ಈ ಪಂದ್ಯದಲ್ಲಿ ಬುಂದೇಲ್ಖಂಡ್ ಬುಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಅಭಿಷೇಕ್ ಪಾಠಕ್ ಕೇವಲ 33 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನ ಅಚ್ಚರಿಗೊಳಿಸಿದರು. ಓಪನರ್ ಆಗಿ ರಿಂಗ್ ಪ್ರವೇಶಿಸಿದ ಅಭಿಷೇಕ್ ಎದುರಾಳಿ ಬೌಲರ್ಗಳನ್ನು ಉಡೀಸ್ ಮಾಡಿದರು. ಅವರು ತಮ್ಮ ವಿಧ್ವಂಸಕ ಬ್ಯಾಟಿಂಗ್ ಮೂಲಕ ಮೈದಾನದಲ್ಲಿ ಬೌಂಡರಿ-ಸಿಕ್ಸರ್ಗಳ ಮಳೆಗರೆದರು.