Last Updated:
ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಕೆಎಲ್ ರಾಹುಲ್ ಕೇವಲ 2 ರನ್ ಗಳಿಸಿ ಔಟಾದರು. ನಂತರ ಯಶಸ್ವಿ ಜೈಸ್ವಾಲ್ ಮತ್ತು ಕರುಣ್ ನಾಯರ್ 80 ರನ್ ಗಳ ಜೊತೆಯಾಟವಾಡಿದರು.
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ (Edgbaston, Birmingham ) ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲ ದಿನದಂದು ಶುಭ್ಮನ್ ಗಿಲ್ (Shumban Gill) ಅದ್ಭುತ ಶತಕ ಸಿಡಿಸಿ ಭಾರತಕ್ಕೆ ಮೊದಲ ದಿನದ ಗೌರವ ತಂದುಕೊಟ್ಟಿದ್ದರು. ಇಂಗ್ಲೆಂಡ್ ಆರಂಭದಲ್ಲಿ ಯಶಸ್ಸು ಸಾಧಿಸಿದರೂ, ಕೊನೆಯ ಸೆಷನ್ನಲ್ಲಿ ಗಿಲ್ ಹಾಗೂ ಜಡೇಜಾ ಅಮೋಘ ಬ್ಯಾಟಿಂಗ್ ಮಾಡಿ ಇಂಗ್ಲಿಷ್ ಬೌಲರ್ಗಳನ್ನ ಕಾಡಿದರು. ಗಿಲ್ ವಿಕೆಟ್ ಪಡೆಯಲು ಸಾಧ್ಯವಾಗದ ಕಾರಣ ಬೌಲರ್ ಬ್ರೈಡನ್ ಕಾರ್ಸ್ ಶುಭ್ಮನ್ ಗಿಲ್ ಅವರನ್ನು ಔಟ್ ಮಾಡುವ ಆತುರದಲ್ಲಿ ಕೀಳುಮಟ್ಟಕ್ಕೆ ಇಳಿದರು. ಆದರೆ ಶುಭ್ಮನ್ ಗಿಲ್ ಆ ಮೋಸವನ್ನು ಅರಿತುಕೊಂಡು ಮೈದಾನದಲ್ಲೇ ಇಂಗ್ಲೆಂಡ್ ಬೌಲರ್ಗೆ ಛೀಮಾರಿ ಹಾಕಿದರು.
ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಕೆಎಲ್ ರಾಹುಲ್ ಕೇವಲ 2 ರನ್ ಗಳಿಸಿ ಔಟಾದರು. ನಂತರ ಯಶಸ್ವಿ ಜೈಸ್ವಾಲ್ ಮತ್ತು ಕರುಣ್ ನಾಯರ್ 80 ರನ್ ಗಳ ಜೊತೆಯಾಟವಾಡಿದರು. ಶುಭಮನ್ ಗಿಲ್ ಮೊದಲ ಸೆಷನ್ ನಲ್ಲಿಯೇ ಬ್ಯಾಟಿಂಗ್ ಮಾಡಲು ಬಂದರು. ಎರಡನೇ ಸೆಷನ್ ನಲ್ಲಿ, ಅವರು ಮತ್ತು ಜೈಸ್ವಾಲ್ ಇಂಗ್ಲೆಂಡ್ ತಂಡವನ್ನು ಬೆಂಡೆತ್ತುವ ಮೂಲಕ ಹತಾಶರನ್ನಾಗಿ ಮಾಡಿದರು. ಈ ಮಧ್ಯೆ, ಬ್ರೈಡನ್ ಕಾರ್ಸೆ ಈ ಮೋಸ ಮಾಡಿದರು.
34ನೇ ಓವರ್ನಲ್ಲಿ ಇಂಗ್ಲೆಂಡ್ ಬೌಲರ್ ಬ್ರೈಡನ್ ಕಾರ್ಸೆ ಬೌಲಿಂಗ್ ಮಾಡಲು ಬರುತ್ತಿದ್ದರು. ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಬ್ರೈಡನ್ ಕಾರ್ಸೆ ಬೌಲಿಂಗ್ ಮಾಡಲು ಓಡುತ್ತಿದ್ದಾಗ, ಎಡಗೈ ಬೆರಳಿನಿಂದ ಬೇರೆ ದಿಕ್ಕಿಗೆ ಸನ್ನೆ ಮಾಡಿದರು. ಇದು ಬ್ಯಾಟರ್ನ ಗಮನವನ್ನು ಬೇರೆಡೆ ಸೆಳೆಯಲು ಮಾಡಿದ ಪ್ರಯತ್ನವಾಗಿತ್ತು. 2014ರ ಐಪಿಎಲ್ನಲ್ಲಿ ಆಂಡ್ರೆ ರಸೆಲ್ ಶೇನ್ ವ್ಯಾಟ್ಸನ್ಗೂ ಇದೇ ರೀತಿ ಮಾಡಿದ್ದರು. ಆಗ ಈ ವಿಡಿಯೋ ಸಖತ್ ವೈರಲ್ ಆಗಿತ್ತು.
ಆದಾಗ್ಯೂ, ನಾಯಕ ಶುಭ್ಮನ್ ಗಿಲ್ ಬ್ರೈಡನ್ ಕಾರ್ಸ್ ಮಾಡಿದ ಈ ವಂಚನೆಯನ್ನು ಗ್ರಹಿಸಿದರು. ಶುಭ್ಮನ್ ಗಿಲ್ ತಕ್ಷಣ ಆ ಚೆಂಡನ್ನು ಎದುರಿಸದೇ, ಚೆಂಡು ಎಸೆಯುವ ಮೊದಕೇ ಅವರು ಹಿಂದೆ ಸರಿದರು. ಕೋಪಗೊಂಡ ಶುಭ್ಮನ್ ಗಿಲ್ ಬೌಲರ್ ಏನೋ ಹೇಳಿದರು. ಬ್ರೈಡನ್ ಕಾರ್ಸ್ ಬ್ಯಾಟರ್ ಅನ್ನು ಔಟ್ ಮಾಡಲು ಯಾವ ರೀತಿಯ ಕೊಳಕು ತಂತ್ರವನ್ನು ಬಳಸಲು ಬಯಸಿದ್ದರು ಎಂಬುದನ್ನು ನೀವು ವೀಡಿಯೊದಲ್ಲಿ ನೋಡಬಹುದು.
ಮೊದಲ ದಿನ ಶುಭಮನ್ ಗಿಲ್ ಶತಕ ಪೂರೈಸಿದರು. ಇದು ಶುಭಮನ್ ಗಿಲ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 16 ಮತ್ತು 7ನೇ ಟೆಸ್ಟ್ ಶತಕವಾಗಿದೆ. ಶುಭ್ಮನ್ ಗಿಲ್ ಮೊದಲ ದಿನ 114 ರನ್ ಗಳಿಸಿದ್ದರು. ಇದೀಗ ಭೋಜನ ವಿರಾಮದ ವೇಳೆಗೆ 288 ಎಸೆತಗಳಲ್ಲಿ 168 ರನ್ಗಳಿಸಿ ದ್ವಿಶತಕದತ್ತಾ ಮುನ್ನುಗ್ಗುತ್ತಿದ್ದಾರೆ. ಗಿಲ್ ಜೊತೆಗೆ ಮೊದಲ ದಿನ ಅಜೇಯರಾಗಿ ಉಳಿದಿದ್ದ ರವೀಂದ್ರ ಜಡೇಜಾ ಇಂದು 137 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 89 ರನ್ಗಳಿಸಿ ಔಟ್ ಆದರು. ಪ್ರಸ್ತುತ ಭಾರತ ತಂಡ 419 ರನ್ಗಳಿಸಿದೆ.
ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 2 ವಿಕೆಟ್, ಬೆನ್ ಸ್ಟೋಕ್ಸ್ , ಬ್ರೈಡೆನ್ ಕಾರ್ಸ್, ಶೋಯಬ್ ಬಶೀರ್ ಹಾಗೂ ಜೋಶ್ ಟಂಗ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
July 03, 2025 6:14 PM IST