ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್ 387 ಎಸೆತಗಳಲ್ಲಿ 30 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ 269 ರನ್ಗಳಿಸಿದರು. ಈ ಇನ್ನಿಂಗ್ಸ್ ಗಿಲ್‌ರ ಮೊದಲ ಟೆಸ್ಟ್ ಡಬಲ್ ಸೆಂಚುರಿಯಾಗಿದ್ದು, ಇಂಗ್ಲೆಂಡ್‌ನಲ್ಲಿ ಭಾರತೀಯ ನಾಯಕನಿಂದ ಗಳಿಸಲಾದ ಗರಿಷ್ಠ ಸ್ಕೋರ್ ಆಗಿದೆ. ಈ ಸರಣಿಯ ಮೊದಲ ಟೆಸ್ಟ್‌ನಲ್ಲಿ (ಲೀಡ್ಸ್‌ನ ಹೆಡಿಂಗ್ಲೆಯಲ್ಲಿ) ಗಿಲ್ 147 ರನ್ ಗಳಿಸಿದ್ದರು, ಆದರೆ ಆ ಪಂದ್ಯದಲ್ಲಿ ಭಾರತ 5 ವಿಕೆಟ್ಗಳಿಂದ ಸೋಲು ಕಂಡಿತ್ತು.
ಸುನಿಲ್ ಗವಾಸ್ಕರ್, 221, ದಿ ಓವಲ್, 1979
1979ರಲ್ಲಿ ದಿ ಓವಲ್‌ನಲ್ಲಿ ಗವಾಸ್ಕರ್ 438 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ 221 ರನ್ ಗಳಿಸಿದರು. ಇಯಾನ್ ಬೋಥಮ್ ಮತ್ತು ಬಾಬ್ ವಿಲ್ಲೀಸ್‌ರಂತಹ ಬೌಲರ್‌ಗಳ ವಿರುದ್ಧ 8 ಗಂಟೆಗಳಿಗಿಂತ ಹೆಚ್ಚು ಕಾಲ ಬ್ಯಾಟಿಂಗ್ ಮಾಡಿದ ಅವರು, ಭಾರತವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಆದರೆ, ಕೊನೆಯಲ್ಲಿ ಭಾರತ 10 ರನ್‌ಗಳ ಕೊರತೆಯಿಂದ ಡ್ರಾ ಸಾಧಿಸಿತು.
2002ರ ಭಾರತದ ಇಂಗ್ಲೆಂಡ್ ಪ್ರವಾಸದ ನಾಲ್ಕನೇ ಟೆಸ್ಟ್‌ನಲ್ಲಿ ದ್ರಾವಿಡ್ 217 ರನ್ ಗಳಿಸಿದ್ದರು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 515 ರನ್ ಗಳಿಸಿತ್ತು, ಆದರೆ ದ್ರಾವಿಡ್‌ರ ಶಾಂತ ಮತ್ತು ತಾಳ್ಮೆಯ ಡಬಲ್ ಸೆಂಚುರಿಯಿಂದ ಭಾರತ ಗಟ್ಟಿ ಉತ್ತರ ನೀಡಿತು. ಈ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು, ಸರಣಿಯೂ 1-1ರಿಂದ ಸಮಬಲವಾಯಿತು.
2002ರ ಹೆಡಿಂಗ್ಲೆ ಟೆಸ್ಟ್‌ನಲ್ಲಿ ತೆಂಡೂಲ್ಕರ್ 193 ರನ್ ಗಳಿಸಿದ್ದರು. ಎರಡನೇ ದಿನದ ಸಂಜೆ, ತಂಡ ಸಂಕಷ್ಟದಲ್ಲಿ ಸಂದರ್ಭದಲ್ಲಿ ದ್ರಾವಿಡ್ (148) ಹಾಗೂ ಸೌರವ್ ಗಂಗೂಲಿ (128) ಶತಕಗಳ ನೆರವಿನಿಂದ ಭಾರತ 628 ರನ್ ಗಳಿಸಿತ್ತು. ಈ ಪಂದ್ಯವನ್ನ ಭಾರತ ಇನ್ನಿಂಗ್ಸ್ ಹಾಗೂ 46 ರನ್ಗಳಿಂದ ಗೆದ್ದಿತ್ತು.
1990ರ ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ರವಿ ಶಾಸ್ತ್ರಿ ಓಪನರ್ ಆಗಿ 187 ರನ್ ಗಳಿಸಿದ್ದರು. 436 ಎಸೆತಗಳನ್ನು ಎದುರಿಸಿದ ಅವರು, ಭಾರತವನ್ನು 606 ರನ್‌ಗಳಿಗೆ ಕೊಂಡೊಯ್ದರು. ಇಂಗ್ಲೆಂಡ್ ಫಾಲೋ-ಆನ್ಗೆ ಒಳಗಾದರೂ ಪಂದ್ಯವನ್ನ ಡ್ರಾ ಮಾಡಿಕೊಂಡಿತು, ಆದರೆ ಸರಣಿಯನ್ನು 1-0ರಿಂದ ಗೆದ್ದಿತು.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
July 03, 2025 10:01 PM IST
Shubman Gill: ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ರನ್! ಗವಾಸ್ಕರ್, ದ್ರಾವಿಡ್, ಸಚಿನ್ ಸೇರಿ ಎಲ್ಲಾ ಲೆಜೆಂಡ್ಸ್ ದಾಖಲೆ ಬ್ರೇಕ್ ಮಾಡಿದ ಗಿಲ್