India vs England: ಇಂಗ್ಲೆಂಡ್​​ ವಿರುದ್ಧ ಭರ್ಜರಿ ಶತಕ! ಲಾರ್ಡ್ಸ್​ನಲ್ಲಿ ಇತಿಹಾಸ ಸೃಷ್ಟಿಸಿದ ಕನ್ನಡಿಗ ಕೆಎಲ್ ರಾಹುಲ್ | KL rahul first asian opener to score 2 centuries in lords stadium

India vs England: ಇಂಗ್ಲೆಂಡ್​​ ವಿರುದ್ಧ ಭರ್ಜರಿ ಶತಕ! ಲಾರ್ಡ್ಸ್​ನಲ್ಲಿ ಇತಿಹಾಸ ಸೃಷ್ಟಿಸಿದ ಕನ್ನಡಿಗ ಕೆಎಲ್ ರಾಹುಲ್ | KL rahul first asian opener to score 2 centuries in lords stadium

Last Updated:

ಕೆಎಲ್ ರಾಹುಲ್ ಲಾರ್ಡ್ಸ್​ನಲ್ಲಿ 2 ಶತಕ ಸಿಡಿಸಿದ ಏಷ್ಯಾದ ಮೊದಲ ಆರಂಭಿಕ ಬ್ಯಾಟರ್ ಎನಿಸಿಕೊಂಡರು. ಈ ಐತಿಹಾಸಿಕ ಮೈದಾನದಲ್ಲಿ ಏಷ್ಯಾದ ಯಾವೊಬ್ಬ ಆರಂಭಿಕ 2 ಶತಕ ಸಿಡಿಸಿಲ್ಲ. ಆದರೆ ಆಸ್ಟ್ರೇಲಿಯಾದ ಬಿಲ್ ಬ್ರೌನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಹಾಗೂ ವೆಸ್ಟ್ ಇಂಡೀಸ್​ನ ಗಾರ್ಡನ್ ಗ್ರೀನಿಡ್ಜ್​ 2 ಬಾರಿ ಈ ಸಾಧನೆ ಮಾಡಿದ್ದಾರೆ.

ಕೆಎಲ್ ರಾಹುಲ್ ಕೆಎಲ್ ರಾಹುಲ್
ಕೆಎಲ್ ರಾಹುಲ್

‘ಕ್ರಿಕೆಟ್‌ನ ಮೆಕ್ಕಾ’ ಎಂದು ಕರೆಯಲ್ಪಡುವ ಲಾರ್ಡ್ಸ್ ಮೈದಾನದಲ್ಲಿ (Lord’s Stadium) ಆಟಗಾರರು ಅದ್ಭುತ ಪ್ರದರ್ಶನ ನೀಡಲು ಮತ್ತು ಗೌರವ ಫಲಕಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಬಯಸುತ್ತಾರೆ. ಬೌಲರ್‌ಗಳು ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳು ಅಥವಾ ಇಡೀ ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಪಡೆಯುವುದು ಮಾನದಂಡವಾಗಿದೆ, ಆದರೆ ಬ್ಯಾಟ್ಸ್‌ಮನ್‌ಗಳು ಹಾಗೆ ಮಾಡಲು ಶತಕ ಗಳಿಸಬೇಕಾಗುತ್ತದೆ. ಲಾರ್ಡ್ಸ್ ಮೈದಾನದಲ್ಲಿ ಭಾರತದಿಂದ ಕೇವಲ 10 ಬ್ಯಾಟ್ಸ್‌ಮನ್‌ಗಳು ಮಾತ್ರ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ (KL Rahul)​ ಸತತ 2ನೇ ಬಾರಿಗೆ ಲಾರ್ಡ್ಸ್ ಆನರ್ಸ್ ಬೋರ್ಡ್‌ನಲ್ಲಿ ತಮ್ಮ ಹೆಸರನ್ನ ನೋಂದಾಯಿಸಿಕೊಂಡಿದ್ದಾರೆ.

ಅಚ್ಚರಿಯೆಂದರೆ, ‘ಕ್ರಿಕೆಟ್ ದೇವರು’ ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅಥವಾ ರನ್ ಮೆಷಿನ್ ಎಂದೇ ಪ್ರಸಿದ್ಧರಾದ ವಿರಾಟ್ ಕೊಹ್ಲಿ ಅವರ ಹೆಸರೂ ಈ ಪಟ್ಟಿಯಲ್ಲಿಲ್ಲ. ಇಂಗ್ಲೆಂಡ್ ಪ್ರವಾಸ ಕೈಗೊಂಡ ಪ್ರಸ್ತುತ ಭಾರತೀಯ ತಂಡದಲ್ಲಿ ಲಾರ್ಡ್ಸ್‌ನಲ್ಲಿ ಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್. ಅವರು 2021ರ ಪ್ರವಾಸದಲ್ಲೂ ಇಲ್ಲಿನ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಇದೀಗ ಸತತ 2ನೇ ಪಂದ್ಯದಲ್ಲೂ ಶತಕ ಸಿಡಿಸಿ ಇತಿಗಾಸ ಸೃಷ್ಟಿಸಿದ್ದಾರೆ.

ವಿಶೇಷ ಗೌರವಕ್ಕೆ ಪಾತ್ರರಾದ ರಾಹುಲ್

ಕೆಎಲ್ ರಾಹುಲ್ ಲಾರ್ಡ್ಸ್​​ ಟೆಸ್ಟ್ ಪಂದ್ಯದ ಮೂರನೇ ದಿನದಂದು ಶತಕಗಳಿಸುವ ಮೂಲಕ, ಲಾರ್ಡ್ಸ್‌ನಲ್ಲಿ ಒಂದಕ್ಕಿಂತ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೌದು, ಇಲ್ಲಿಯವರೆಗೆ ದಿಲೀಪ್ ವೆಂಗ್‌ಸರ್ಕರ್ ಲಾರ್ಡ್ಸ್‌ನಲ್ಲಿ ಒಂದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ಏಕೈಕ ಭಾರತೀಯ. ಈ ಐತಿಹಾಸಿಕ ಮೈದಾನದಲ್ಲಿ ಅವರು ಮೂರು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ರಾಹುಲ್ 177 ಎಸೆತಗಳಲ್ಲಿ 13 ಬೌಂಡರಿ ಸಹಿತ 100 ರನ್​ಗಳಿಸಿ ಔಟ್ ಆದರು.

ಲಾರ್ಡ್ಸ್ ಮೈದಾನದಲ್ಲಿ ಶತಕ ಗಳಿಸಿದ ಭಾರತೀಯರು

ದಿಲೀಪ್ ವೆಂಗ್‌ಸರ್ಕಾರ್- 3

ಕೆಎಲ್ ರಾಹುಲ್- 2

ಅಜಿತ್ ಅಗರ್ಕರ್- 1

ಮೊಹಮ್ಮದ್ ಅಜರುದ್ದೀನ್- 1

ರಾಹುಲ್ ದ್ರಾವಿಡ್- 1

ಸೌರವ್ ಗಂಗೂಲಿ- 1

ವಿನೂ ಮಂಕಡ್ – 1

ಅಜಿಂಕ್ಯ ರಹಾನೆ- 1

ರವಿಶಾಸ್ತ್ರಿ- 1

ಗುಂಡಪ್ಪ ವಿಶ್ವನಾಥ್ – 1

2 ಶತಕ ಸಿಡಿಸಿದ ಏಷ್ಯಾದ ಮೊದಲ ಕ್ರಿಕೆಟಿಗ

ಕೆಎಲ್ ರಾಹುಲ್ ಲಾರ್ಡ್ಸ್​ನಲ್ಲಿ 2 ಶತಕ ಸಿಡಿಸಿದ ಏಷ್ಯಾದ ಮೊದಲ ಆರಂಭಿಕ ಬ್ಯಾಟರ್ ಎನಿಸಿಕೊಂಡರು. ಈ ಐತಿಹಾಸಿಕ ಮೈದಾನದಲ್ಲಿ ಏಷ್ಯಾದ ಯಾವೊಬ್ಬ ಆರಂಭಿಕ 2 ಶತಕ ಸಿಡಿಸಿಲ್ಲ. ಆದರೆ ಆಸ್ಟ್ರೇಲಿಯಾದ ಬಿಲ್ ಬ್ರೌನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಹಾಗೂ ವೆಸ್ಟ್ ಇಂಡೀಸ್​ನ ಗಾರ್ಡನ್ ಗ್ರೀನಿಡ್ಜ್​ 2 ಬಾರಿ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: IND vs ENG: ಸತತ 5ನೇ ಇನ್ನಿಂಗ್ಸ್​​ನಲ್ಲೂ ಅರ್ಧಶತಕ ಸಿಡಿಸಲು ವಿಫಲ! ಮತ್ತೊಂದು ಚಾನ್ಸ್ ಮಿಸ್ ಮಾಡಿಕೊಂಡ ಕಮ್​ಬ್ಯಾಕ್ ಹೀರೋ

ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ಜೋ ರೂಟ್ ಅವರ ಶತಕದ ನೆರವಿನಿಂದ ಮೇಲೆ ಬೋರ್ಡ್‌ನಲ್ಲಿ 387 ರನ್ ಗಳಿಸಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಬಳಿಸಿದರು. ಎರಡನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದ್ದ ಟೀಮ್ ಇಂಡಿಯಾ ಈ ಸುದ್ದಿ ಬರೆಯುವ ವೇಳೆಗೆ 67.1 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್​ಗಳಿಸಿದೆ. ರಾಹುಲ್ 100 ರನ್​ಗಳಿಸಿ ಬಶೀರ್ ಬೌಲಿಂಗ್​​ನಲ್ಲಿ ಬ್ರೂಕ್​ಗೆ ವಿಕೆಟ್​ ಒಪ್ಪಿಸಿದರು. ರಿಷಭ್ ಪಂತ್ 112 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 74 ರನ್​ಗಳಿಸಿ ರನ್​ಔಟ್ ಆಗಿ ನಿರಾಶೆ ಅನುಭವಿಸಿದರು.