India vs England: ಟಾಸ್ ಗೆದ್ದ ಇಂಗ್ಲೆಂಡ್! ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ, ಬುಮ್ರಾ ಔಟ್, RCB ಮಾಜಿ ವೇಗಿಗೆ ಚಾನ್ಸ್

India vs England: ಟಾಸ್ ಗೆದ್ದ ಇಂಗ್ಲೆಂಡ್! ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ, ಬುಮ್ರಾ ಔಟ್, RCB ಮಾಜಿ ವೇಗಿಗೆ ಚಾನ್ಸ್

ಗೆಲ್ಲಲೇಬೇಕಾದ ಪಂದ್ಯದಿಂದ ಟೀಂ ಇಂಡಿಯಾ ಪ್ರಮುಖ 3 ಬದಲಾವಣೆ ಮಾಡಿಕೊಂಡಿದೆ. ಅದರಲ್ಲೂ ಪ್ರಮುಖವಾಗಿ ಜಸ್ಪ್ರಿತ್ ಬುಮ್ರಾ ಅವರಿಗೆ ಎರಡನೇ ಟೆಸ್ಟ್‌ನಿಂದ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ಆರ್‌ಸಿಬಿ ವೇಗಿ ಆಕಾಶ್‌ದೀಪ್ ಸಿಂಗ್ ಅವರಿಗೆ ಅವಕಾಶ ನೀಡಲಾಗಿದೆ. ಇನ್ನು ಶಾರ್ದುಲ್ ಠಾಕೂರ್ ಬದಲು ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಸುದರ್ಶನ್ ಬದಲಿಗೆ ನಿತಿಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡಿದ್ದಾರೆ.

ಇಬ್ಬರು ಸ್ಪಿನ್ನರ್‌ಗೆ ಅವಕಾಶ

ಅಂದಹಾಗೆ ಜುಲೈ 2 ರಿಂದ ಆಡುವ ಪಂದ್ಯದಲ್ಲಿ ಕೂಡ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಆರಂಭಿಕರಾಗಿ ಕೆಎಲ್ ರಾಹುಲ್, ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್, ಹಾಗೂ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಇಂದಿನ ಪಂದ್ಯದಲ್ಲೂ ಅವಕಾಶ ಪಡೆದುಕೊಂಡಿದ್ದಾರೆ. ಹಾಗೂ ರವೀಂದ್ರ ಜಡೇಜಾ ಜೊತೆಗೆ ಬ್ಯಾಟಿಂಗ್‌ನಲ್ಲೂ ಕಮಾಲ್ ಮಾಡಬಲ್ಲ ವಾಷಿಂಗ್‌ಟನ್ ಸುಂದರ್ ಅವರಿಗೆ ಅವಕಾಶ ನೀಡಲಾಗಿದೆ. ಒಟ್ಟು ಇಬ್ಬರು ಸ್ಪಿನ್ನರ್ ಜೊತೆಗೆ ಕಣಕ್ಕಿಳಿದಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್ 11

ಭಾರತ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಶುಭಮನ್ ಗಿಲ್(ನಾಯಕ), ರಿಷಭ್ ಪಂತ್( ವಿಕೀ), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ತಂಡದಲ್ಲಿದ್ದಾರೆ.

ಇಂಗ್ಲೆಂಡ್ (ಪ್ಲೇಯಿಂಗ್ XI):  ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್(ವಿಕೀ), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಶ್ ಟಂಗ್, ಶೋಯೆಬ್ ಬಶೀರ್ ತಂಡದಲ್ಲಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

India vs England: ಟಾಸ್ ಗೆದ್ದ ಇಂಗ್ಲೆಂಡ್! ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ, ಬುಮ್ರಾ ಔಟ್, RCB ಮಾಜಿ ವೇಗಿಗೆ ಚಾನ್ಸ್