ಐಪಿಲ್​​ನಲ್ಲಿ ಅನ್​ಸೋಲ್ಡ್, ರಣಜಿ ತಂಡದಿಂದ ಡ್ರಾಪ್​ ಬೆನ್ನಲ್ಲೇ ಪೃಥ್ವಿ ಶಾ ಸಂಚಲನಕಾರಿ ನಿರ್ಧಾರ!

ಐಪಿಲ್​​ನಲ್ಲಿ ಅನ್​ಸೋಲ್ಡ್, ರಣಜಿ ತಂಡದಿಂದ ಡ್ರಾಪ್​ ಬೆನ್ನಲ್ಲೇ ಪೃಥ್ವಿ ಶಾ ಸಂಚಲನಕಾರಿ ನಿರ್ಧಾರ!

ಟೀಮ್ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ ಒಂದು ಸಂಚಲನಕಾರಿ ನಿರ್ಧಾರ ತೆಗೆದುಕೊಂಡಿದ್ದಾರೆ. ಕ್ರಿಕೆಟಿಗನಾಗಿ ಅವರಿಗೆ ಮನ್ನಣೆ ನೀಡಿದ್ದ ಮುಂಬೈ ಜೊತೆಗಿನ ಸಂಬಂಧವನ್ನು ಅವರು ಕಡಿದುಕೊಂಡರು. ಅವರು ಮುಂದಿನ (2025-26) ದೇಶೀಯ ಋತುವಿಗಾಗಿ ಮಹಾರಾಷ್ಟ್ರದೊಂದಿಗೆ ಆಡುವುದಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಶಾ ಇತ್ತೀಚೆಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ಎನ್‌ಒಸಿ (ನಿರಪೇಕ್ಷಣ ಪ್ರಮಾಣಪತ್ರ) ಗಾಗಿ ಅರ್ಜಿ ಸಲ್ಲಿಸಿದರು. ಇದೀಗ ಎಂಸಿಎ ಅಧಿಕೃತವಾಗಿ ನೀಡಿದೆ.