ಇದು ಮಾತ್ರವಲ್ಲ, ಐಪಿಎಲ್ ಬಹುಮಾನದ ಮೊತ್ತದ 30% ಹಣವನ್ನ ಆಟಗಾರರಿಗೆ ಹಂಚಲಾಗುತ್ತದೆ. ಆರ್ಸಿಬಿ ತಂಡದಲ್ಲಿ ಒಟ್ಟು 22 ಆಟಗಾರರಿದ್ದು, ಈ ಪಾಲಿನಲ್ಲಿ ಕೊಹ್ಲಿ ಅವರ ಪಾಲು ಸುಮಾರು 27 ಲಕ್ಷ ರೂಪಾಯಿಗಳಷ್ಟಿತ್ತು. ಇದರ ಜೊತೆಗೆ, ವಿರಾಟ್ ಕೊಹ್ಲಿ ತಮ್ಮ ಬ್ರಾಂಡ್ ಜಾಹೀರಾತುಗಳಿಂದ (Brand Endorsements) ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ಗಳಿಸಿದ್ದಾರೆ. ಹೀಗೆ ಎಲ್ಲವನ್ನೂ ಸೇರಿಸಿದರೆ, ಕೊಹ್ಲಿ 2025ರ ಐಪಿಎಲ್ನಿಂದ ಸುಮಾರು 27.40 ಕೋಟಿ ರೂಪಾಯಿ ಗಳಿಸಿದ್ದಾರೆ.