2025-27ರ ಆವೃತ್ತಿಯ WTCಯಲ್ಲಿ ಭಾರತಕ್ಕೆ ಎದುರಾಳಿ ಯಾರು! ಎಲ್ಲಾ ತಂಡಗಳ ಸಂಪೂರ್ಣ ವಿವರ ಇಲ್ಲಿದೆIndia s WTC Schedule Revealed Get Ready for Action-Packed 2025-27 Cycle

2025-27ರ ಆವೃತ್ತಿಯ WTCಯಲ್ಲಿ ಭಾರತಕ್ಕೆ ಎದುರಾಳಿ ಯಾರು! ಎಲ್ಲಾ ತಂಡಗಳ ಸಂಪೂರ್ಣ ವಿವರ ಇಲ್ಲಿದೆIndia s WTC Schedule Revealed Get Ready for Action-Packed 2025-27 Cycle

Last Updated:

2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಎರಡು ವರ್ಷಗಳ ಅವಧಿಯಲ್ಲಿ ಪ್ರತಿ ತಂಡವು ಆರು ಟೆಸ್ಟ್ ಸರಣಿಗಳನ್ನು ಆಡಬೇಕೆಂದು ಐಸಿಸಿ ನಿಗದಿಪಡಿಸಿದೆ.

ವಿಶ್ವಟೆಸ್ಟ್​ ಚಾಂಪಿಯನ್​​ಶಿಪ್​  2025-27ವಿಶ್ವಟೆಸ್ಟ್​ ಚಾಂಪಿಯನ್​​ಶಿಪ್​  2025-27
ವಿಶ್ವಟೆಸ್ಟ್​ ಚಾಂಪಿಯನ್​​ಶಿಪ್​ 2025-27

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-27ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 4ನೇ ಆವೃತ್ತಿಯ ಟೂರ್ನಮೆಂಟ್​​ನಲ್ಲಿ ಒಂಬತ್ತು ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡವು ಆರು ಸರಣಿಗಳನ್ನು ಆಡಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯೊಂದಿಗೆ ಚಾಂಪಿಯನ್‌ಶಿಪ್ ಪ್ರಾರಂಭವಾಗುತ್ತದೆ. ಟೀಮ್ ಇಂಡಿಯಾ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ.

ಈ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು ಒಂಬತ್ತು ತಂಡಗಳು ಭಾಗವಹಿಸಲಿವೆ. ಪ್ರತಿ ತಂಡವು ಆರು ಸರಣಿಗಳನ್ನು ಆಡಲಿದೆ. ಐಸಿಸಿ ಅವುಗಳಲ್ಲಿ ಮೂರು ಸರಣಿಗಳನ್ನು ಸ್ವದೇಶದಲ್ಲಿ ಮತ್ತು ಮೂರು ವಿದೇಶಗಳಲ್ಲಿ ಆಡಲು ಯೋಜಿಸಿದೆ. ಪ್ರತಿ ತಂಡವು ಎಷ್ಟು ಟೆಸ್ಟ್‌ ಪಂದ್ಯಗಳನ್ನು ಆಡುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಎರಡು ವರ್ಷಗಳ ಅವಧಿಯಲ್ಲಿ ಪ್ರತಿ ತಂಡವು ಆರು ಟೆಸ್ಟ್ ಸರಣಿಗಳನ್ನು ಆಡಬೇಕೆಂದು ಐಸಿಸಿ ನಿಗದಿಪಡಿಸಿದೆ.

ಭಾರತ ತಂಡವೂ ವಿದೇಶದ ಅಂಗಣದಲ್ಲಿ ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ವಿರುದ್ಧ ಆಡಿದರೆ, ತವರಿನಲ್ಲಿ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡವನ್ನು ಎದುರಿಸಿದಲಿದೆ.

ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಸರಣಿಗಳನ್ನು ಆಡಲಿದ್ದು, ಭಾರತ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಆಡಲಿದೆ. ಬಾಂಗ್ಲಾದೇಶ ತಂಡವು ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧ ತವರಿನಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ವಿದೇಶಿ ನೆಲದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ವಿರುದ್ಧ ಆಡಲಿದೆ.

ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್, ಭಾರತ ಮತ್ತು ಪಾಕಿಸ್ತಾನ ವಿರುದ್ಧ ತವರಿನಲ್ಲಿ ಪಂದ್ಯಗಳನ್ನು ಆಡಲಿದೆ. ನಂತರ ಅವರು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಸ್ಪರ್ಧಿಸಲು ಹೋಗಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಬಾಂಗ್ಲಾದೇಶವನ್ನು ತವರಿನಲ್ಲಿ ಆಡಲಿದೆ. ವಿದೇಶಿ ಸರಣಗಳನ್ನಾಡಲು ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಶ್ರೀಲಂಕಾ ತಂಡವು ಭಾರತ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶವನ್ನು ತವರಿನಲ್ಲಿ ಎದುರಿಸಲಿದೆ. ಅವರು ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನಕ್ಕೆ ಪ್ರಯಾಣಿಸಿ ಅಲ್ಲಿ ಉಳಿದ ಮೂರು ಸರಣಿಗಳನ್ನಾಡಲಿದೆ. ವೆಸ್ಟ್ ಇಂಡೀಸ್ ತಂಡವು ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ತವರಿನಲ್ಲಿ ಆಡಲಿದೆ. ನ್ಯೂಜಿಲೆಂಡ್, ಭಾರತ ಮತ್ತು ಬಾಂಗ್ಲಾದೇಶ ಪ್ರವಾಸದಲ್ಲಿ ಉಳಿದ ಮೂರು ಸರಣಿಗಳನ್ನಾಡಲಿದೆ.