ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಬರ್ಮಿಂಗ್ಹ್ಯಾಮ್ ನ ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಗುರುವಾರ ಪಂದ್ಯದ ಎರಡನೇ ದಿನವಾಗಿದ್ದು, ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 587 ರನ್ ಗಳಿಗೆ ಆಲೌಟ್ ಆಗಿದೆ. ನಾಯಕ ಶುಭ್ಮನ್ ಗಿಲ್ ಭಾರತ ಪರ ಅದ್ಭುತ ಪ್ರದರ್ಶನ ನೀಡಿ 269 ರನ್ಗಳ ದಾಖಲೆ ಇನ್ನಿಂಗ್ಸ್ ಆಡಿ ಬೃಹತ್ ಮೊತ್ತಕ್ಕೆ ಕಾರಣರಾದರು.
IND vs ENG: ಕ್ಯಾಪ್ಟನ್ ಗಿಲ್ ವಿಶ್ವದಾಖಲೆಯ ದ್ವಿಶತಕ ! ಬೃಹತ್ ಮೊತ್ತ ದಾಖಲಿಸಿದ ಟೀಮ್ ಇಂಡಿಯಾ
