ಶುಭ್‌ಮನ್ ಗಿಲ್ ಅವರು ಭಾರತ ತಂಡದ 37ನೇ ಟೆಸ್ಟ್ ನಾಯಕರಾಗಿ ಮೇ 24, 2025ರಂದು ನೇಮಕಗೊಂಡಿದ್ದರು. ಇಂಗ್ಲೆಂಡ್ ವಿರುದ್ಧದ ಈ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ (ಜೂನ್ 20, 2025, ಲೀಡ್ಸ್‌ನ ಹೆಡಿಂಗ್ಲೆ) ಗಿಲ್ 147 ರನ್ ಗಳಿಸಿ ತಮ್ಮ ಮೊದಲ ಟೆಸ್ಟ್ ನಾಯಕತ್ವದ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಆದರೆ, ಆ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಎರಡನೇ ಟೆಸ್ಟ್‌ನಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ 200 ರನ್ ಗಳಿಸುವ ಮೂಲಕ ಗಿಲ್ ಇತಿಹಾಸ ಸೃಷ್ಟಿಸಿದ್ದಾರೆ.
Shubman Gill: ಬರ್ಮಿಂಗ್ಹ್ಯಾಮ್ನಲ್ಲಿ ಗಿಲ್ ದ್ವಿಶತಕ ಸಿಡಿಸಿ ಅಬ್ಬರ! ಇಂಗ್ಲೆಂಡ್ ನೆಲದಲ್ಲಿ ಚರಿತ್ರೆ ಸೃಷ್ಟಿಸಿದ ಇಂಡಿಯನ್ ಕ್ಯಾಪ್ಟನ್
