India vs England: ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು! ಘಟಾನುಘಟಿಗಳಿಂದಲೂ ಆಗದ ದಾಖಲೆ ನಿರ್ಮಿಸಿದ ಯಂಗ್ ಇಂಡಿಯಾ | For the first Team India 1000 Runs Record in 93 Years of Test History

India vs England: ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು! ಘಟಾನುಘಟಿಗಳಿಂದಲೂ ಆಗದ ದಾಖಲೆ ನಿರ್ಮಿಸಿದ ಯಂಗ್ ಇಂಡಿಯಾ | For the first Team India 1000 Runs Record in 93 Years of Test History

Last Updated:

ಮೊದಲ ಪಂದ್ಯವನ್ನು ಸೋತಿರುವ ಯಂಗ್ ಇಂಡಿಯಾ ಇಂದಿನ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಮಾತ್ರವಲ್ಲ, ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿರಿಸಿಕೊಂಡಿದೆ.

ಟೀಂ ಇಂಡಿಯಾಟೀಂ ಇಂಡಿಯಾ
ಟೀಂ ಇಂಡಿಯಾ

ಗುರುವಾರ (ಜುಲೈ 5) ಶುಭಮನ್ ಗಿಲ್ (Shubhman Gill) 162 ಎಸೆತಗಳಲ್ಲಿ 161 ರನ್ ಗಳಿಸುವ ಮೂಲಕ ಭಾರತ 83 ಓವರ್‌ಗಳಲ್ಲಿ 427/6 ಕ್ಕೆ ಗಳಿಸಿದ್ದಾಗ ಟೀಂ ಇಂಡಿಯಾ (Team India) ಎರಡನೇ ಇನ್ನಿಂಗ್ಸ್‌‌ನಲ್ಲಿ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಪಂದ್ಯವನ್ನು ಸೋತಿರುವ ಯಂಗ್ ಇಂಡಿಯಾ (Young India) ಇಂದಿನ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಮಾತ್ರವಲ್ಲ, ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತದಲ್ಲಿರಿಸಿಕೊಂಡಿದೆ.

93 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಹೊಸ ದಾಖಲೆ

ಸದ್ಯ ಟೀಂ ಇಂಡಿಯಾ 93 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಮಾಡಲಾಗದ ಹೊಸ ದಾಖಲೆಯೊಂದನ್ನು ಮಾಡಿದೆ. ಅದು ಕೂಡ ಘಟಾನುಘಟಿ ಆಟಗಾರರು. ಲೆಜೆಂಡರಿ ಆಟಗಾರರು ತಂಡದಲ್ಲಿ ಇದ್ದಾಗಲು ಕೂಡ ಈ ಸಾಧನೆ ಮಾಡಲಾಗಿರಲಿಲ್ಲ. ಆ ದಾಖಲೆ ಬೇರೆ ಯಾವುದು ಅಲ್ಲ, ಟೀಂ ಇಂಡಿಯಾ ಒಂದೇ ಪಂದ್ಯದಲ್ಲಿ ಬರೋಬ್ಬರಿ 1000 ರನ್ ಗಳಿಸಿರುವುದು. ಹೌದು, ಮೊದಲ ಇನ್ನಿಂಗ್ಸ್‌ನ್ಲಲಿ 587 ರನ್‌ ಎರಡನೇ ಇನ್ನಿಂಗ್ಸ್‌ನಲ್ಲಿ 427 ರನ್‌ಗಳು ಸಿಡಿಸುವ ಮೂಲಕ 1000ರನ್ ಪೂರ್ಣಗೊಳಿಸಿತು.

ಇದೇ ಮೊದಲ ಬಾರಿ 1000ಕ್ಕಿಂತ ಅಧಿಕ ರನ್ಸ್

ಭಾರತ ಟೆಸ್ಟ್ ಪಂದ್ಯದಲ್ಲಿ 1000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವುದಕ್ಕೆ ಮೊದಲು ಇದುವರೆಗೂ ವಿಶ್ವದ 5 ತಂಡಗಳು ಮಾತ್ರ ಈ ದಾಖಲೆ ಮಾಡವೆ. ಟೆಸ್ಟ್ ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಒಟ್ಟಾರೆ ದಾಖಲೆ ಇಂಗ್ಲೆಂಡ್ ಹೆಸರಲ್ಲಿದೆ. 1930 ರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಕಿಂಗ್‌ಸ್ಟನ್ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಒಟ್ಟು 1121 ರನ್ ಗಳಿಸಿತ್ತು.

ಆ ದಿನದ ರೆಡ್-ಬಾಲ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 849 ರನ್‌ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 272 ರನ್‌ಗಳನ್ನು ಗಳಿಸಿ ನಂತರ ಡಿಕ್ಲೇರ್ ಮಾಡಿಕೊಂಡಿತ್ತು.

ತಂಡ ರನ್‌ಗಳು (ಮೊದಲ ಇನ್ನಿಂಗ್ಸ್) ರನ್‌ಗಳು (2ನೇ ಇನ್ನಿಂಗ್ಸ್) ಒಟ್ಟು ರನ್‌ಗಳು ವಿರೋಧ ಸ್ಥಳ ವರ್ಷ
ಇಂಗ್ಲೆಂಡ್ 849 272/9   1121 ವೆಸ್ಟ್ ಇಂಡೀಸ್ ಕಿಂಗ್ಸ್ಟನ್ 1930
ಪಾಕಿಸ್ತಾನ 588  490/8  1078   ಭಾರತ ಫೈಸಲಾಬಾದ್ 2006
ಆಸ್ಟ್ರೇಲಿಯಾ 701 327   1028   ಇಂಗ್ಲೆಂಡ್ ದಿ ಓವಲ್ 1934
ಭಾರತ 587   427/6  1014   ಇಂಗ್ಲೆಂಡ್ ಎಡ್ಜ್‌ಬಾಸ್ಟನ್ 2025
ಆಸ್ಟ್ರೇಲಿಯಾ 619  394/8   1013 ವೆಸ್ಟ್ ಇಂಡೀಸ್ ಸಿಡ್ನಿ 1969
ದಕ್ಷಿಣ ಆಫ್ರಿಕಾ 530   481 1011  ಇಂಗ್ಲೆಂಡ್ ಡರ್ಬನ್ 1939

ಇದಕ್ಕೂ ಮೊದಲು ಟೀಂ ಇಂಡಿಯಾ 2004 ರ ಜನವರಿಯಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ್ದ 916 ರನ್‌ಗಳು ಟೆಸ್ಟ್‌ನಲ್ಲಿ ಭಾರತದ ಹಿಂದಿನ ಅತ್ಯಧಿಕ ಸ್ಕೋರ್ ಆಗಿತ್ತು.

2ನೇ ಇನ್ನಿಂಗ್ಸ್​​ನಲ್ಲೂ ಮಿಂಚಿದ ಗಿಲ್​-ಜಡೇಜಾ

ನಂತರ ಒಂದಾದ ರವೀಂದ್ರ ಜಡೇಜಾ ಮತ್ತು ಶುಭ್ಮನ್ ಗಿಲ್ 5ನೇ ವಿಕೆಟ್ ಜೊತೆಯಾಟದಲ್ಲಿ 175 ರನ್​ಗಳ ಜೊತೆಯಾಟ ನಡೆಸಿದರು. ಶುಭ್​​ಮನ್ ಗಿಲ್ 2ನೇ ಇನ್ನಿಂಗ್ಸ್​​ನಲ್ಲೂ ಶತಕ ಸಿಡಿಸಿದರು. 162 ಎಸೆತಗಳನ್ನ ಎದುರಿಸಿದ ಶುಭ್​ಮನ್ ಗಿಲ್ 13 ಬೌಂಡರಿ, 8 ಸಿಕ್ಸರ್​ಗಳ ಸಹಿತ 161 ರನ್​ಗಳಿಸಿದರು.   ರವೀಂದ್ರ ಜಡೇಜಾ 118 ಎಸೆತಗಳಲ್ಲಿ ಬೌಂಡರಿ, 1 ಸಿಕ್ಸರ್​ ಸಹಿತ ಅಜೇಯ 69 ರನ್​ಗಳಿಸಿದರು.  ವಾಷಿಂಗ್ಟನ್ ಸುಂದರ್ ಅಜೇಯ 12 ರನ್​ಗಳಿಸಿದರು.