ಹಸನ್ ನವಾಜ್ರ ಐತಿಹಾಸಿಕ ಶತಕ
ಮೂರನೇ T20 ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 205 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಹಸನ್ ನವಾಜ್ ಆಧಾರಸ್ತಂಭವಾದರು. ಈ ಯುವ ಆಟಗಾರ ಕೇವಲ 44 ಎಸೆತಗಳಲ್ಲಿ ಶತಕ ಪೂರೈಸಿ, ನ್ಯೂಜಿಲೆಂಡ್ನಲ್ಲಿ T20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಗಳಿಸಿದ ಮೊದಲ ಪಾಕಿಸ್ತಾನಿ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದರು. ಹಸನ್ 45 ಎಸೆತಗಳಲ್ಲಿ 7 ಸಿಕ್ಸರ್ಗಳು ಮತ್ತು 10 ಬೌಂಡರಿಗಳೊಂದಿಗೆ ಅಜೇಯ 105 ರನ್ ಗಳಿಸಿದರು. ಈ ಇನ್ನಿಂಗ್ಸ್ ಅವರ T20 ಅಂತರರಾಷ್ಟ್ರೀಯ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಯಿತು. ಈ ಪಂದ್ಯಕ್ಕೂ ಮುನ್ನ ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ಹಸನ್, ಈ ಬಾರಿ ಕಿವೀಸ್ ಬೌಲರ್ಗಳನ್ನು ಧೂಳಿಪಟ ಮಾಡಿದರು. 26 ಎಸೆತಗಳಲ್ಲಿ ಅರ್ಧಶತಕ ಗಳಿಸಿd ಹಸನ್ ಮುಂದಿನ 18 ಎಸೆತಗಳಲ್ಲಿ ಶತಕದ ಗಡಿ ದಾಟುವ ಮೂಲಕ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಎಲ್ಲರನ್ನೂ ಬೆರಗುಗೊಳಿಸಿದರು.
ಹ್ಯಾರಿಸ್, ಸಲ್ಮಾನ್ ಸಾಥ್
ಹಸನ್ ನವಾಜ್ಗೆ ಉತ್ತಮ ಸಾಥ್ ನೀಡಿದ ವಿಕೆಟ್ಕೀಪರ್ ಮೊಹಮ್ಮದ್ ಹ್ಯಾರಿಸ್ 20 ಎಸೆತಗಳಲ್ಲಿ 41 ರನ್ ಗಳಿಸಿ ಮೊದಲ ವಿಕೆಟ್ಗೆ 74 ರನ್ಗಳ ಜೊತೆಯಾಟ ನೀಡಿದರು. ನಾಯಕ ಸಲ್ಮಾನ್ ಅಗಾ ಕೂಡ 34 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ ಅಜೇಯ 51 ರನ್ ಗಳಿಸಿ ತಂಡವನ್ನು ಗೆಲುವಿನ ಗೆರೆಗೆ ತಂದರು. ಹಸನ್ ಮತ್ತು ಸಲ್ಮಾನ್ ಎರಡನೇ ವಿಕೆಟ್ಗೆ 133 ರನ್ಗಳ ಅಜೇಯ ಜೊತೆಯಾಟವಾಡಿ ಪಂದ್ಯವನ್ನು ಪಾಕಿಸ್ತಾನದ ಪಾಲಿಗೆ ಒಲಿಸಿದರು. ನ್ಯೂಜಿಲೆಂಡ್ ಪರ ಮಾರ್ಕ್ ಚಾಪ್ಮನ್ 94 ರನ್ ಗಳಿಸಿದರೂ, ಪಾಕಿಸ್ತಾನದ ಬ್ಯಾಟಿಂಗ್ ಶಕ್ತಿಯ ಮುಂದೆ ಕಿವೀಸ್ ಸೋಲು ಕಂಡಿತು.
ಇದನ್ನೂ ಓದಿ: IPL ಮೊದಲ ಪಂದ್ಯದಲ್ಲಿ RCB vs KKR ಮುಖಾಮುಖಿ! ಹೆಡ್ ಟು ಹೆಡ್, ಪ್ಲೇಯಿಂಗ್ 11 ಹೀಗಿರಲಿದೆ
ದಾಖಲೆಯ ರನ್ ಚೇಸ್ ಮಾಡಿದ ಪಾಕ್
ಈ ಪಂದ್ಯದಲ್ಲಿ ಪಾಕಿಸ್ತಾನ 12.93 ರನ್ ರೇಟ್ನಲ್ಲಿ 204 ರನ್ಗಳ ಗುರಿಯನ್ನು ಬೆನ್ನಟ್ಟಿ, ನ್ಯೂಜಿಲೆಂಡ್ ನೆಲದಲ್ಲಿ ಅಧಿಕ ರನ್ ಚೇಸ್ ಮಾಡಿದ ಮೊದಲ ಏಷ್ಯಾ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದಕ್ಕೂ ಮುನ್ನ ಭಾರತ 204 ರನ್ಗಳ ಗುರಿ ಬೆನ್ನಟ್ಟಿ ಗೆದ್ದಿದ್ದು ದಾಖಲೆಯಾಗುತ್ತು. ಒಟ್ಟಾರೆ T20 ಇತಿಹಾಸದಲ್ಲಿ ಈ ರೀತಿಯ ಚೇಸ್ ಮಾಡಿದ ಕೆಲವೇ ತಂಡಗಳ ಪೈಕಿ ಪಾಕಿಸ್ತಾನ ಸೇರಿಕೊಂಡಿದೆ. ದಕ್ಷಿಣ ಆಫ್ರಿಕಾ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 259 ರನ್ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನಟ್ಟಿ ವಿಶ್ವದಾಖಲೆ ಬರೆದಿದೆ.
ಸರಣಿಯಲ್ಲಿ ಪುನರಾಗಮನ
ಮೊದಲ ಎರಡು ಪಂದ್ಯಗಳಲ್ಲಿ ಸೋತು 0-2ರಲ್ಲಿ ಹಿಂದುಳಿದಿದ್ದ ಪಾಕಿಸ್ತಾನಕ್ಕೆ ಈ ಗೆಲುವು ಸರಣಿಯಲ್ಲಿ ಉಳಿಯುವ ಆಸೆಯನ್ನು ಜೀವಂತವಾಗಿಟ್ಟಿದೆ. ಆದರೂ, ಸರಣಿಯಲ್ಲಿ 1-2ರಿಂದ ಹಿಂದಿರುವ ಪಾಕಿಸ್ತಾನಕ್ಕೆ ಉಳಿದ ಎರಡು ಪಂದ್ಯಗಳಲ್ಲಿ ಗೆಲುವು ಪಡೆದು ಸರಣಿ ಗೆಲ್ಲುವ ಅವಕಾಶ ಹೊಂದಿದೆ. ಹೊಸ ನಾಯಕತ್ವದಲ್ಲಿ ಯುವ ಆಟಗಾರರ ಮೇಲೆ ಇಟ್ಟ ಭರವಸೆ ಈ ಪಂದ್ಯದಲ್ಲಿ ಫಲ ನೀಡಿದೆ ಎಂದು ತಂಡದ ಆಯ್ಕೆ ಸಮಿತಿ ತೃಪ್ತಿ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಗೇಲ್ ಟು ಮುರಳಿ ವಿಜಯ್! IPL ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಟಾಪ್ 8 ಬ್ಯಾಟರ್ಸ್
ಹಸನ್ ನವಾಜ್ ವೇಗದ ಶತಕದ ದಾಖಲೆ
ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ಹಸನ್ ನವಾಜ್, ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಪಾಕಿಸ್ತಾನದ ಯುವ ಆಟಗಾರರಿಗೆ ಮಾದರಿಯಾದರು. ಒತ್ತಡದ ಸಂದರ್ಭದಲ್ಲಿ ಶತಕ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಶತಕದ ಮೂಲಕ ಅವರು ಪಾಕಿಸ್ತಾನದ ಪರ ವೇಗದ ಶತಕ ಸಿಡಿಸಿದ ಬ್ಯಾಟರ್ ಹಾಗೂ ಕಿವೀಸ್ ನೆಲದಲ್ಲಿ ಶತಕ ಸಿಡಿಸಿದ ಮೊದಲ ಪಾಕಿಸ್ತಾನಿ ಎನಿಸಿಕೊಂಡರು. ಬಾಬರ್ ಅಜಮ್ 49 ಎಸೆತಗಳಲ್ಲಿ ಶತಕ ಸಿಡಿಸಿರುವುದು ಇಲ್ಲಿಯವರೆಗೂ ದಾಖಲೆಯಾಗಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ 19.5 ಓವರ್ಗಳಲ್ಲಿ 204 ರನ್ಗಳಿಗೆ ಆಲೌಟ್ ಆಗಿತ್ತು. ಮಾರ್ಕ್ ಚಾಪ್ಮನ್ 44 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಸಹಿತ 94 ರನ್ಗಳಿಸಿದರೆ, ನಾಯಕ ಮೈಕಲ್ ಬ್ರೆಸ್ವೆಲ್ 18 ಎಸೆತಗಳಲ್ಲಿ 32 ರನ್ಗಳಿಸಿದರು. ಸಣ್ಣ ಗ್ರೌಂಡ್, ಬ್ಯಾಟಿಂಗ್ ಪಿಚ್ ಲಾಭ ಪಡೆಯಲು ಉಳಿದ ಬ್ಯಾಟರ್ಗಳು ವಿಫಲರಾದರು.
March 21, 2025 4:54 PM IST