Last Updated:
ಜೇಮಿ ಸ್ಮಿತ್ ಅಜೇಯ 184, ಹ್ಯಾರಿ ಬ್ರೂಕ್ 158 ರನ್‌ಗಳ ನೆರವಿನಿಂದ ಇಂಗ್ಲೆಂಡ್ 84ಕ್ಕೆ5 ವಿಕೆಟ್ ಕಳೆದುಕೊಂಡರು, 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ 400ರ ಗಡಿ ದಾಟುವಲ್ಲಿ ಯಶಸ್ವಿಯಾಗಿದೆ.
ರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡವನ್ನ 407 ರನ್ ಗಳಿಗೆ ಆಲೌಟ್ ಮಾಡುವ ಮೂಲಕ 180ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಒಂದು ಹಂತದಲ್ಲಿ ಭಾರತ ತಂಡದ ಬೌಲರ್ಗಳು ಇಂಗ್ಲೆಂಡ್ ತಂಡ 4 ರನ್ಗಳಾಗುವಷ್ಟರಲ್ಲಿ 5 ವಿಕೆಟ್ ಪಡೆದು 200ರೊಳಗೆ ನಿಯಂತ್ರಿಸುವ ಅವಕಾಶ ಪಡೆದಿತ್ತು. ಆದರೆ ಜೇಮೀ ಸ್ಮಿತ್ ಮತ್ತು ಹ್ಯಾರಿ ಬ್ರೂಕ್ ಭಾರತೀಯ ಬೌಲರ್ಗಳನ್ನ ಕಾಡಿ 303 ರನ್‌ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನ 400ರ ಗಡಿ ದಾಟಿಸಿದರು. ಜೇಮೀ ಸ್ಮಿತ್ 184 ರನ್ಗಳಿಸಿ ಅಜೇಯರಾಗಿ ಉಳಿದುಕೊಂಡರು. ಭಾರತದ ಪರ ಮೊಹಮ್ಮದ್ ಸಿರಾಜ್ 6 ವಿಕೆಟ್ ಪಡೆಯುವ ಮೂಲಕ ಮಿಂಚಿದರು.
ಶುಕ್ರವಾರ ಬೆಳಿಗ್ಗೆ ಇಂಗ್ಲೆಂಡ್ 77/3 ಸ್ಕೋರ್‌ನೊಂದಿಗೆ ಆಟ ಆರಂಭಿಸಿತು. ಆದರೆ ನಿನ್ನೆಯ ಮೊತ್ತಕ್ಕೆ 7 ರನ್ಗಳಿಸುವಷ್ಟರಲ್ಲಿ ಇಂಗ್ಲೆಂಡ್ ಜೋ ರೂಟ್ (22) ಹಾಗೂ ನಾಯಕ ಬೆನ್ ಸ್ಟೋಕ್ಸ್ (0) ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಸತತ 2 ಎಸೆತಗಳಲ್ಲಿ ಇವರಿಬ್ಬರನ್ನ ಪೆವಿಲಿಯನ್ಗಟ್ಟಿದರು. 77ಕ್ಕೆ 3 ಇದ್ದ ಅತಿಥೇಯ ತಂಡ 84ಕ್ಕೆ 5 ವಿಕೆಟ್ ಕಳೆದುಕೊಂಡಿತು.
ಆದರೆ ಈ ಖುಷಿಯನ್ನ ಹ್ಯಾರಿ ಬ್ರೂಕ್ ಹಾಗೂ ವಿಕೆಟ್ ಕೀಪರ್ ದೂರ ಮಾಡಿಬಿಟ್ಟರು. ಇವರಿಬ್ಬರು 6ನೇ ವಿಕೆಟ್ ಜೊತೆಯಾಟದಲ್ಲಿ ಬರೋಬ್ಬರಿ 300 ರನ್‌ಗಳ ಜೊತೆಯಾಟ ನಡೆಸಿ ಭಾರತೀಯ ಬೌಲರ್ಗಳನ್ನ ಕಾಡಿದರು. ಹ್ಯಾರಿ ಬ್ರೂಕ್ 234 ಎಸೆತಗಳಲ್ಲಿ 17 ಬೌಂಡರಿ, 1 ಸಿಕ್ಸರ್ ಸಹಿತ 158 ರನ್ಗಳಿಸಿದರೆ, ಜೇಮೀ ಸ್ಮಿತ್ 207 ಎಸೆತಗಳಲ್ಲಿ 21 ಬೌಂಡರಿ, 4 ಸಿಕ್ಸರ್ಗಳ ಸಹಿತ ಅಜೇಯ 184 ರನ್ಗಳಿಸಿದರು. ಇವರಿಬ್ಬರು 60.2 ಓವರ್ ಅಂದರೆ 368 ಎಸೆತಗಳಲ್ಲಿ 303 ರನ್ ಸೇರಿಸಿದರು.
ಈ ಪಂದ್ಯ ಭಾರತದ ಪರ ಸಂಪೂರ್ಣ ವಾಲುತ್ತಿದೆ ಎನ್ನುವ ಸಂದರ್ಭದಲ್ಲಿ ಈ ಜೋಡಿ ಸಿಡಿಲಬ್ಬರದ ಆಟವಾಡಿ ಫಾಲೋ ಆನ್ ಅಪಮಾನಕ್ಕೆ ಒಳಗಾಗೋದನ್ನ ತಪ್ಪಿಸಿತು. ಒಂದು ಹಂತದಲ್ಲಿ 500 ಗಡಿ ದಾಟಬಹುದು ಎನ್ನುವಂತೆ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಆಕಾಶ್ ದೀಪ್ 158 ರನ್ಗಳಿಸಿದ್ದ ಹ್ಯಾರಿ ಬ್ರೂಕ್ರನ್ನ ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಬ್ರೇಕ್ ಕೊಟ್ಟರು. ಈ ವಿಕೆಟ್ ನಂತರ ಇಂಗ್ಲೆಂಡ್ ಉಳಿದ 4 ವಿಕೆಟ್ಗಳನ್ನ ಕೇವಲ 20 ರನ್ಗಳಾಗುಷ್ಟರಲ್ಲಿ ಕಳೆದುಕೊಂಡಿತು.
ಸಿರಾಜ್ ಮಾರಕ ಬೌಲಿಂಗ್ ದಾಳಿಯ ಮುಂದೆ ಇಂಗ್ಲೆಂಡ್ ಬಾಲಂಗೋಚಿಗಳು ನಿಲ್ಲಲು ವಿಫಲರಾದರು. ಕ್ರಿಸ್ ವೋಕ್ಸ್ 5ರನ್ಗಳಿಸಿದರೆ ಆಕಾಶ್ ದೀಪ್ಗೆ 4ನೇ ಬಲಿಯಾದರೆ, ಕೊನೆಯ ಮೂವರು ಬ್ಯಾಟರ್ಗಳಾದ ಬ್ರೈಡನ್ ಕಾರ್ಸ್, ಜೋಶ್ ಟಂಗ್ ಹಾಗೂ ಶೋಯಬ್ ಬಶೀರ್ ಖಾತೆ ತೆರೆಯದೇ ಸಿರಾಜ್ ಬೌಲಿಂಗ್ನಲ್ಲಿ ಡಕ್ ಔಟ್ ಆದರು.
ಮೊಹಮ್ಮದ್ ಸಿರಾಜ್ 70ಕ್ಕೆ 6 ವಿಕೆಟ್ ಪಡೆದರೆ, ಆಕಾಶ್ ದೀಪ್ 88ಕ್ಕೆ 4 ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನ 407ಕ್ಕೆ ನಿಯಂತ್ರಿಸಿದರು. ಆದರೆ ಪ್ರಸಿಧ್ ಕೃಷ್ಣ, ರವೀಂದ್ರ ಜಡೇಜಾ ಈ ಪಂದ್ಯದಲ್ಲೂ ವಿಕೆಟ್ ಪಡೆಯಲು ವಿಫಲರಾದರು. ಆಲ್ರೌಂಡರ್ ಕೋಟಾದಲ್ಲಿ ಚಾನ್ಸ್ ಪಡೆದಿರುವ ನಿತೀಶ್ ಹಾಗೂ ವಾಷಿಂಗ್ಟನ್ ಸುಂದರ್ ಕೂಡ ಪರಿಣಾಮಕಾರಿ ಬೌಲಿಂಗ್ ಮಾಡಲು ವಿಫಲರಾದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್‌ಗಳ ಬೃಹತ್ ಸ್ಕೋರ್ ಗಳಿಸಿದೆ. ಭಾರತದ ನಾಯಕ ಶುಭ್ ಮನ್ ಗಿಲ್ ಬೃಹತ್ ದ್ವಿಶತಕ (387 ಎಸೆತಗಳಲ್ಲಿ 269; 30 ಬೌಂಡರಿ ಮತ್ತು 3 ಸಿಕ್ಸರ್) ಗಳಿಸಿದರು. ಜೈಸ್ವಾಲ್ 87, ರವೀಂದ್ರ ಜಡೇಜಾ 89 ರನ್ಗಳಿಸಿ ಬೃಹತ್ ಮೊತ್ತಕ್ಕೆ ನೆರವಾದರು.
July 04, 2025 10:03 PM IST