Radhika Yadav: ಸ್ಟಾರ್ ಟೆನ್ನಿಸ್ ಆಟಗಾರ್ತಿ ಭೀಕರ ಹ*! ರೀಲ್ಸ್ ವಿಚಾರಕ್ಕೆ ಗುಂಡಿಕ್ಕಿ ಕೊ*ಗೈದ ಪಾಪಿ ತಂದೆ! | social media controversy tennis player shot dead by her father

Radhika Yadav: ಸ್ಟಾರ್ ಟೆನ್ನಿಸ್ ಆಟಗಾರ್ತಿ ಭೀಕರ ಹ*! ರೀಲ್ಸ್ ವಿಚಾರಕ್ಕೆ ಗುಂಡಿಕ್ಕಿ ಕೊ*ಗೈದ ಪಾಪಿ ತಂದೆ! | social media controversy tennis player shot dead by her father

Last Updated:

ಸ್ಟಾರ್ ಟೆನಿಸ್ ಆಟಗಾರ್ತಿಯೊಬ್ಬರನ್ನು ಕ್ಷುಲ್ಲಕ ಕಾರಣಕ್ಕೆ ಅವರ ತಂದೆಯೇ ಗುಂಡು ಹಾರಿಸಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಮೂರು ಬಾರಿ ಗುಂಡು ಹಾರಿಸಿದ್ದರಿಂದ ಆಟಗಾರ್ತಿ ನಿಧನರಾಗಿದ್ದಾರೆ.

ರಾಧಿಕ ಯಾದವ್ರಾಧಿಕ ಯಾದವ್
ರಾಧಿಕ ಯಾದವ್

ಸೋಷಿಯಲ್ ಮೀಡಿಯಾದಲ್ಲಿನ (Social Media) ವೀಡಿಯೊವೊಂದರ ವಿವಾದದ ಬಳಿಕ 25 ವರ್ಷದ ರಾಜ್ಯಮಟ್ಟದ ಟೆನಿಸ್ ಆಟಗಾರ್ತಿಯನ್ನು (Tennis Player) ಆಕೆಯ ತಂದೆಯೇ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬದ ಇತರೆ ಸದಸ್ಯರ ಹೇಳಿಕೆ ಪಡೆದು ಮಗಳನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಆರೋಪದಲ್ಲಿ ಆಕೆಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ತಂದೆಯ ಗುಂಡೇಟಿಗೆ ಬಲಿಯಾದ ಟೆನಿಸ್ ಆಟಗಾರ್ತಿ ಬೇರೆ ಯಾರೂ ಅಲ್ಲ, ಹರಿಯಾಣ ರಾಜ್ಯ ತಂಡದ ಸ್ಟಾರ್ ಆಟಗಾರ್ತಿ ರಾಧಿಕಾ ಯಾದವ್ (Radhika Yadav). ಇವರು ಅನೇಕ ರಾಜ್ಯ ಮಟ್ಟದ ಟೆನಿಸ್ ಪಂದ್ಯಾವಳಿಗಳಲ್ಲಿ ಹರಿಯಾಣವನ್ನು ಪ್ರತಿನಿಧಿಸಿದ್ದಾರೆ ಮತ್ತು ಸ್ಥಳೀಯ ಕ್ರೀಡಾ ವಲಯದಲ್ಲಿ ಉದಯೋನ್ಮುಖ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ, ಆಕೆಯನ್ನು ಕ್ಷುಲ್ಲಕ ಕಾರಣಕ್ಕೆ ಆಕೆಯ ತಂದೆಯೇ ಜುಲೈ 10ರ ಬೆಳಿಗ್ಗೆ 11:30 ಕ್ಕೆ ಅವರ ಮನೆಯ ಮೊದಲ ಮಹಡಿಯಲ್ಲಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಧಿಕ ಯಾದವ್

ರೀಲ್ಸ್ ಮಾಡಿದ್ದಕ್ಕೆ ಮಗಳ ಹತ್ಯೆ!

ತನಿಖಾಧಿಕಾರಿಗಳ ಪ್ರಕಾರ, ರಾಧಿಕಾ ಯಾದವ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಅಪ್ಲೋಡ್ ಮಾಡಲೆಂದು ವಿಡಿಯೋ ಶೂಟ್ ಮಾಡಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ತಂದೆ ಮತ್ತು ಮಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಆಕೆಯ ತಂದೆಯೊಂದಿಗೆ ವಾಗ್ವಾದ ಉಂಟಾಗಿತ್ತು. ಆದ್ರೂ ಕೇಳದೆ ಆ ಪೋಸ್ಟ್ ಅಪ್ಲೋಡ್ ಮಾಡಿದ್ದಕ್ಕಾಗಿ ಕೋಪಗೊಂಡ ತಂದೆ, ಲೈಸನ್ಸ್ ಗನ್‌ನಿಂದ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಗುರುಗ್ರಾಮ ಪೊಲೀಸರ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂದೀಪ್ ಕುಮಾರ್ ಮಾತನಾಡಿ, ಸಾಮಾಜಿಕ ಮಾಧ್ಯಮದ ಪೋಸ್ಟ್‌ನಿಂದ ಮನೆಯಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ಪ್ರಾಥಮಿಕ ಸಂಶೋಧನೆಗಳು ಸೂಚಿಸುತ್ತವೆ. “ತಂದೆ ಉದ್ರೇಕಗೊಂಡು ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ. ಈ ಕೃತ್ಯಕ್ಕೆ ಬಳಸಿದ ಗನ್ ಪರವಾನಗಿ ಪಡೆದ ರಿವಾಲ್ವರ್ ಆಗಿದ್ದು, ಅದನ್ನು ಅವರ ಮನೆಯಿಂದಲೇ ವಶಪಡಿಸಿಕೊಳ್ಳಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು

ಘಟನೆ ಬಳಿಕ ಕುಟುಂಬ ಸದಸ್ಯರು ರಾಧಿಕಾ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ಬಂದಿದೆ ಎಂದು ಸೆಕ್ಟರ್ 56 ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ರಾಜೇಂದರ್ ಕುಮಾರ್ ತಿಳಿಸಿದ್ದಾರೆ.

ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಸಂಬಂಧಿಕರು ಮತ್ತು ನೆರೆಹೊರೆಯವರನ್ನು ವಿಚಾರಣೆ ನಡೆಸುತ್ತಿದ್ದಾರೆ. ವಿವರವಾದ ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದೇವೆ ಮತ್ತು ಅಪರಾಧದ ಸಮಯದಲ್ಲಿ ಆರೋಪಿಯ ಮಾನಸಿಕ ಸ್ಥಿತಿಯನ್ನು ನಿರ್ಣಯಿಸಲು ಅವನ ಮಾನಸಿಕ ಮೌಲ್ಯಮಾಪನವನ್ನು ಯೋಜಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.