ಮಳೆಯಲ್ಲಿ ಕಾರಿನ ಗ್ಲಾಸ್ ಸಂಪೂರ್ಣ ಮಂಜಿನಿಂದ ಮುಚ್ಚಿ ಹೋಗಿದ್ಯಾ? ಹಾಗಾದ್ರೆ, ಮೊದ್ಲು ಈ ಕೆಲಸ ಮಾಡಿ! | simple tips to remove fog from windshield in monsoon

ಮಳೆಯಲ್ಲಿ ಕಾರಿನ ಗ್ಲಾಸ್ ಸಂಪೂರ್ಣ ಮಂಜಿನಿಂದ ಮುಚ್ಚಿ ಹೋಗಿದ್ಯಾ? ಹಾಗಾದ್ರೆ, ಮೊದ್ಲು ಈ ಕೆಲಸ ಮಾಡಿ! | simple tips to remove fog from windshield in monsoon

Last Updated:

ಮಳೆಗಾಲದಲ್ಲಿ ಕಾರು ಚಾಲನೆ ಸುರಕ್ಷಿತವಾದರೂ, ವಿಂಡ್‌ಶೀಲ್ಡ್ ಮತ್ತು ಡೋರ್ ಗ್ಲಾಸ್ ಮೇಲೆ ಮಂಜು ರೂಪುಗೊಳ್ಳುವುದು ದೊಡ್ಡ ಸಮಸ್ಯೆ. ವೈಪರ್ ಬ್ಲೇಡ್‌ಗಳನ್ನು ಪರಿಶೀಲಿಸಿ, HVC ಬಳಸಿ, ಮಂಜು ನಿರೋಧಕ ದ್ರಾವಣ ಹಚ್ಚಿ.

News18News18
News18

ಈಗ ಮಳೆಗಾಲ. ಈ ಸೀಸನ್​ನಲ್ಲಿ ಕಾರು (Car) ಅಥವಾ ನಾಲ್ಕು ಚಕ್ರದ ವಾಹನಗಳಲ್ಲಿ (Four Wheeler) ಪ್ರಯಾಣಿಸುವುದು ಸುರಕ್ಷಿತ. ಏಕೆಂದರೆ ಇದರಿಂದ ನೀವು ಮಳೆಯಲ್ಲಿ ನೆನೆಯದೇ, ಒದ್ದೆ ಆಗದೇ ಪ್ರಯಾಣಿಸಬಹುದು. ಹೀಗಾಗಿ ಅನೇಕ ಮಂದಿ ಮಳೆಗಾಲದಲ್ಲಿ (Rainy Season) ಕಾರಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ಈ ಸಮಯದಲ್ಲಿ ಎದುರಾಗುವ ದೊಡ್ಡ ಸಮಸ್ಯೆ ಎಂದರೆ ಕಾರಿನ ವಿಂಡ್‌ಶೀಲ್ಡ್ ಮತ್ತು ಡೋರ್​ ಗ್ಲಾಸ್​ ಮೇಲೆ ಮಂಜು ರೂಪುಗೊಳ್ಳುವುದು. ಮಂಜು ಗಾಜಿನ ಹೊರಭಾಗವನ್ನು ಮಬ್ಬಾಗಿ ಕಾಣುವಂತೆ ಮಾಡುತ್ತದೆ, ಇದನ್ನು ಮಸುಕಾದ ದೃಷ್ಟಿ ಎಂದು  ಕರೆಯಲಾಗುತ್ತದೆ. ಕಾರಿನ ವೈಪರ್‌ಗಳು ಆನ್ ಆಗಿದ್ದರೂ ಸಹ, ಮಂಜು ಯಾವಾಗಲೂ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಮಂದಿ ಭಾರೀ ಮಳೆಯಲ್ಲಿ ವಾಹನ ಚಲಾಯಿಸಲು ಹಿಂಜರಿಯುತ್ತಾರೆ.

ವಿಂಡ್‌ಶೀಲ್ಡ್ ಮತ್ತು ಡೋರ್​ ಗ್ಲಾಸ್​ ಮೇಲೆ ಮಂಜು ರೂಪುಗೊಳ್ಳುವುದು. ಮಂಜು ಗಾಜಿನ ಹೊರಭಾಗವನ್ನು ಮಬ್ಬಾಗಿ ಕಾಣುವಂತೆ ಮಾಡುತ್ತದೆ, ಇದನ್ನು ಮಸುಕಾದ ದೃಷ್ಟಿ ಎಂದು  ಕರೆಯಲಾಗುತ್ತದೆ. ಕಾರಿನ ವೈಪರ್‌ಗಳು ಆನ್ ಆಗಿದ್ದರೂ ಸಹ, ಮಂಜು ಯಾವಾಗಲೂ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಮಂದಿ ಭಾರೀ ಮಳೆಯಲ್ಲಿ ವಾಹನ ಚಲಾಯಿಸಲು ಹಿಂಜರಿಯುತ್ತಾರೆ.

ಆದರೆ ಇನ್ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಈ ಸಮಸ್ಯೆಯಾದಾಗ ಸುರಕ್ಷಿತ ಚಾಲನೆಗಾಗಿ ನಾವಿಂದು ತಿಳಿಸುವ ಕೆಲವು ಸಿಂಪಲ್ ಟಿಪ್ಸ್​ ಫಾಲೋ ಮಾಡಿದರೆ ಇದರಿಂದ ನೀವು ಶಾಶ್ವತವಾಗಿ ಪರಿಹಾರ ಪಡೆಯಬಹುದು. ಮೊದಲಿಗೆ ಮಳೆಗಾಲದಲ್ಲಿ ವಾಹನ ಚಲಾಯಿಸುವಾಗ ವಿಂಡ್‌ಶೀಲ್ಡ್‌ನಲ್ಲಿ ಮಂಜು ಏಕೆ ರೂಪುಗೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಕಾರಿನೊಳಗಿನ ಗಾಳಿ ಬಿಸಿಯಾಗಿದ್ದಾಗ ಮತ್ತು ಹೊರಗಿನ ಹವಾಮಾನ ತಂಪಾಗಿದ್ದಾಗ, ತಾಪಮಾನ ವ್ಯತ್ಯಾಸದಿಂದಾಗಿ ಗಾಜಿನ ಮೇಲೆ ಮಂಜು ರೂಪುಗೊಳ್ಳುತ್ತದೆ.

ಮಳೆಗಾಲದಲ್ಲಿ ಸಮಸ್ಯೆಯಿಂದ ಪರಿಹಾರ ಪಡೆಯಲು ಏನು ಮಾಡಬೇಕು?

  • ವೈಪರ್ ಬ್ಲೇಡ್‌ಗಳನ್ನು ಪರಿಶೀಲಿಸಿ: ನಿಮ್ಮ ಕಾರಿನ ವೈಪರ್ ಬ್ಲೇಡ್‌ಗಳು ತೀಕ್ಷ್ಣ ಮತ್ತು ಪರಿಣಾಮಕಾರಿಯಾಗಿರಬೇಕು. ಮೊಂಡಾದ ವೈಪರ್‌ಗಳು ಮಳೆ ನೀರನ್ನು ಸರಿಯಾಗಿ ತೆರವುಗೊಳಿಸುವುದಿಲ್ಲ ಮತ್ತು ಗೋಚರತೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಪ್ರತಿ ಮಳೆಗಾಲಕ್ಕೂ ಮುನ್ನ ಬ್ಲೇಡ್‌ಗಳನ್ನು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಅವುಗಳನ್ನು ಬದಲಾಯಿಸಿ.
  • HVC ಅಥವಾ ಹವಾಮಾನ ನಿಯಂತ್ರಣವನ್ನು ಬಳಸಿ: ಕಾರಿನ ವಿಂಡ್‌ಶೀಲ್ಡ್ ಅಡಿಯಲ್ಲಿ ವೆಂಟ್‌ಗಳಿವೆ. ಕಾರನ್ನು ಸ್ಟಾರ್ಟ್ ಮಾಡುವಾಗ HVC (ತಾಪನ, ವೆಂಟಿಲೇಷನ್, ಕ್ಲೈಮೇಟ್ ಕಂಟ್ರೋಲ್) ಸಿಸ್ಟಮ್ ಅನ್ನು ಆನ್ ಮಾಡಿ ಮತ್ತು ವಿಂಡ್‌ಶೀಲ್ಡ್‌ಗೆ ಗಾಳಿಯನ್ನು ನಿರ್ದೇಶಿಸುವ ಆಯ್ಕೆಯನ್ನು ಆರಿಸಿ. ಇದು ಸೆಕೆಂಡುಗಳಲ್ಲೇ ಗ್ಲಾಸ್​ನಿಂದ ಮಂಜನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.
  • ಗ್ಲಾಸ್​​ಗಳಿಗೆ ಮಂಜು ನಿರೋಧಕ ದ್ರಾವಣವನ್ನು ಹಚ್ಚಿ: ಮಾರುಕಟ್ಟೆಯಲ್ಲಿ ಲಭ್ಯವಿರುವ ಮಂಜು ನಿರೋಧಕ ಸ್ಪ್ರೇಗಳು ಅಥವಾ ಜೆಲ್‌ಗಳನ್ನು ಬಳಸುವುದರಿಂದಲೂ ಈ ಮಂಜು ಸಂಗ್ರಹವಾಗುವುದನ್ನು ತಡೆಯುತ್ತದೆ ಮತ್ತು ಗಾಜನ್ನು ಸ್ವಚ್ಛವಾಗಿಡುತ್ತದೆ. ಮಳೆಯಲ್ಲಿ ವಾಹನ ಚಲಾಯಿಸುವಾಗ ಮಂಜು ಸಾಮಾನ್ಯ ಸಮಸ್ಯೆಯಾಗಿದೆ. ಹಾಗಂತ ಈ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಅದು ಅಪಾಯವುಂಟಾಗಬಹುದು. ಹಾಗಾಗಿ ಈ ಮೇಲೆ ತಿಳಿಸಲಾದ ಟಿಪ್ಸ್​ ಫಾಲೋ ಮಾಡುವ ಮೂಲಕ ನೀವು ಸುರಕ್ಷಿತ ಮತ್ತು ಸುಲಭವಾಗಿ ಕಾರು ಚಲಾಯಿಸಬಹುದು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)