Dakshina Kannada: ತುಳುನಾಡಿನಲ್ಲಿ ರಾಜನ್ ದೈವಗಳಿಗೆ ನಡೆಯುತ್ತೆ ಹೊಸ ಅಕ್ಕಿ ಸೇವೆಯ ನೇಮೋತ್ಸವ | In Tulunadu a new raw rice service is held for the Rajan gods

Dakshina Kannada: ತುಳುನಾಡಿನಲ್ಲಿ ರಾಜನ್ ದೈವಗಳಿಗೆ ನಡೆಯುತ್ತೆ ಹೊಸ ಅಕ್ಕಿ ಸೇವೆಯ ನೇಮೋತ್ಸವ | In Tulunadu a new raw rice service is held for the Rajan gods

Last Updated:

ತುಳುನಾಡಿನಲ್ಲಿ ಪತ್ತನಾಜೆಯ ಬಳಿಕ ದೀಪಾವಳಿಯವರೆಗೆ ದೇವಗಳ ನೇಮ ಹಾಗೂ ಕೋಲಗಳ ಆಚರಣೆ ನಿಲ್ಲುತ್ತದೆ. ಆದರೆ ಕೆಲವು ಪ್ರಧಾನ ದೈವಗಳೆಂದು ಗುರುತಿಸಲ್ಪಡುವ ರಾಜನ್ ದೈವಗಳಿಗೆ ಪತ್ತನಾಜೆ ಮುಗಿಯುವ ಮೊದಲೇ ಹೊಸ ಅಕ್ಕಿ ಸೇವೆಯ ನೇಮೋತ್ಸವ ನಡೆಯುತ್ತದೆ.

X

ಇಲ್ಲಿ ವಿಡಿಯೋ ನೋಡಿ

ತುಳುನಾಡಿನಲ್ಲಿ ಪತ್ತನಾಜೆಯ ಬಳಿಕ ದೀಪಾವಳಿವರೆಗೆ (Deepavali) ದೇವಗಳ ನೇಮ ಹಾಗೂ ಕೋಲಗಳ ಆಚರಣೆ ನಿಲ್ಲುತ್ತದೆ. ಈ ವೇಳೆ ಯಾವುದೇ ದೈವಗಳಿಗೆ ಪೂರ್ಣ ಪ್ರವಾಣದ ನೇಮ-ಕೋಲಗಳು ನಡೆಯುವ ಸಂಪ್ರದಾಯವಿಲ್ಲ. ತುಳುನಾಡಿನ ಕೆಲವು ಪ್ರಧಾನ ದೈವಗಳೆಂದು ಗುರುತಿಸಲ್ಪಡುವ ರಾಜನ್ ದೈವಗಳಿಗೆ ಪತ್ತನಾಜೆ ಮುಗಿಯುವ ಮೊದಲೇ ಹೊಸ ಅಕ್ಕಿ ಸೇವೆಯ ನೇಮೋತ್ಸವ ನಡೆಯುತ್ತದೆ. ಅಂಥದ್ದೇ ಒಂದು ಸೇವೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪಡುಮಲೆಯ ಕಿನ್ನಿಮಾನಿ-ಪೂಮಾಣಿ ದೇವಸ್ಥಾನದಲ್ಲಿ ನಡೆದಿದೆ.

ತುಳುನಾಡಿನ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳೂ ಒಂದಕ್ಕಿಂತ ಒಂದು ವಿಭಿನ್ನ. ತುಳುನಾಡಿನಲ್ಲಿ ಪತ್ತನಾಜೆಯ ಬಳಿಕ ದೀಪಾವಳಿಯವರೆಗೆ ದೇವಗಳ ನೇಮ ಹಾಗೂ ಕೋಲಗಳ ಆಚರಣೆ ನಿಲ್ಲುತ್ತದೆ. ಈ ವೇಳೆ ಯಾವುದೇ ದೈವಗಳಿಗೆ ಪೂರ್ಣ ಪ್ರವಾಣದ ನೇಮ-ಕೋಲಗಳು ನಡೆಯುವ ಸಂಪ್ರದಾಯ ಇರುವುದಿಲ್ಲ. ಈ ಸಮಯದಲ್ಲಿ ತುಳುನಾಡಿನ ಜನರು ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ.

ರಾಜನ್ ದೈವಗಳಿಗೆ ಹೊಸ ಅಕ್ಕಿ ಸೇವೆ

ಇನ್ನು, ತುಳುನಾಡಿನ ಕೆಲವು ಪ್ರಧಾನ ದೈವಗಳೆಂದು ಗುರುತಿಸಲ್ಪಡುವ ರಾಜನ್ ದೈವಗಳಿಗೆ ಪತ್ತನಾಜೆ ಮುಗಿಯುವ ಮೊದಲೇ ಹೊಸ ಅಕ್ಕಿ ಸೇವೆಯ ನೇಮೋತ್ಸವ ನಡೆಯುತ್ತದೆ. ಗದ್ದೆಯಲ್ಲಿ ಬೆಳೆದ ಪೈರನ್ನು ಮನೆ ತುಂಬಿಸುವುದಕ್ಕೆ ಹೊಸಕ್ಕಿ ಊಟ ಎನ್ನಲಾಗುತ್ತದೆ. ಇದೇ ಆಚರಣೆಯು ಪ್ರಧಾನ ದೈವಗಳ ದೇವಸ್ಥಾನಗಳಲ್ಲೂ ನಡೆಯುತ್ತದೆ. ಇಂತಹುದೇ ಒಂದು ನೇಮೋತ್ಸವ ದಕ್ಷಿಣ ಕನ್ನಡ ಜಿಲ್ಲೆಯ ಪಡುಮಲೆಯ ಕಿನ್ನಿಮಾನಿ-ಪೂಮಾಣಿ ದೇವಸ್ಥಾನದಲ್ಲಿ ನಡೆದಿದೆ.

ಕಿನ್ನಿಮಾನಿ-ಪೂಮಾಣಿ ದೇವಸ್ಥಾನದ ಪ್ರಧಾನ ದೈವವಾದ ಪಿಲಿ ಚಾಮುಂಡಿಗೆ ಹೊಸಕ್ಕಿ ನೇಮೋತ್ಸವ ನಡೆಯಿತು. ತುಳುನಾಡಿನ ಅತ್ಯಂತ ಪ್ರಭಾವಿ ದೈವವಾದ ಪಿಲಿ ಚಾಮುಂಡಿ ದೇವಿಯ ಹೊಸಕ್ಕಿ ಸೇವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Ragigudda History: ಪ್ರಸನ್ನ ಆಂಜನೇಯ ದೇವಸ್ಥಾನ ರಾಗಿಗುಡ್ಡ ಆಂಜನೇಯ ದೇವಸ್ಥಾನ ಆಗಿದ್ದು ಹೇಗೆ? ಇಲ್ಲಿದೆ ಡಿಟೇಲ್ಸ್

ಗಗ್ಗರ ಇಟ್ಟು ನರ್ತನ ಸೇವೆ

ತುಳುನಾಡಿನ ನೇಮೋತ್ಸವದಲ್ಲಿ ಯಾವ ರೀತಿಯ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆಯೋ, ಅದೇ ರೀತಿಯ ಸಂಪ್ರದಾಯವನ್ನು ಈ ಹೊಸಕ್ಕಿ ನೇಮೋತ್ಸವದಲ್ಲೂ ಪಾಲಿಸಲಾಗುತ್ತದೆ. ಪಡುಮಲೆಯ ಕಿನ್ನಿಮಾನಿ-ಪೂಮಾಣಿ ದೇವಸ್ಥಾನದಲ್ಲಿರುವ ದೈವಗಳಿಗೆ ಸೇರಿದ ಮುಖವಾಡ, ಕತ್ತಿಗಳನ್ನು ನೇಮೋತ್ಸವದ ದಿನ ಹೊರಗೆ ತೆಗೆಯಲಾಗಿತ್ತು. ಬಳಿಕ ದೈವ ನರ್ತಕರು ದೈವಗಳಿಗೆ ಬಣ್ಣ ಹಚ್ಚಿ, ಗಗ್ಗರ ಇಟ್ಟು ನರ್ತನ ಸೇವೆಯನ್ನು ನೆರವೇರಿಸಿದ್ರು.

ಒಟ್ಟಿನಲ್ಲಿ ಪಡುಮಲೆಯ ಕಿನ್ನಿಮಾನಿ-ಪೂಮಾಣಿ ದೇವಸ್ಥಾನದಲ್ಲಿ ನಡೆದ ಹೊಸ ಅಕ್ಕಿ ನೇಮೋತ್ಸವ ಅಲ್ಲಿ ಸೇರಿದ್ದ ಜನರು ಭಕ್ತಿಯಲ್ಲಿ ಮಿಂದೇಳುವಂತೆ ಮಾಡಿತು.