Last Updated:
587 ರನ್ಗಳನ್ನ ಹಿಂಬಾಲಿಸುತ್ತಿರುವ ಅತಿಥೇಯ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಅನುಭವಿಸಿದೆ. ತಂಡದ ಮೊತ್ತ 25 ರನ್ ಆಗುವಷ್ಟರಲ್ಲಿ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಬೆನ್ ಡಕೆಟ್ ಹಾಗೂ ಓಲಿ ಪೋಪ್ ಇಂದು ಖಾತೆಯನ್ನೇ ತೆರೆಯದೇ ಆಕಾಶ್ ದೀಪ್ ಬೌಲಿಂಗ್ನಲ್ಲಿ 2 ಬ್ಯಾಕ್ ಟು ಬ್ಯಾಕ್ ಎಸೆತಗಳಲ್ಲಿ ಔಟ್ ಆದರು
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಬರ್ಮಿಂಗ್ಹ್ಯಾಮ್ ನ ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಗುರುವಾರ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದೆ. 2ನೇ ದಿನ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಟೀಮ್ ಇಂಡಿಯಾ, ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 587 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ನಾಯಕ ಶುಭ್ಮನ್ ಗಿಲ್ ಭಾರತ ಪರ ಅದ್ಭುತ ಪ್ರದರ್ಶನ ನೀಡಿ 269 ರನ್ಗಳ ದಾಖಲೆ ಇನ್ನಿಂಗ್ಸ್ ಆಡಿದರು. ಇದು ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಬ್ಯಾಟರ್ ಒಬ್ಬನಿಂದ ಬಂದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ.
ಗುರುವಾರ ಭಾರತ ತಂಡ 310/5 ಸ್ಕೋರ್ನೊಂದಿಗೆ 2ನೇ ದಿನದ ಆಟ ಆರಂಭಿಸಿತು. ಗಿಲ್ 114 ಮತ್ತು ಜಡೇಜಾ 41 ರನ್ಗಳೊಂದಿಗೆ ತಮ್ಮ ಇನ್ನಿಂಗ್ಸ್ ಮುಂದುವರಿಸಿದರು. ಜಡೇಜಾ ಇಂದು 137 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 89 ರನ್ಗಳಿಸಿ ಔಟ್ ಆಗುವ ಮೂಲಕ ಕೇವಲ 13 ರನ್ಗಳಿಂದ ಶತಕ ಮಿಸ್ ಮಾಡಿಕೊಂಡರು. ಆದರೆ ಅವರು ನಾಯಕ ಗಿಲ್ ಜೊತೆಗೂಡಿ 203 ರನ್ಗಳ ಜೊತೆಯಾಟ ನಡೆಸಿದರು. ಇದು ಭಾರತ ಬೃಹತ್ ಇನ್ನಿಂಗ್ಸ್ಗೆ ಕಾರಣರಾದರು.
ಜಡೇಜಾ ಔಟ್ ಆದ ಬಳಿಕವೂ ಗಿಲ್ ತಮ್ಮ ಸಿಡಿಸಲಬ್ಬರದ ಆಟವನ್ನು ಮುಂದುವರಿಸಿದರು. 7ನೇ ವಿಕೆಟ್ ಜೊತೆಯಾಟದಲ್ಲಿ ವಾಸಿಂಗ್ಟನ್ ಸುಂದರ್ ಜೊತೆಗೆ 144 ರನ್ಗಳನ್ನ ಭರ್ಜರಿ ಜೊತೆಯಾಟ ನೀಡಿದರು. ವಾಸಿಂಗ್ಟನ್ ಸುಂದರ್ 103 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 42 ರನ್ಗಳಿಸಿ ಜೋ ರೂಟ್ಗೆ ವಿಕೆಟ್ ಒಪ್ಪಿಸಿದರು. 200 ರನ್ಗಳ ಗಡಿ ದಾಟಿದ ತ್ರಿಶತಕ ಸಿಡಿಸುವ ಮನೋಬಲದಲ್ಲಿ ಬ್ಯಾಟಿಂಗ್ ಮಾಡಿದರಿ. 311 ಎಸೆತಗಳಿಗೆ ದ್ವಿಶತಕ ಸಿಡಿಸಿದ ಗಿಲ್, ನಂತರ 86 ಎಸೆತಗಳಲ್ಲಿ 69 ರನ್ಗಳಿಸಿದರು. ಆದರೆ 269 ರನ್ಗಳಿಸಿದ್ದ ವೇಳೆ ಜೋಶ್ ಟಂಗ್ ಬೌಲಿಂಗ್ನಲ್ಲಿ ಕ್ರಾಲೆಗೆ ಕ್ಯಾಚ್ ನೀಡಿ ಔಟ್ ಆದರು.
ನಂತರ ಆಕಾಶ್ ದೀಪ್ 6, ಮೊಹಮ್ಮದ್ ಸಿರಾಜ್ 8 ರನ್ಗಳಿಸಿ ಔಟ್ ಆಗುವ ಮೂಲಕ ಭಾರತದ ಇನ್ನಿಂಗ್ಸ್ಗೆ ತೆರೆಬಿದ್ದಿತು. ಮೊದಲ ದಿನ ಯಶಸ್ವಿ ಜೈಸ್ವಾಲ್ 107 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ 87 ರನ್, ಕೆಎಲ್ ರಾಹುಲ್ 2, ಕರುಣ್ ನಾಯರ್ 31, ರಿಷಭ್ ಪಂತ್ 25, ನಿತೀಶ್ ಕುಮಾರ್ 1 ರನ್ಗಳಿಸಿದರು.
ಇಂಗ್ಲೆಂಡ್ ಪರ ಶೋಯಬ್ ಬಶೀರ್ 167ಕ್ಕೆ3, ಜೋಶ್ ಟಂಗ್ 119ಕ್ಕೆ2, ಕ್ರಿಸ್ ವೋಕ್ಸ್ 81ಕ್ಕೆ2 ಬೆನ್ ಸ್ಟೋಕ್ಸ್,ಬ್ರೈಡನ್ ಕಾರ್ಸ್ ಹಾಗೂ ಜೋ ರೂಟ್ ತಲಾ 1 ವಿಕೆಟ್ ಪಡೆದು ಮಿಂಚಿದರು.
587 ರನ್ಗಳನ್ನ ಹಿಂಬಾಲಿಸುತ್ತಿರುವ ಅತಿಥೇಯ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಅನುಭವಿಸಿದೆ. ತಂಡದ ಮೊತ್ತ 25 ರನ್ ಆಗುವಷ್ಟರಲ್ಲಿ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಬೆನ್ ಡಕೆಟ್ ಹಾಗೂ ಓಲಿ ಪೋಪ್ ಇಂದು ಖಾತೆಯನ್ನೇ ತೆರೆಯದೇ ಆಕಾಶ್ ದೀಪ್ ಬೌಲಿಂಗ್ನಲ್ಲಿ 2 ಬ್ಯಾಕ್ ಟು ಬ್ಯಾಕ್ ಎಸೆತಗಳಲ್ಲಿ ಔಟ್ ಆದರು. 30 ಎಸೆತಗಳಲ್ಲಿ 3 ಬೌಂಡರಿ ಸಹಿತ 19 ರನ್ಗಳಿಸಿದ್ದ ಜಾಕ್ ಕ್ರಾಲೆ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಕರುಣ್ ನಾಯರ್ಗೆ ಕ್ಯಾಚ್ ನೀಡಿ ಔಟ್ ಆದರು. ಪ್ರಸ್ತುತ ಅನುಭವಿ ಜೋ ರೂಟ್ ಅಜೇಯ 18, ಹ್ಯಾರಿ ಬ್ರೂಕ್ ಅಜೇಯ 30 ರನ್ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
July 03, 2025 11:19 PM IST