ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ಜೊತೆ ಪೃಥ್ವಿ ಶಾ ಕಿರಿಕ್; ಮೈದಾನದಲ್ಲಿ ನಡೆದಿದ್ದೇನು? / Prithvi Shah Kirik with Sarfaraz Khans brother Musheer Khan | ಕ್ರೀಡೆ

ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ಜೊತೆ ಪೃಥ್ವಿ ಶಾ ಕಿರಿಕ್; ಮೈದಾನದಲ್ಲಿ ನಡೆದಿದ್ದೇನು? / Prithvi Shah Kirik with Sarfaraz Khans brother Musheer Khan | ಕ್ರೀಡೆ

Last Updated:

ಮುಂಬೈನ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ಮೇಲೆ ಪೃಥ್ವಿ ಶಾ ಹಲ್ಲೆಗೆ ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Prithvi ShahPrithvi Shah
Prithvi Shah

ಟೀಮ್ ಇಂಡಿಯಾ (Team India)ಗೆ ಬಿರುಗಾಳಿಯಂತೆ ಬಂದು ನಂತರ ಸಾಗರದ ಅಲೆ(Wave)ಗಳಂತೆ ಮಾಯವಾದ ಹೆಸರು ಪೃಥ್ವಿ ಶಾ (Prithvi Shaw). ಕಳೆದ ಕೆಲವು ವರ್ಷಗಳಿಂದ ಪೃಥ್ವಿ ಶಾ ತಮ್ಮ ಆಟಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಈಗ ಪೃಥ್ವಿ ಶಾ ಮತ್ತೊಂದು ವಿವಾದ(Controversy)ವನ್ನು ಹುಟ್ಟು ಹಾಕಿದ್ದಾರೆ. ರಣಜಿ ಟ್ರೋಫಿ (Ranji Trophy) ಅಭ್ಯಾಸ ಪಂದ್ಯದ ಸಮಯದಲ್ಲಿ ಪೃಥ್ವಿ ಶಾ ತಾಳ್ಮೆ ಕಳೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಟೀಮ್ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ (Sarfaraz Khan) ಅವರ ಕಿರಿಯ ಸಹೋದರ ಮುಶೀರ್ ಖಾನ್ (Mushir Khan) ಮೇಲೆ ಪೃಥ್ವಿ ಶಾ ಹಲ್ಲೆಗೆ ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಣಜಿ ಟ್ರೋಫಿ 2025-26ರ ಆವೃತ್ತಿಯೂ ಸದ್ಯದಲ್ಲೇ ಆರಂಭವಾಗಲಿದೆ. ಹೀಗಾಗಿ ಮುಂಬೈನ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ಅಭ್ಯಾಸ ಪಂದ್ಯವನ್ನು ಆಯೋಜಿಸಲಾಗಿದೆ.

ಅಕ್ಟೋಂಬರ್ 7 ರಂದು ನಡೆದ ಪಂದ್ಯದ ಮೊದಲ ದಿನದಾಟದಲ್ಲಿ ಮಹಾರಾಷ್ಟ್ರ ತಂಡದ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಮತ್ತು ಮುಂಬೈ ತಂಡದ ಸ್ಪಿನ್ನರ್ ಮುಶೀರ್ ಖಾನ್ ನಡುವೆ ಕಿರಿಕ್ ಆಗಿದೆ. ಈ ವೇಳೆ ತಾಳ್ಮೆ ಕಳೆದುಕೊಂಡು ರೊಚ್ಚಿಗೆದ್ದ ಪೃಥ್ವಿ ಶಾ ತಮ್ಮ ಕೈಯಲ್ಲಿದ್ದ ಬ್ಯಾಟ್ ಮೂಲಕ ಮುಶೀರ್ ಖಾನ್ ಮೇಲೆ ಬಲಪ್ರದರ್ಶನ ಮಾಡಲು ಮುಂದಾಗಿದ್ದಾರೆ.

ನಡೆದಿದ್ದೇನು?

ಪಂದ್ಯದ ಮೊದಲ ದಿನದಾಟದಲ್ಲಿ ಮಹಾರಾಷ್ಟ್ರ ತಂಡದ ಪರ ಪೃಥ್ವಿ ಶಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪೃಥ್ವಿ 220 ಎಸೆತಗಳಲ್ಲಿ 181 ರನ್ ಗಳಿಸಿದ್ದಾಗ ಮುಶೀರ್ ಖಾನ್ ಬೌಲಿಂಗ್​ನಲ್ಲಿ ಔಟಾದರು. ಕ್ರೀಸ್ ನಿಂದ ತೆರಳುತ್ತಿದ್ದ ಪೃಥ್ವಿ ಶಾ ಅವರಿಗೆ ಮುಶೀರ್ ಟಾಟಾ ಬೈಬೈ ಎಂದು ಸಂಜ್ಞೆ ಮಾಡುವ ಮೂಲಕ ವಿದಾಯ ಹೇಳಿ ಸಂಭ್ರಮಾಚರಣೆ ಮಾಡಿದರು. ಮುಶೀರ್ ಹೇಳಿದ ವಿದಾಯ ಪೃಥ್ವಿ ಶಾ ಅವರನ್ನು ಕೋಪಗೊಳ್ಳುವಂತೆ ಮಾಡಿತು.

ಈ ಸಂದರ್ಭದಲ್ಲಿ ಪೃಥ್ವಿ ಶಾ ಮತ್ತು ಮುಶೀರ್ ಖಾನ್ ನಡುವೆ ಮೈದಾನದಲ್ಲೇ ಜಗಳವಾಡಿದ್ದಾರೆ. ಮೊದಲು ಇಬ್ಬರು ಆಟಗಾರ ನಡುವೆ ಮಾತಿಗೆ ಮಾತು ಬೆಳೆದು ನಂತರ ಮುಶೀರ್ ಮೇಲೆ ಪೃಥ್ವಿ ಶಾ ಬಲಪ್ರಯೋಗಕ್ಕೂ ಮುಂದಾಗಿದ್ದಾರೆ ಎಂದು ವರದಿಗಳಾಗಿವೆ.

ಆಟಗಾರರ ಮಧ್ಯಪ್ರವೇಶ

ಮುಶೀರ್ ಮೇಲೆ ಮೇಲೆ ಪೃಥ್ವಿ ಶಾ ಬಲಪ್ರಯೋಗಕ್ಕೂ ಮುಂದಾಗುತ್ತಿದ್ದಂತೆ ಸಹ ಬ್ಯಾಟರ್, ಮುಂಬೈ ತಂಡದ ಆಟಗಾರರು, ಮತ್ತು ಅಂಪೈರ್‌ಗಳು ಮಧ್ಯಪ್ರವೇಶಿಸಿದರು. ಆದಾಗ್ಯೂ, ಈ ಘಟನೆಯ ನಂತರ ಮುಂಬೈ ಆಟಗಾರರು ಮತ್ತು ಶಾ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮುಂಬೈನ ಮಾಜಿ ನಾಯಕ ಸಿದ್ಧೇಶ್ ಲಾಡ್ ಅವರು ಪೃಥ್ವಿ ಶಾ ಅವರ ಹಿಂದೆಯೇ ಪೆವಿಲಿಯನ್‌ಗೆ ಮಾತನಾಡಲು ಹೋದರು. ಈ ಮೂಲಕ ಪೃಥ್ವಿ ಶಾ ತಮ್ಮ ಅದ್ಭುತ ಇನ್ನಿಂಗ್ಸ್​ಗಿಂತ ಹೆಚ್ಚಾಗಿ ತಮ್ಮ ನಡೆ ಮೂಲಕ ಸುದ್ದಿಯಾಗಿದ್ದಾರೆ.