Keshav Maharaj: ಟೆಸ್ಟ್ ಕ್ರಿಕೆಟ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಕೇಶವ್ ಮಹರಾಜ್! ಸೌತ್ ಆಫ್ರಿಕಾ ಪರ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಇವರೆ | Keshav Maharaj first South African spinner to take 200 Test wickets

Keshav Maharaj: ಟೆಸ್ಟ್ ಕ್ರಿಕೆಟ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಕೇಶವ್ ಮಹರಾಜ್! ಸೌತ್ ಆಫ್ರಿಕಾ ಪರ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಇವರೆ | Keshav Maharaj first South African spinner to take 200 Test wickets

Last Updated:

ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡದ ನಾಯಕ ಕೇಶವ ಮಹಾರಾಜ್ ಬುಲವಾಯೊದಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದಾಖಲೆಯೊಂದನ್ನು ಮಾಡಿದ್ದಾರೆ.

News18News18
News18

ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡದ ನಾಯಕ ಕೇಶವ ಮಹಾರಾಜ್ (Keshav Maharaj) ಬುಲವಾಯೊದಲ್ಲಿ ನಡೆಯುತ್ತಿರುವ ಜಿಂಬಾಬ್ವೆ (Zimbambe) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದಾಖಲೆಯೊಂದನ್ನು ಮಾಡಿದ್ದಾರೆ. ಟೆಂಬಾ ಬವುಮಾ (Temba Bahuma) ವಿಶ್ರಾಂತಿ ಪಡೆದಿರುವುದರಿಂದ ಹಿರಿಯ ಸ್ಪಿನ್ನರ್ ಕೇಶವ್ ಮಹರಾಜ್ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರು ಈಗಾಗಲೇ ದಕ್ಷಿಣ ಆಫ್ರಿಕಾ ತಂಡವನ್ನು ಏಕದಿನ ಮತ್ತು ಟಿ-20 ತಂಡಗಳಲ್ಲಿ ನಾಯಕತ್ವ ವಹಿಸಿದ್ದರು.

ದಕ್ಷಿಣ ಆಫ್ರಿಕಾ ತಂಡದ ಸೀಮಿತ ಓವರ್‌ಗಳ ನಾಯಕ ಬವುಮಾ ಎಡ ಮಂಡಿರಜ್ಜು ಸ್ನಾಯು ಸೆಳೆತದಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಮಹಾರಾಜ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸಿದ್ದು, 4ನೇ ದಿನದಂದು ಪಂದ್ಯವನ್ನು ಮುಗಿಸುವ ಸಾಧ್ಯತೆ ಇದೆ. ಇನ್ನೂ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ ಮಹಾರಾಜ್ ಇತಿಹಾಸ ಸೃಷ್ಟಿಸಿದರು ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಾತ್ರವಲ್ಲ, ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಈ ಸಾಧನೆ ಮಾಡಿದ 9 ನೇ ಬೌಲರ್ ಎನಿಸಿಕೊಂಡರು.

ದಕ್ಷಿಣ ಆಫ್ರಿಕಾ ಪರ 8 ವೇಗಿಗಳು ಈ ಮೈಲಿಗಲ್ಲು ಸಾಧಿಸಿದ್ದಾರೆ. ಆದರೆ, ಇದುವರೆಗೆ ಯಾವುದೇ ಸ್ಪಿನ್ ಬೌಲರ್ ಈ ಸಾಧನೆ ಮಾಡಿರಲಿಲ್ಲಿ. ಆದ್ರೆ, ಜಿಂಬಬಾಂಬ್ವೆ ವಿರುದ್ಧ 3 ವಿಕೆಟ್ ಪಡೆಯುವ ಮೂಲಕ ಆಫ್ರಿಕಾ ಪರ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಆದರು. ಡೇಲ್ ಸ್ಟೇನ್ ತಮ್ಮ ಟೆಸ್ಟ್ ವೃತ್ತಿಜೀವನವನ್ನು 439 ವಿಕೆಟ್‌ಗಳೊಂದಿಗೆ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಡೇಲ್ ಸ್ಟೇನ್ ಬಳಿಕ ಶಾನ್ ಪೊಲಾಕ್ (421), ಮಖಾಯ ಎನ್‌ಟಿನಿ (390), ಕಗಿಸೊ ರಬಾಡ (336), ಅಲನ್ ಡೊನಾಲ್ಡ್ (330), ಮೋರ್ನೆ ಮಾರ್ಕೆಲ್ (309), ಜಾಕ್ವೆಸ್ ಕಾಲಿಸ್ (291) ಮತ್ತು ವೆರ್ನಾನ್ ಫಿಲಾಂಡರ್ (224) ಇದ್ದಾರೆ. ಆಫ್ರಿಕಾ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾ ಮೇಲುಗೈ

ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾ ಸದ್ಯ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರವಾಸಿ ತಂಡ 418/9 ರನ್‌ಗಳ ದೊಡ್ಡ ಮೊತ್ತವನ್ನು ಗಳಿಸಿತು. ಲುವಾನ್-ಡ್ರೆ ಪ್ರಿಟೋರಿಯಸ್ ಟೆಸ್ಟ್‌ನಲ್ಲಿ ಸ್ಮರಣೀಯ ಚೊಚ್ಚಲ ಪಂದ್ಯವನ್ನು ಆಡಿದರು ಮತ್ತು 160 ಎಸೆತಗಳಲ್ಲಿ 153 ರನ್ ಗಳಿಸಿದರು. ಕಾರ್ಬಿನ್ ಬಾಷ್ 124 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗಿ ಉಳಿದರು. ದಕ್ಷಿಣ ಆಫ್ರಿಕಾ ಜಿಂಬಾಬ್ವೆಯನ್ನು 251 ರನ್‌ಗಳಿಗೆ ಆಲೌಟ್ ಮಾಡಿತು, ಹೀಗಾಗಿ 167 ರನ್‌ಗಳ ಮುನ್ನಡೆ ಸಾಧಿಸಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Keshav Maharaj: ಟೆಸ್ಟ್ ಕ್ರಿಕೆಟ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಕೇಶವ್ ಮಹಾರಾಜ್! ಸೌತ್ ಆಫ್ರಿಕಾ ಪರ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಇವರೆ