ಇದೀಗ ಹಾರ್ದಿಕ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದು ನಟಿ-ಮಾಡೆಲ್ ಮಹೀಕಾ ಶರ್ಮಾ ಅವರೊಂದಿಗೆ ಸುತ್ತಾಡುತ್ತಿದ್ದಾರೆ, ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಊಹಾಪೋಹಗಳು ಹಬ್ಬಿವೆ.
ರೆಡ್ಡಿಟ್ ಥ್ರೆಡ್ ಊಹಾಪೋಹಗಳನ್ನು ಹುಟ್ಟುಹಾಕಿದ ನಂತರ ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್-ನಟಿ ಮಹೀಕಾ ಶರ್ಮಾ ಬಗ್ಗೆ ವದಂತಿಗಳು ಹರಡಲು ಪ್ರಾರಂಭಿಸಿದವು.
ಇನ್ನೊಂದು ಸನ್ನಿವೇಶದಲ್ಲಿ ಹಾರ್ದಿಕ್ಗೆ ತುಂಬಾ ನಿಕಟವಾಗಿರುವ ಜೆರ್ಸಿ ಸಂಖ್ಯೆ 33 ಅನ್ನು ಮಹೀಕಾ ಕೈಯಲ್ಲಿ ಬರೆದುಕೊಂಡಿರುವುದನ್ನು ತೋರಿಸಿದ್ದಾರೆ.
ಇದೆಲ್ಲವೂ ಇಬ್ಬರ ನಡುವೆ ಸಮ್ಥಿಂಗ್ ಇದೆ ಎಂಬುದನ್ನು ದೃಢೀಕರಿಸಿದ್ದು, ಇದಕ್ಕೆ ಇನ್ನಷ್ಟು ಇಂಬು ನೀಡುವಂತೆ ಹಾರ್ದಿಕ್ ಹಾಗೂ ಮಹೀಕಾ ಇಬ್ಬರೂ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಫಾಲೋ ಮಾಡುತ್ತಿದ್ದಾರೆ ಎಂಬುದನ್ನು ಅಭಿಮಾನಿಗಳು ಗಮನಿಸಿದ್ದಾರೆ.
ಹಾರ್ದಿಕ್ ಪಾಂಡ್ಯ, ಮಹೀಕಾ ಶರ್ಮಾ
ಆದರೂ ಇದು ಸುಳ್ಳಾಗಿರಬಹುದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಬಹುಶಃ ಮಹೀಕಾರಿಗೆ ಕ್ರಿಕೆಟ್ ರೀಲ್ಗಳೆಂದರೆ ಇಷ್ಟವಾಗಿರಬಹುದು.
ಇನ್ನು ಹಾರ್ದಿಕ್ರ ರೀಲ್ಗಳನ್ನು ಕೂಡ ಅವರು ಮೆಚ್ಚಿಕೊಂಡಿದ್ದಾರೆ, ಆದರೆ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ, ಮೆಚ್ಚಿಕೊಂಡಿದ್ದಾರೆಂಬುದು ಇದರರ್ಥವಾಗಿಲ್ಲದಿರಬಹುದು. ಅವರು ಒಳ್ಳೆಯ ಸ್ನೇಹಿತರೂ ಆಗಿರಬಹುದು ಎಂದು ಹೇಳಿಕೊಂಡಿದ್ದಾರೆ.
ಮಾಡೆಲ್ ಮಹೀಕಾ ಬಗ್ಗೆ ಹೇಳುವುದಾದರೆ ಮಾಡೆಲಿಂಗ್ ಹಾಗೂ ನಟನೆಯ ಕಡೆಗೆ ಒಲವು ತೋರುವ ಮುನ್ನ ಅರ್ಥಶಾಸ್ತ್ರ ಮತ್ತು ಹಣಕಾಸು ವಿಷಯಗಳನ್ನು ಅಧ್ಯಯನ ಮಾಡಿದ್ದಾರೆ.
ಅವರು ಅನೇಕ ಸಂಗೀತ ವೀಡಿಯೊಗಳು, ಸ್ವತಂತ್ರ ಚಲನಚಿತ್ರಗಳು ಮತ್ತು ತನಿಷ್ಕ್, ವಿವೋ ಮತ್ತು ಯುನಿಕ್ಲೋ ನಂತಹ ಬ್ರ್ಯಾಂಡ್ಗಳ ಜಾಹೀರಾತು ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅದೂ ಅಲ್ಲದೆ ಅವರು ಮನೀಶ್ ಮಲ್ಹೋತ್ರಾ, ಅನಿತಾ ಡೊಂಗ್ರೆ ಮತ್ತು ತರುಣ್ ತಹಿಲಿಯಾನಿ ಅವರಂತಹ ಪ್ರಸಿದ್ಧ ವಿನ್ಯಾಸಕರ ರ್ಯಾಂಪ್ಗಳಲ್ಲೂ ಹೆಜ್ಜೆ ಹಾಕಿದ್ದಾರೆ.
ನತಾಶಾ ಹಾಗೂ ಹಾರ್ದಿಕ್ 2024 ರಲ್ಲಿ ಪರಸ್ಪರ ವಿಚ್ಛೇದಿತರಾದರು. ಸಾಮಾಜಿಕ ಮಾಧ್ಯಮದಲ್ಲಿ ಜೊತೆಯಾಗಿಯೇ ವಿಚ್ಛೇದನದ ಸುದ್ದಿಯನ್ನು ಘೋಷಿಸಿದ್ದರು, 4 ವರ್ಷಗಳ ದಾಂಪತ್ಯದ ಬಳಿಕ ಹಾರ್ದಿಕ ಹಾಗೂ ನಾನು ಬೇರೆಯಾಗಲು ನಿರ್ಧರಿಸಿದ್ದೇವೆ.
ನಾವು ಜತೆಯಾಗಿರಲು ಸಾಕಷ್ಟು ಪ್ರಯತ್ನಿಸಿದೆವು ಆದರೂ ನಮ್ಮಿಬ್ಬರ ಹಿತದೃಷ್ಟಿಯಿಂದ ಬೇರಾಗುವುದೇ ಒಳಿತಾಗಿದೆ. ನಾವು ಒಟ್ಟಿಗೆ ಅನುಭವಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನಿಸಿದರೆ ಮತ್ತು ನಾವು ಕುಟುಂಬವನ್ನು ಬೆಳೆಸಿದಾಗ ಇದು ನಮಗೆ ಕಠಿಣ ನಿರ್ಧಾರವಾಗಿತ್ತು.
ಪುತ್ರ ಅಗಸ್ತ್ಯ ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿರುತ್ತಾರೆ. ಅವರ ಸಂತೋಷಕ್ಕಾಗಿ ನಾವು ಸಾಧ್ಯವಿರುವ ಎಲ್ಲವನ್ನೂ ನೀಡುತ್ತೇವೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಹ-ಪೋಷಕರಾಗುತ್ತೇವೆ.
ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು, ಖಾಸಗಿತನವನ್ನು ಕಾಪಾಡಲು ನಿಮ್ಮ ಬೆಂಬಲ ಮತ್ತು ತಿಳುವಳಿಕೆಯನ್ನು ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ ಇಂತಿ ಹಾರ್ದಿಕ್/ನತಾಶಾ ಎಂದು ಬರೆದುಕೊಂಡಿದ್ದರು
September 16, 2025 10:46 PM IST