ಅಂಶಗಳಿವು

ವಿಂಡೋ ಎಸಿ: ಹೆಸರೇ ಸೂಚಿಸುವಂತೆ, ವಿಂಡೋ ಎಸಿ ಎಂದರೆ ಕಿಟಕಿಯಲ್ಲಿ ಅಳವಡಿಸಬಹುದಾದ ಎಸಿ. ಇವುಗಳ ಬೆಲೆ ಸ್ವಲ್ಪ ಕಡಿಮೆ. ನೀವು ರೂ.25,000ಕ್ಕಿಂತ ಕಡಿಮೆ ಬೆಲೆಗೆ ವಿಂಡೋ ಎಸಿ ಖರೀದಿಸಬಹುದು. ನಿಮಗೆ ಉತ್ತಮ ಬ್ರ್ಯಾಂಡ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳು ಬೇಕಾದರೆ, ನೀವು ರೂ.40,000 ವರೆಗೆ ಖರ್ಚು ಮಾಡಬೇಕಾಗುತ್ತದೆ. ವಿಂಡೋ ಎಸಿ ಅಳವಡಿಸಲು ತುಂಬಾ ಸುಲಭ. ಆದರೆ ನಿಮ್ಮ ಮಲಗುವ ಕೋಣೆಯಲ್ಲಿ ಕಿಟಕಿ ಇದ್ದರೆ ಮಾತ್ರ ನೀವು ವಿಂಡೋ ಎಸಿ ಖರೀದಿಸಬಹುದು. ಎಸಿ ಘಟಕದ ಭಾಗವು ಕಿಟಕಿಯ ಮೂಲಕ ಮನೆಯ ಹೊರಗೆ ಹೋಗುತ್ತದೆ.

ಪೋರ್ಟಬಲ್ ಎಸಿ: ಪೋರ್ಟಬಲ್ ಎಸಿಗಳು ಉತ್ತಮ ಬ್ರಾಂಡ್‌ಗಳಿಂದ ಕೆಲವೇ ಕೆಲವು ಲಭ್ಯವಿದೆ. ಕೆಲವೇ ಕಂಪೆನಿಗಳು ಪೋರ್ಟಬಲ್ ಎಸಿಗಳನ್ನು ನೀಡುತ್ತವೆ. ಸಣ್ಣ ರೂಮ್​​ ಹೊಂದಿರುವವರಿಗೆ ಪೋರ್ಟಬಲ್ ಎಸಿ ಸೂಕ್ತವಾಗಿದೆ. ಇನ್ನು ಈ ಎಸಿಯಲ್ಲಿ ಫೀಚರ್ಸ್​​ಗಳು ಮತ್ತು ಆಯ್ಕೆಗಳು ಕಡಿಮೆ. ಆದ್ದರಿಂದ ಸಾಧ್ಯವಾದಷ್ಟು ಪೋರ್ಟಬಲ್ ಎಸಿ ತೆಗೆದುಕೊಳ್ಳದಿರುವುದು ಉತ್ತಮ. ಬೇರೆ ರೀತಿಯ ಎಸಿ ಅಳವಡಿಸಲು ಅವಕಾಶವಿಲ್ಲದಿದ್ದರೆ ಮಾತ್ರ ಪೋರ್ಟಬಲ್ ಎಸಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನೀವು ಇತರ ಎಸಿಗಳನ್ನು ನೋಡಬಹುದು.