ಸಂಬಳ ಜಾಸ್ತಿ, ಪ್ರಮೋಶನ್ ಪಕ್ಕಾ! ಸುಂದರ್ ಪಿಚೈ ಹೇಳಿಕೊಟ್ಟ 8 ಕೆರಿಯರ್ ತಂತ್ರಗಳು ನಿಮಗಾಗಿ! | Sundar Pichai says that AI is not our enemy it is our friend

ಸಂಬಳ ಜಾಸ್ತಿ, ಪ್ರಮೋಶನ್ ಪಕ್ಕಾ! ಸುಂದರ್ ಪಿಚೈ ಹೇಳಿಕೊಟ್ಟ 8 ಕೆರಿಯರ್ ತಂತ್ರಗಳು ನಿಮಗಾಗಿ! | Sundar Pichai says that AI is not our enemy it is our friend

Last Updated:

ಸುಂದರ್ ಪಿಚೈ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ AI ಬಗ್ಗೆ ಮಾತನಾಡಿ, AI ನಮ್ಮ ಮಿತ್ರ ಎಂದು ಹೇಳಿದರು. AI ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಿ, ಮಾನವ ಸಾಮರ್ಥ್ಯಗಳನ್ನು ದ್ವಿಗುಣಗೊಳಿಸಿ, AI ನೀತಿಶಾಸ್ತ್ರವನ್ನು ಪರಿಗಣಿಸಿ ಎಂದು ಸಲಹೆ ನೀಡಿದರು.

News18News18
News18

ಕೃತಕ ಬುದ್ಧಿಮತ್ತೆಯು ಆಕರ್ಷಣೆ ಮತ್ತು ಭಯ ಎರಡನ್ನೂ ಹುಟ್ಟುಹಾಕುವ ಸಮಯದಲ್ಲಿ, ಗೂಗಲ್ ಸಿಇಒ ಸುಂದರ್ ಪಿಚೈ (Google CEO Sundar Pichai)  ಅವರು “AI ನಮ್ಮ ಶತ್ರುವಲ್ಲ, ಅದು ನಮ್ಮ ಮಿತ್ರ” ಎಂದು ಶಾಂತವಾಗಿ ಭವಿಷ್ಯವನ್ನು (Enemy) ಎದುರಿಸುವ ದೃಷ್ಟಿಕೋನವನ್ನು ನೀಡಿದರು. ಇತ್ತೀಚೆಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ (San Francisco) ನಡೆದ ಬ್ಲೂಮ್‌ಬರ್ಗ್ ತಂತ್ರಜ್ಞಾನ ಶೃಂಗಸಭೆಯಲ್ಲಿ (omberg Technology Summit) ಮಾತನಾಡಿದ ಪಿಚೈ ಅವರು AI ಅನ್ನು ಉದ್ಯೋಗ ಕದಿಯುವ ಬೆದರಿಕೆಗಿಂತ ಪ್ರಬಲ ಉತ್ಪಾದಕತಾ ಪಾಲುದಾರ ಎಂಬ ಆಶಾವಾದದ ಮಾತುಗಳನ್ನಾಡಿದರು. ‘ನಾನು ಯಾವಾಗಲೂ AI ಅನ್ನು ಬೇಸಿಕ್‌ ತಂತ್ರಜ್ಞಾನವಾಗಿ ನೋಡಿದ್ದೇನೆ’ ಎಂದು ಪಿಚೈ ಹೇಳಿದರು. ಜಗತ್ತಿನಲ್ಲಿ, ವೃತ್ತಿಪರರು ವಿಶೇಷವಾಗಿ ತಂತ್ರಜ್ಞಾನದಲ್ಲಿ – ಮುಂದೆ ಬರಲು ಅಳವಡಿಸಿಕೊಳ್ಳಬಹುದಾದ 8 ಪ್ರಾಯೋಗಿಕ ತಂತ್ರಗಳನ್ನು ಪಿಚೈ ಹಂಚಿಕೊಂಡರು.

ಸುಂದರ್ ಪಿಚೈ ಅವರ 8 ಭವಿಷ್ಯ-ವೃತ್ತಿ ತಂತ್ರಗಳು

  • ಸ್ವಯಂಚಾಲಿತಗೊಳಿಸಿ, ಆದರೆ ನೀವೇ ಕೆಲಸಗಳಿಗೆ ಆರ್ಕಿಟೆಕ್ಚರ್‌ ಆಗಿರಿ: ಆಟೊಮೇಷನ್‌ಗೆ ಹೆದರುವ ಬದಲು, ಅದನ್ನು ನಾವೇ ನಿರ್ಮಿಸಲು ಕಲಿಯಬೇಕು. ಪಿಚೈ ಪೈಥಾನ್ ಭಾಷೆಯ ಆನ್‌ಲೈನ್ ಟ್ಯುಟೋರಿಯಲ್‌ಗಳನ್ನು ತೆಗೆದುಕೊಂಡರು ಮತ್ತು UiPath, Zapier ನಂತಹ ಟೂಲ್‌ಗಳನ್ನು ಬಳಸುವಲ್ಲಿ ಪರಿಣತಿಯನ್ನು ಬೆಳೆಸಿಕೊಂಡರು. ಕೆಲವೇ ವಾರಗಳಲ್ಲಿ, ಅವರು ಪ್ರತಿ ವಾರ ಸುಮಾರು 5 ಗಂಟೆಗಳ ಸಮಯವನ್ನು ಉಳಿಸುವ ರಿಪೋರ್ಟ್ ಸ್ವಯಂಚಾಲಿತ ಸ್ಕ್ರಿಪ್ಟ್‌ನ್ನು ರಚಿಸಿದರು. ಅವರು ಕೇವಲ ಬಳಕೆದಾರರಾಗಿ ಉಳಿಯದೆ, ಬದಲಾವಣೆಯ ನಿರ್ಮಾಪಕರಾದರು.
  • ಬೇಸಿಕ್‌ನಲ್ಲಿ ಏನಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ: AI ಕೇವಲ ಉಪಯೋಗಿಸುವ ಟೂಲ್ ಅಲ್ಲ, ಅದರ ಬೇಸಿಕ್‌ ಅನ್ನು ತಿಳಿದಾಗ ಉತ್ತಮವಾಗಿ ಉಪಯೋಗಿಸಬಹುದು ಎಂಬುದನ್ನು ಪಿಚೈ ಮನಗಂಡರು. ಅವರು transformers, tokenisation ಮತ್ತು embeddings ಬಗ್ಗೆ ಅಧ್ಯಯನ ಆರಂಭಿಸಿದರು. ಇದರೊಂದಿಗೆ, ChatGPT ಮತ್ತು Gemini ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುವ ತಂತ್ರಜ್ಞಾನಗಳನ್ನು ಅರಿಯಲು ತೊಡಗಿದರು. ತಾಂತ್ರಿಕತೆಯಲ್ಲಿ ತೀವ್ರವಾಗಿ ತೊಡಗಿಕೊಳ್ಳದಿದ್ದರೂ, ತಾಂತ್ರಿಕ ತಂಡದೊಂದಿಗೆ ಸ್ಪಷ್ಟ ಸಂವಹನ ನಡೆಸುವಷ್ಟು ಪಾಠ ಕಲಿತರು.
  • ಮಾನವ ಸಾಮರ್ಥ್ಯಗಳನ್ನು ದ್ವಿಗುಣಗೊಳಿಸಿ: AI ತರ್ಕಬದ್ಧ ಕಾರ್ಯಗಳಲ್ಲಿ ಪರಿಣತಿಯಾದರೂ, ಭಾವನಾತ್ಮಕ ಬುದ್ಧಿಮತ್ತೆ, ನೈತಿಕತೆಯಲ್ಲಿ ಹಿಂದೆ ಇರುತ್ತದೆ. ಪಿಚೈ ತಮ್ಮ ತಂಡದಲ್ಲಿ ಈ ಮಾನವೀಯ ಗುಣಗಳನ್ನು ಉತ್ತೇಜಿಸಿದರು. ಅವರು ಕ್ಲೈಂಟ್‌ಗಳನ್ನು ಒಪ್ಪಿಸಲು ನೈಜ ಕಥೆಗಳನ್ನು ಹೇಳಿದರು, ಗೊಂದಲದ ಸಮಯದಲ್ಲಿ ಸೌಮ್ಯತೆಯಿಂದ ಎಲ್ಲವನ್ನು ನಿಭಾಯಿಸಿದರು.
  • ಪ್ರಾಂಪ್ಟ್ ಎಂಜಿನಿಯರಿಂಗ್ ಕಲೆ ಕಲಿಯಿರಿ: AI ಜೊತೆ ಮಾತನಾಡುವ ಶೈಲಿಯೇ ಪ್ರತ್ಯೇಕ ಕೌಶಲ್ಯ. ಪಿಚೈ ಇದನ್ನು ಕರಗತ ಮಾಡಿಕೊಂಡರು. “ಈ ಟೆಕ್ಸ್ಟ್ ಅನ್ನು 12 ವರ್ಷದ ಮಕ್ಕಳಿಗೆ ಸರಳವಾಗಿ 100 ಪದಗಳಲ್ಲಿ ವಿವರಿಸಿ” ಎಂಬಂತಹ ಸ್ಪಷ್ಟ ಸೂಚನೆಗಳಿಂದ ಅವರು AI ಕಡೆಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸಿದರು. ಇದರಿಂದ ಅವರು ‘AI fluency’ ಹೊಂದಿದ ವ್ಯಕ್ತಿಯಾಗಿ ಗುರುತಿಸಲ್ಪಟ್ಟರು.
  • ವೃತ್ತಿಜೀವನವನ್ನು ಉತ್ಪನ್ನದಂತೆ ನಿರ್ವಹಿಸಿ: ಪಿಚೈ ತಮ್ಮ ವೃತ್ತಿಜೀವನವನ್ನು ಸದಾ ಅಭಿವೃದ್ಧಿಪಡಿಸಬೇಕಾದ ಉತ್ಪನ್ನದಂತೆ ನೋಡಿದರು. ಪ್ರತಿ ತ್ರೈಮಾಸಿಕದಲ್ಲಿ ತಮ್ಮ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡುತ್ತಾ, ಹೊಸ ಟಾರ್ಗೆಟ್‌ಗಳನ್ನು ಸ್ಥಾಪಿಸಿ, ಹೊಸ ವರ್ಶನ್‌ಗಳಿಗೆ ಅಪ್‌ಗ್ರೇಡ್ ಆಗುತ್ತಿದ್ದರು.
  • AI ನೀತಿಶಾಸ್ತ್ರವನ್ನು ಗಂಭೀರವಾಗಿ ಪರಿಗಣಿಸಿ: ಒಮ್ಮೆ ಆಂತರಿಕ ಚಾಟ್‌ಬಾಟ್ ನಿರ್ಮಾಣದ ಸಮಯದಲ್ಲಿ, “ಇದು ಎಲ್ಲ ವರ್ಗದ ಬಳಕೆದಾರರಿಗೆ ನ್ಯಾಯಸಮ್ಮತವೇ?” ಎಂದು ಪ್ರಶ್ನೆ ಮಾಡಿಕೊಂಡರು. ಈ ಪ್ರಶ್ನೆಯೇ ಹೆಚ್ಚಿನ ಪ್ರಾಮಾಣಿಕತೆ ಮತ್ತು ಹೊಸತನವನ್ನು ತರಲು ಮಾರ್ಗವಾಯಿತು. ಈ ನೈತಿಕ ಚಿಂತನೆಗೆ ಅವರು ಸಂಸ್ಥೆಯ AI ಜವಾಬ್ದಾರಿ ಸಮಿತಿಯಲ್ಲಿ ಸ್ಥಾನ ಪಡೆದರು.
  • ಹೈಬ್ರಿಡ್ ತಂಡಗಳನ್ನು ಮುನ್ನಡೆಸಿರಿ: AI ಟೂಲ್‌ಗಳು ಸಹೋದ್ಯೋಗಿಗಳಂತೆ ಕೆಲಸ ಮಾಡುತ್ತಿದ್ದಂತೆ, ಪಿಚೈ ಜನ ಮತ್ತು ಯಂತ್ರಗಳ ಸಂಯೋಜಿತ ತಂಡಗಳನ್ನು ನಿರ್ವಹಿಸಲು ಆರಂಭಿಸಿದರು. ಅವರು AI ಗೆ ಡೇಟಾ ವಿಶ್ಲೇಷಣೆ ಹಂಚಿದರು ಆದರೆ ನಿರ್ಧಾರಗಳು ಮಾನವ ಚರ್ಚೆಯಿಂದ ಪರಿಹಾರವಾದವು. ಇದು ತಂಡದ ಸಾಮರ್ಥ್ಯವನ್ನು ಹೊಸ ಮಟ್ಟಕ್ಕೆ ಎತ್ತಿತು.
  • ಸಾರ್ವಜನಿಕ ಚರ್ಚೆಗಳಲ್ಲಿ ಧ್ವನಿಯಾಗಿರಿ: ಅವರು ಲಿಂಕ್ಡ್‌ಇನ್‌ನಲ್ಲಿ ತಮ್ಮ ಪ್ರಯೋಗಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. AI ಪ್ರಾಂಪ್ಟ್‌ಗಳು, ನೈತಿಕ ತೀರ್ಮಾನಗಳು, ತಂಡದ ನಾಯಕತ್ವದ ಕುರಿತು ಹಂಚಿಕೊಂಡರು. ಈ ಪೋಸ್ಟ್‌ಗಳು ಟೆಕ್ ವೆಬಿನಾರ್‌ಗಳಲ್ಲಿ ಭಾಷಣಗಳಿಗೆ ಆಹ್ವಾನವನ್ನು ತಂದವು.