Sad News: ವಿಶ್ವದ ಅತ್ಯಂತ ಹಿರಿಯ ಕ್ರೀಡಾಪಟು ರಸ್ತೆ ಅಪಘಾತಕ್ಕೆ ಬಲಿ / Sad News: World’s Oldest Athlete Fauja Singh Dies in Road Accident

Sad News: ವಿಶ್ವದ ಅತ್ಯಂತ ಹಿರಿಯ ಕ್ರೀಡಾಪಟು ರಸ್ತೆ ಅಪಘಾತಕ್ಕೆ ಬಲಿ / Sad News: World’s Oldest Athlete Fauja Singh Dies in Road Accident

ವಿಶ್ವದ ಅತ್ಯಂತ ಹಿರಿಯ ಕ್ರೀಡಾಪಟು (Senior Athlete) ಎನಿಸಿಕೊಂಡಿದ್ದ ಫೌಜಾ ಸಿಂಗ್ (Fauja Singh) ನಿಧನರಾಗಿದ್ದಾರೆ. ಪಂಜಾಬ್‌ನ ಜಲಂಧರ್ ಜಿಲ್ಲೆಯ ಬಿಯಾಸ್ ಗ್ರಾಮದಲ್ಲಿ ಸೋಮವಾರ ನಡೆದ ರಸ್ತೆ ಅಪಘಾತವೊಂದರಲ್ಲಿ (Road Accident) ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ (114) ದುರಂತ ಸಾವನ್ನಪ್ಪಿದ್ದಾರೆ. ಅಪರಿಚಿತ ವಾಹನವೊಂದು ಫೌಜಾ ಸಿಂಗ್ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿ, ಜಲಂಧರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರೆ.

ಫೌಜ್ಸಿಂಗ್ಅಗಲಿಕೆಯ ದುಃಖದ ಸುದ್ದಿಯನ್ನು ಜಲಂಧರ್‌ನ ಆದಂಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹರ್ದೇವ್‌ಪ್ರೀತ್ ಸಿಂಗ್ ಹಾಗೂ ಫೌಜಾ ಸಿಂಗ್ ಅವರ ಜೀವನ ಚರಿತ್ರೆದಿ ಟರ್ಬನ್ಡ್ ಟೊರ್ನಾಡೊಕೃತಿಯ ಲೇಖಕ ಖುಷ್ವಂತ್ ಸಿಂಗ್ ದೃಢಪಡಿಸಿದ್ದಾರೆ.

ಫೌಜಾ ಸಿಂಗ್ಟರ್ಬನ್ಡ್ ಟೊರ್ನಾಡೊ’ ಇನ್ನಿಲ್ಲ!

1911ರಲ್ಲಿ ಜನಿಸಿದ ಫೌಜಾ ಸಿಂಗ್, ತಮ್ಮ 100ಕ್ಕೂ ಹೆಚ್ಚು ವಯಸ್ಸಿನಲ್ಲಿಯೂ ಮ್ಯಾರಥಾನ್ ಓಟಗಾರರಾಗಿ ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದರು. ‘ಟರ್ಬನ್ಡ್ ಟೊರ್ನಾಡೊಎಂದೇ ಜನಪ್ರಿಯರಾಗಿದ್ದ ಅವರು, ತಮ್ಮ ಚುರುಕುತನ, ಚೈತನ್ಯ ಮತ್ತು ಜೀವನದ ಬಗ್ಗೆ ಇದ್ದ ಉತ್ಸಾಹದಿಂದ ಎಲ್ಲರಿಗೂ ಸ್ಫೂರ್ತಿಯಾಗಿದ್ದರು. ಲಂಡನ್, ಟೊರೊಂಟೊ, ನ್ಯೂಯಾರ್ಕ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದ ಫೌಜಾ, ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದ್ದರು.

2011ರಲ್ಲಿ 100 ವರ್ಷದ ಫೌಜಾ ಸಿಂಗ್ ಟೊರೊಂಟೊ ವಾಟರ್‌ಫ್ರಂಟ್ ಮ್ಯಾರಥಾನ್‌ನಲ್ಲಿ 42 ಕಿ.ಮೀ. ಓಡಿದ್ದು, ಗಿನ್ನೆಸ್ ವಿಶ್ವ ದಾಖಲೆಯನ್ನೂ ಸೃಷ್ಟಿಸಿತ್ತು. ಇದೀಗ ಇಂತಹ ಹಿರಿಯ ಆಟಗಾರ ರಸ್ತೆ ಅಪಘಾತದಲ್ಲಿ ಸಾವನಪ್ಪಿರುವುದು ಕ್ರೀಡಾಪಟುಗಳಿಗೆ ದುಃಖದ ಸಂಗತಿಯಾಗಿದೆ.

ರಸ್ತೆ ಅಪಘಾತದಲ್ಲಿ ಫೌಜಾ ಸಿಂಗ್ ನಿಧನ!

ಜಲಂಧರ್‌ನ ಬಿಯಾಸ್ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 3:30ರ ಸುಮಾರಿಗೆ ಫೌಜಾ ಸಿಂಗ್ ರಸ್ತೆ ದಾಟುತ್ತಿದ್ದಾಗ, ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ತಲೆಗೆ ಗಂಭೀರ ಗಾಯಗಳಾದ ಅವರನ್ನು ತಕ್ಷಣ ಜಲಂಧರ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾದರು. ಆದಂಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹರ್ದೇವ್‌ಪ್ರೀತ್ ಸಿಂಗ್ ಪ್ರಕಾರ, ಚಾಲಕ ಘಟನೆಯ ನಂತರ ಪರಾರಿಯಾಗಿದ್ದು, ಆತನ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಪಂಜಾಬ್ ರಾಜ್ಯಪಾಲ ಮತ್ತು ಚಂಡೀಗಢ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ, ಫೌಜಾ ಸಿಂಗ್ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ಶೋಕ ಸಂದೇಶ ಬರೆದಿರುವ ಅವರು, “114ನೇ ವಯಸ್ಸಿನಲ್ಲಿಯೂ ಫೌಜಾ ಸಿಂಗ್ ಅವರು ಅಪ್ರತಿಮ ಉತ್ಸಾಹದಿಂದ ಮಾದಕ ದ್ರವ್ಯ ಮುಕ್ತ, ರಂಗಲಾ ಪಂಜಾಬ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅವರ ಸಾಧನೆ ಮತ್ತು ಪರಂಪರೆ ಪಂಜಾಬ್‌ನ ಯುವಕರಿಗೆ ಸ್ಫೂರ್ತಿಯಾಗಿದೆ,” ಎಂದು ಹೇಳಿದ್ದಾರೆ.

‘ದಿ ಟರ್ಬನ್ಡ್ ಟೊರ್ನಾಡೊ’ ಜೀವನ ಚರಿತ್ರೆ

ಖುಷ್ವಂತ್ ಸಿಂಗ್, ಫೌಜಾ ಸಿಂಗ್ ಅವರ ಜೀವನಗಾಥೆಯನ್ನು ‘ದಿ ಟರ್ಬನ್ಡ್ ಟೊರ್ನಾಡೊ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ದುಃಖದ ಸಂದರ್ಭದಲ್ಲಿ ತಮ್ಮ ಭಾವನೆಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಟರ್ಬನ್ಡ್ ಟೊರ್ನಾಡೊ ಇನ್ನಿಲ್ಲ. ಫೌಜಾ ಸಿಂಗ್ ಅವರ ಸಾವಿನ ಸುದ್ದಿ ತಿಳಿಸಲು ನನಗೆ ತುಂಬಾ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ಬರೆದಿದ್ದಾರೆ. ಅವರು ಫೌಜಾ ಅವರ ಕುಟುಂಬದೊಂದಿಗೆ ಮಾತನಾಡಿ, ಈ ಘಟನೆಯನ್ನು ದೃಢಪಡಿಸಿದ್ದಾರೆ.

ಫೌಜಾ ಸಿಂಗ್, ಮ್ಯಾರಥಾನ್ ಓಟಗಾರ ಮಾತ್ರವಲ್ಲ, ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಸ್ಮರಣೀಯರಾಗಿದ್ದರು. ಅವರು ಮಾದಕ ದ್ರವ್ಯ ವಿರೋಧಿ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 114 ವರ್ಷದ ವಯಸ್ಸಿನಲ್ಲಿಯೂ ಅವರ ಚೈತನ್ಯ ಮತ್ತು ದೃಢಸಂಕಲ್ಪವು ಯುವಕರಿಗೆ ಮಾದರಿಯಾಗಿತ್ತು. ಅವರ ನಿಧನದಿಂದ ಪಂಜಾಬ್ ಮಾತ್ರವಲ್ಲ, ವಿಶ್ವಾದ್ಯಂತ ಅವರನ್ನು ಗೌರವಿಸುತ್ತಿದ್ದವರು ಶೋಕಾಚರಣೆಯಲ್ಲಿದ್ದಾರೆ. ಫೌಜಾ ಸಿಂಗ್ ಅವರ ಸಾಧನೆಗಳು ಮತ್ತು ಜೀವನದ ಉತ್ಸಾಹವು ಎಂದಿಗೂ ಮರೆಯಲಾಗದಂತಹದ್ದು. ಅವರ ಆತ್ಮಕ್ಕೆ ಶಾಂತಿ ಸಿಗಲಿ.