ಸೈಟ್-ವರದಕ್ಷಿಣೆಗಾಗಿ ಗಂಡನ ಕಿರುಕುಳ, ಡ್ಯಾಂಗೆ ಹಾರಿ ಗೃಹಿಣಿ ಸೂ*ಡ್; ಸಾಯೋ ಮುನ್ನ 8 ನಿಮಿಷದ ವಿಡಿಯೋ ಮಾಡಿ ಕಣ್ಣೀರು / Unable to bear husbands dowry harassment housewife commits suicide by making video | ಕ್ರೀಡೆ

ಸೈಟ್-ವರದಕ್ಷಿಣೆಗಾಗಿ ಗಂಡನ ಕಿರುಕುಳ, ಡ್ಯಾಂಗೆ ಹಾರಿ ಗೃಹಿಣಿ ಸೂ*ಡ್; ಸಾಯೋ ಮುನ್ನ 8 ನಿಮಿಷದ ವಿಡಿಯೋ ಮಾಡಿ ಕಣ್ಣೀರು / Unable to bear husbands dowry harassment housewife commits suicide by making video | ಕ್ರೀಡೆ

Last Updated:

ಪತಿ ಹಾಗೂ ಆತನ ಪೋಷಕರು ವರದಕ್ಷಿಣೆ ಹಾಗೂ ನಿವೇಶನಕ್ಕಾಗಿ ಕಿರಕುಳವನ್ನು ನೀಡಿದ್ದಾರೆ ಎಂದು ವಿಡಿಯೋ ಮಾಡಿ ಗೃಹಿಣಿಯೊಬ್ಬರು ಆತ್ಮಹ**ಗೆ ಶರಣಾಗಿದ್ದಾರೆ.

housewife commits suicidehousewife commits suicide
housewife commits suicide

ವಿಡಿಯೋ (Video) ಮಾಡಿ ಗೃಹಿಣಿ (Housewife)ಯೊಬ್ಬರು ಆತ್ಮಹ**ಗೆ ಶರಣಾಗಿರುವ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲ್ಲೂಕಿನ ಘಾಟಿಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಸೋತೇನಹಳ್ಳಿ ಗ್ರಾಮದ ಪುಷ್ಪ (28) ಸಾಯುವ ಮುನ್ನ 8 ನಿಮಿಷಗಳ ವಿಡಿಯೋ ಮಾಡಿ ಆತ್ಮಹ** ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಗಂಡ, ಅತ್ತೆ, ಮಾವ,ಭಾಮೈದುನರಿಂದ ಕಿರುಕುಳದ ಆರೋಪ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಬಳಿಯ ಘಾಟಿ ಬಳಿಯ ವಿಶ್ವೇಶ್ವರಯ್ಯ (Visvesvaraya) ಪಿಕ್ ಅಪ್ ಡ್ಯಾಂ (Dam)ಗೆ ಬಿದ್ದು ಸಾವನ್ನಪ್ಪಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸೋತೇನಹಳ್ಳಿ ಗ್ರಾಮದ ಪುಷ್ಪರನ್ನು ತಪಸೀಹಳ್ಳಿ ಗ್ರಾಮದ ವೇಣು ಜೊತೆ ವಿವಾಹ ಮಾಡಲಾಗಿತ್ತು. ಪತಿ ಹಾಗೂ ಆತನ ಪೋಷಕರು ವರದಕ್ಷಿಣೆ ಹಾಗೂ ನಿವೇಶನಕ್ಕಾಗಿ ಕಿರಕುಳವನ್ನು ನೀಡಿದ್ದಾರೆ. ಮದುವೆ ಆಗಿದ್ದಾಗಿನಿಂದಲೂ ಹೆಂಡತಿ ಜೊತೆ ಗಂಡ ಸಂಸಾರವನ್ನೇ ಮಾಡಿರಲಿಲ್ಲ. ಮಗು ಬೇಕು ಎಂದರೆ ಮೈದುನನ ಜೊತೆ ಮಲಗು ಎಂದು ಅತ್ತೆ, ಮಾವ ಹೇಳುತ್ತಿದ್ದರು ಎಂದು ಪುಷ್ಪಾ ಆರೋಪಿಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾವ ಗೋವಿಂದಪ್ಪ, ಗಂಡ ವೇಣು ಅನ್ನು ಪೋಲೀಸ ವಶಕ್ಕೆ ಪಡೆದಿದ್ದಾರೆ.

ಐದು ಗಂಟೆ ಬಳಿಕ ಮೃತದೇಹ‌ ಹೊರಗೆ

ಘಟನೆ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಬೆಳಗಿನಿಂದ ಘಾಟಿಯ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ನೀರಿನಲ್ಲೆ ಮೃತದೇಹ ಇತ್ತು. ಇದಾದ ಐದು ಗಂಟೆಗಳ ಬಳಿಕ ಮೃತದೇಹ‌ವನ್ನು ತೆಪ್ಪದ ಮೂಲಕ‌ ಪೊಲೀಸರು ಹೊರತೆಗೆದರು. ಮೃತದೇಹ ಹೊರತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ನದಿಗೆ ಹಾರಿ ತಾಯಿ ಮಗಳು ಆತ್ಮಹ**

ಹಾವೇರಿಯಲ್ಲಿ ಕೌಟುಂಬಿಕ ಕಲಹದಿಂದ ತಾಯಿ, ಮಗಳು ವರದಾ ನದಿಗೆ ಹಾರಿ ಆತ್ಮಹ** ಮಾಡಿಕೊಂಡಿದ್ದಾರೆ. ಹಾವೇರಿ ತಾಲೂಕಿನ ವರದಾಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಸವಿತಾ ನಾಗರಾಜ್ (38) ಮತ್ತು ಮಗಳು ಕಾವ್ಯಾ (12) ಸಾವನ್ನಪ್ಪಿದವರು. ಗಂಡನ ಮನೆಯಲ್ಲಿ ದಿನನಿತ್ಯ ನಡೆಯುತ್ತಿದ್ದ ಕಲಹದಿಂದ ಬೇಸತ್ತು ಆತ್ಮಹ** ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಯ ಸುಮಾರಿಗೆ ಸವಿತಾ ನಾಗರಾಜ್ ಮತ್ತು ಕಾವ್ಯ ಮನೆಯಿಂದ ಕಾಣಿಯಾಗಿದ್ದರು. ಹೀಗಾಗಿ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು. ಅನುಮಾನ ವ್ಯಕ್ತಪಡಿಸಿ ಸೋಮವಾರ ವರದಾ ನದಿಯಲ್ಲಿ ಪೊಲೀಸ್ ಇಲಾಖೆ‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೋಣಿ ಮೂಲಕ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಕಾವ್ಯಾ ಮೃತದೇಹ ಪತ್ತೆಯಾಗಿದ್ದು, ಸವಿತಾ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಮೃತ ಸವಿತಾ ನಾಗರಾಜ್​ ಅವರಿಗೆ ಇಬ್ಬರು ಗಂಡು, ಓರ್ವ ಹೆಣ್ಣು ಮಗಳಿದ್ದಾಳೆ. ಪ್ರತಿಭಾವಂತೆಯಾಗಿದ್ದ ಮಗಳು ಕಾವ್ಯ ಇತ್ತೀಚೆಗಷ್ಟೇ ನವೋದಯ ಪರೀಕ್ಷೆ ಪಾಸಾಗಿದ್ದಳು. ಆದರೆ ತಾಯಿ ಜೊತೆ ಸಾವಿನ ಮನೆ ಸೇರಿರುವುದು ಬೇಸರದ ಸಂಗತಿ.