ಎರಡು ತಂಡಗಳ ಹೆಡ್-ಟು-ಹೆಡ್ ದಾಖಲೆ
RCB ಮತ್ತು KKR ತಂಡಗಳು ಐಪಿಎಲ್ನಲ್ಲಿ ಈವರೆಗೆ 34 ಬಾರಿ ಐಪಿಎಲ್ನಲ್ಲಿ ಎದುರಾಗಿವೆ. ಕೆಕೆಆರ್ 21 ಗೆಲುವುಗಳೊಂದಿಗೆ ಮೇಲುಗೈ ಹೊಂದಿದ್ದರೆ, ಆರ್ಸಿಬಿ 14 ಪಂದ್ಯಗಳಲ್ಲಿ ಜಯ ಗಳಿಸಿದೆ. ಕಳೆದ ಐದು ಮುಖಾಮುಖಿಯಲ್ಲಿ ಕೆಕೆಆರ್ 4-1 ರಿಂದ ಗೆದ್ದು ಪ್ರಾಬಲ್ಯ ಸಾಧಿಸಿದೆ. 2024ರಲ್ಲಿ ಎರಡೂ ಪಂದ್ಯಗಳನ್ನು ಕೆಕೆಆರ್ ಗೆದ್ದಿತ್ತು. ಬೆಂಗಳೂರಿನಲ್ಲಿ 7 ವಿಕೆಟ್ಗಗಳಿಂದ ಮತ್ತು ಈಡನ್ನಲ್ಲಿ 1 ರನ್ನಿಂದ ರೋಚಕ ಜಯ ಸಾಧಿಸಿತ್ತು. RCBಗೆ ಈಡನ್ನಲ್ಲಿ KKR ವಿರುದ್ಧ ಕಠಿಣ ಇತಿಹಾಸವಿದೆ. 2017ರಲ್ಲಿ 49 ರನ್ಗೆ ಆಲೌಟ್ ಆಗಿದ್ದು ಅದರ ಕನಿಷ್ಠ ಸ್ಕೋರ್. ಇದೇ ಮೈದಾನದಲ್ಲಿ ಕೆಕೆಆರ್ 2019ರಲ್ಲಿ 232/2 ದಾಖಲಿಸಿ ತಮ್ಮ ಗರಿಷ್ಠ ಸ್ಕೋರ್ ಮಾಡಿತ್ತು. ಈ ದಾಖಲೆಗಳು KKRಗೆ ಸೈಕಾಲಾಜಿಕಲ್ ಬೆನಿಫಿಟ್ ನೀಡಬಹುದು.
ಇದನ್ನೂ ಓದಿ:
ಈಡನ್ ಗಾರ್ಡನ್ಸ್ ದಾಖಲೆ ಮತ್ತು ಪಿಚ್ ವಿಶ್ಲೇಷಣೆ
ಈಡನ್ ಗಾರ್ಡನ್ಸ್ನಲ್ಲಿ ಕೆಕೆಆರ್ ಮತ್ತು ಆರ್ಸಿವಿ 11 ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಕೋಲ್ಕತ್ತಾ 7-4 ರಿಂದ ಮುಂದಿದೆ. ಒಟ್ಟಾರೆಯಾಗಿ, ಈ ಮೈದಾನದಲ್ಲಿ 93 ಐಪಿಎಲ್ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 38 ಗೆಲುವು ಗಳಿಸಿದರೆ, ಚೇಸಿಂಗ್ ತಂಡಗಳು 55 ಬಾರಿ ಜಯಿಸಿವೆ. ಈ ಮೈದಾನದಲ್ಲಿ ಎರಡನೇ ಇನಿಂಗ್ಸ್ಗೆ ಸ್ವಲ್ಪ ಅನುಕೂಲವಿದೆ. ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಸರಾಸರಿ ಮೊದಲ ಇನಿಂಗ್ಸ್ ಸ್ಕೋರ್ 165-175 ರನ್ಗಳ ಆಸು-ಪಾಸಿನಲ್ಲಿರುತ್ತದೆ. ಆದರೆ, ಎರಡನೇ ಇನಿಂಗ್ಸ್ನಲ್ಲಿ ಪಿಚ್ ನಿಧಾನವಾಗಿ ಸ್ಪಿನ್ ಬೌಲರ್ಗಳಿಗೆ ಸಹಾಯ ಮಾಡುತ್ತದೆ. ಕೆಕೆಆರ್ನ ಸ್ಪಿನ್ಧ್ವಯರಾದ ಸುನಿಲ್ ನರೈನ್, ವರುಣ್ ಚಕ್ರವರ್ತಿ ಇಲ್ಲಿ ಪ್ರಭಾವ ಬೀರಬಹುದು. ಟಾಸ್ ಗೆದ್ದ ತಂಡ ಚೇಸ್ ಮಾಡಲು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
ಈಡನ್ನಲ್ಲಿ ಚೇಸಿಂಗ್ ತಂಡಗಳಿಗೆ 59% ಗೆಲುವಿನ ಸಾಧ್ಯತೆ ಇದೆ. ಟಾಸ್ ಗೆದ್ದ ತಂಡ ಎರಡನೇ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬಹುದು. ಈ ಮೈದಾನದಲ್ಲಿ ಮೊದಲ ಇನಿಂಗ್ಸ್ಗೆ 180-200 ರನ್ಗಳು ಸ್ಪರ್ಧಾತ್ಮಕ ಸ್ಕೋರ್ ಆಗಬಹುದು. ಎರಡನೇ ಇನಿಂಗ್ಸ್ನಲ್ಲಿ ಸ್ಪಿನ್ ಪ್ರಭಾವ ಹೆಚ್ಚಾಗುತ್ತದೆ.
ಎರಡೂ ತಂಡಕ್ಕೂ ಹೊಸ ನಾಯಕರು
ಕಳೆದ ಬಾರಿಯ ಚಾಂಪಿಯನ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 18ನೇ ಆವೃತ್ತಿಗೆ ಹೊಸ ನಾಯಕನನ್ನ ಘೋಷಿಸಿದೆ. ಅನುಭವಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ ರಹಾನೆಯನ್ನ ಕೆಕೆಆರ್ 1.5 ಕೋಟಿ ನೀಡಿ ಖರೀದಿಸಿದೆ. ಇತ್ತ ಆರ್ಸಿಬಿ ಮಧ್ಯ ಪ್ರದೇಶದ ಡೊಮೆಸ್ಟಿಕ್ ತಂಡದ ನಾಯಕ ರಜತ್ ಪಾಟಿದಾರ್ಗೆ ನಾಯಕತ್ವವನ್ನು ನೀಡಿದೆ. ರಜತ್ 2022ರಿಂದ ಆರ್ಸಿಬಿಯಲ್ಲಿದ್ದಾರೆ. ಫಾಫ್ ಡು ಪ್ಲೆಸಿಸ್ರನ್ನ ರಿಟೇನ್ ಮಾಡಿಕೊಳ್ಳದ ಕಾರಣ ಪಾಟಿದಾರ್ಗೆ ನಾಯಕತ್ವವನ್ನು ನೀಡಲಾಗಿದೆ.
ಇದನ್ನೂ ಓದಿ: ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದ ಕೇನ್ ವಿಲಿಯಮ್ಸನ್ ಹೊಸ ರೂಪದಲ್ಲಿ ಐಪಿಎಲ್ಗೆ ರೀ ಎಂಟ್ರಿ!
ತಂಡದ ಬಲ ಮತ್ತು ಪ್ರಮುಖ ಆಟಗಾರರು
ಕೋಲ್ಕತ್ತಾ ನೈಟ್ ರೈಡರ್ಸ್ (KKR): ಹೊಸ ನಾಯಕ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಡಿಕಾಕ್, ಅಜಿಂಕ್ಯಾ ರಹಾನೆ, ರಿಂಕು ಸಿಂಗ್ ತಂಡದ ಬ್ಯಾಟಿಂಗ್ ಬೆನ್ನೆಲುಬು. ರಸೆಲ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್ ತಂಡದ ಬಲವಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವೈಭವ್ ಅರೋರ, ಎನ್ರಿಚ್ ನೋಕಿಯಾ ಸೇವೆ ಸಿಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ರಜತ್ ಪಾಟಿದಾರ್ ನಾಯಕತ್ವದಲ್ಲಿ RCB ತಂಡ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ರಂತಹ ಆಕ್ರಮಣಕಾರಿ ಬ್ಯಾಟರ್ಗಳನ್ನು ಹೊಂದಿದೆ. ಬೌಲಿಂಗ್ನಲ್ಲಿ ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್ ಪ್ರಮುಖರು. ಆದರೆ ಸ್ಪಿನ್ ಆಯ್ಕೆಯಲ್ಲಿ ಕೃನಾಲ್ ಪಾಂಡ್ಯ ಒಬ್ಬರೇ ಗಮನಾರ್ಹರಾಗಿದ್ದು, ಈಡನ್ನ ಸ್ಪಿನ್-ಫ್ರೆಂಡ್ಲಿ ಪಿಚ್ನಲ್ಲಿ ಇದು ತೊಡಕಾಗಬಹುದು. RCBಗೆ ಕೊಹ್ಲಿಯ ಫಾರ್ಮ್ ಮತ್ತು ಆರಂಭಿಕ ಜೊತೆಯಾಟ ನಿರ್ಣಾಯಕವಾಗಲಿದೆ.
ಎರಡು ತಂಡಗಳ ಪ್ಲೇಯಿಂಗ್ 11
ಕೆಕೆಆರ್ (ಸಂಭವನೀಯ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ಅಂಗ್ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್, ಅನ್ರಿಚ್ ನಾರ್ಟ್ಜೆ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವೈಭವ್ ಅರೋರಾ.
ಆರ್ಸಿಬಿ (ಸಂಭವನೀಯ XI): ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್ವುಡ್, ಯಶ್ ದಯಾಳ್.
March 22, 2025 6:33 AM IST